The New Indian Express
ಬೆಂಗಳೂರು: ಬಹು ನಿರೀಕ್ಷಿತ ಹುಲಿ ಗಣತಿ, ಸೈನ್ ಮತ್ತು ಲೈನ್ ಟ್ರಾನ್ಸೆಕ್ಟ್ ಸಮೀಕ್ಷೆ ಕಾರ್ಯ ಜನವರಿ 15 ರಿಂದ ರಾಜ್ಯದ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಪ್ರಾರಂಭವಾಗಲಿದೆ. ಕಳೆದ ಮೂರು ತಿಂಗಳಿನಿಂದ ಬಾಕಿ ಉಳಿದಿರುವ ಕಾರ್ಯ ಫೆಬ್ರವರಿ ಅಂತ್ಯದೊಳಗೆ ಪೂರ್ಣಗೊಂಡು, ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ಮತ್ತು ಭಾರತೀಯ ವನ್ಯಜೀವಿ ಸಂಸ್ಥೆಗೆ ಸಲ್ಲಿಸಲಾಗುತ್ತದೆ.
ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು ಹುಲಿ ದಿನವಾದ ಜುಲೈ 29, 2022 ರಂದು ಅಖಿಲ ಭಾರತ ಹುಲಿ ಗಣತಿ ವರದಿ ಬಿಡುಗಡೆ ಮಾಡುವ ಗುರಿಯನ್ನು ಹೊಂದಿದೆ. ಅಕ್ಟೋಬರ್‌ನಲ್ಲಿ ಮೀಸಲು ಮತ್ತು ಅಭಯಾರಣ್ಯಗಳಲ್ಲಿ ಕ್ಯಾಮರಾ ಮೂಲಕ ಹುಲಿ ಸೆರೆ ಹಿಡಿಯುವ ಕಾರ್ಯ ಆರಂಭಿಸಿದ್ದರಿಂದ ಹುಲಿ ಗಣತಿ ಕಾರ್ಯ ಸ್ವಲ್ಪ ತಡವಾಗಿದೆ.
ಉಳಿದಿರುವ ಸೈನ್ ಮತ್ತು ಲೈನ್ ಟ್ರಾನ್ಸೆಕ್ಟ್ ಸಮೀಕ್ಷೆ ಕಾರ್ಯವನ್ನು ಜನವರಿ 15 ರಿಂದ ಆರಂಭಿಸುತ್ತೇವೆ, ಹುಲಿ ಸಂರಕ್ಷಿತ ಪ್ರದೇಶಗಳು ಮತ್ತಿತರ ಪ್ರದೇಶಗಳಲ್ಲಿ ಇದನ್ನು ಈ ತಿಂಗಳೊಳಗೆ ಪೂರ್ಣಗೊಳಿಸುತ್ತೇವೆ, ಇತರ ಅರಣ್ಯ ಪ್ರದೇಶಗಳಲ್ಲಿನ ಕಾರ್ಯ ಫೆಬ್ರವರಿ ಮಧ್ಯಭಾಗದಲ್ಲಿ ಪೂರ್ಣಗೊಳ್ಳಲಿದೆ. ಈ ಸಮಯದಲ್ಲಿ ಯಾವುದೇ ಸ್ವಯಂಸೇವಕರು ಬೇಕಾಗುವುದಿಲ್ಲ ಎಂದು ಹಿರಿಯ ಅರಣ್ಯ ಇಲಾಖೆಯ ಅಧಿಕಾರಿಯೊಬ್ಬರು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದರು.
ಆದರೆ ಕೋವಿಡ್ ಭೀತಿ ಅರಣ್ಯ ಇಲಾಖೆ ಸಿಬ್ಬಂದಿಯನ್ನು ಆವರಿಸಿದೆ. ಅನೇಕ ತಾಂತ್ರಿಕ ಸಮಸ್ಯೆಗಳಿದ್ದು, ಅವುಗಳನ್ನು ಕೇಂದ್ರ ಮಟ್ಟದಲ್ಲಿ ಪರಿಹರಿಸಲಾಗುತ್ತದೆ. ಆ್ಯಪ್ ಬಳಸಿ ಅತ್ಯುತ್ತಮ ದಕ್ಷತೆಯಿಂದ ಹುಲಿ ಗಣತಿ ಕಾರ್ಯ ನಡೆಸುತ್ತೇವೆ. ಈ ಕಾರ್ಯ ವಿಳಂಬವಾಗದಂತೆ ನಿಗದಿತ ಅವಧಿಯಲ್ಲಿ ಮುಗಿಸುವುದಾಗಿ ಅವರು ಹೇಳಿದರು.
Read more
[wpas_products keywords=”deal of the day”]