Karnataka news paper

ಸಾರ್ವಜನಿಕರ ಗಮನಕ್ಕೆ.. ಜನವರಿ 6 ಗುರುವಾರ ಬೆಂಗಳೂರಿನಲ್ಲಿ ಕಾವೇರಿ ನೀರು ಪೂರೈಕೆ ಇಲ್ಲ


ಹೈಲೈಟ್ಸ್‌:

  • ಜನವರಿ 6 ರಂದು ಮಧ್ಯರಾತ್ರಿ 12.30ರಿಂದ ರಾತ್ರಿ 11.30ರವರೆಗೆ ನೀರಿಲ್ಲ
  • ಸಾರ್ವಜನಿಕರು ಸಹಕರಿಸಬೇಕೆಂದು ಬೆಂಗಳೂರು ಜಲಮಂಡಳಿ ಮನವಿ
  • ಜಲ ಶುದ್ಧೀಕರಣ ಘಟಕ ನಿರ್ಮಾಣದ ಚಾಲನಾ ಕಾಮಗಾರಿ ಮತ್ತು ಜೋಡಣಾ ಕಾಮಗಾರಿ ನಡೆಯಲಿದೆ

ಬೆಂಗಳೂರು: ತುರ್ತು ಕಾಮಗಾರಿ ಹಿನ್ನೆಲೆಯಲ್ಲಿ ಜನವರಿ 6 ರಂದು ಮಧ್ಯರಾತ್ರಿ 12.30ರಿಂದ ರಾತ್ರಿ 11.30ರವರೆಗೆ ‘ಕಾವೇರಿ ನೀರು‘ ಪೂರೈಕೆಯಲ್ಲಿ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಬೆಂಗಳೂರು ಜಲಮಂಡಳಿ (ಬಿಡಬ್ಲ್ಯೂಎಸ್‌ಎಸ್‌ಬಿ) ಕೋರಿದೆ.

ಟಿ. ಕೆ. ಹಳ್ಳಿಯಲ್ಲಿರುವ ಕಾವೇರಿ ನೀರು ಸರಬರಾಜು ಯೋಜನೆಯ ಒಂದು ಮತ್ತು 2ನೇ ಹಂತದ ಹಾಲಿ ಇರುವ ಘಟಕದ ಬದಲಾಗಿ 300 ಎಂಎಲ್‌ಡಿ ಜಲ ಶುದ್ಧೀಕರಣ ಘಟಕ ನಿರ್ಮಾಣದ ಚಾಲನಾ ಕಾಮಗಾರಿ ಮತ್ತು ಜೋಡಣಾ ಕಾಮಗಾರಿಗಳನ್ನು ಕೈಗೆತ್ತಿಕೊಂಡಿರುವುದರಿಂದ ಕೆಳಕಂಡ ಪ್ರದೇಶಗಳಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ತಿಳಿಸಿದೆ.

ನೀರು ವ್ಯತ್ಯಯವಾಗಲಿರುವ ಬಡಾವಣೆಗಳು: ನಗರದ ನ್ಯೂ ಬಿನ್ನಿ ಲೇಔಟ್‌, ವಿದ್ಯಾಪೀಠ, ಗುರುರಾಜ್‌ ಲೇಔಟ್‌, ವಿವೇಕಾನಂದ ನಗರ, ಕತ್ರಿಗುಪ್ಪೆ, ತ್ಯಾಗರಾಜ ನಗರ, ಬಸವನ ಗುಡಿ, ಮೌಂಟ್‌ ಜಾಯ್‌ ಎಕ್ಸ್‌ಟೆನ್ಷನ್‌, ಕುಮಾರಸ್ವಾಮಿ ಲೇಔಟ್‌, ಇಸ್ರೋ ಲೇಔಟ್‌, ದೊಮ್ಮಲೂರು, ಅಮರಜ್ಯೋತಿ ಲೇಔಟ್‌, ಆಡುಗೋಡಿ, ಕೋರಮಂಗಲ, ಕೆಎಚ್‌ಬಿ ಕಾಲೊನಿ, ಜಯನಗರ, ತಿಲಕ್‌ನಗರ, ಕಸ್ತೂರ ಬಾ ನಗರ, ಹೊಸ ಗುಡ್ಡದಹಳ್ಳಿ, ಬಾಪೂಜಿ ನಗರ, ಕಲಾಸಿ ಪಾಳ್ಯ, ಬಡಾ ಮಕಾನ್‌ ರಸ್ತೆ, ಸುಧಾಮ ನಗರ, ಕೆ. ಜಿ. ನಗರ, ಅಜಾದ್‌ ನಗರ, ಪಾದರಾಯನಪುರ, ಜೆ. ಜೆ. ಆರ್‌. ನಗರ, ರಂಗನಾಥ್‌ ಕಾಲೊನಿ, ಸಿದ್ದಾರ್ಥ ನಗರ, ದೇವಗಿರಿ, ಯಡಿಯೂರು, ಕರಿಸಂದ್ರ, ಬನಗಿರಿ ನಗರ, ಕಾಮಾಕ್ಯ ಲೇಔಟ್‌, ಇಟ್ಟಮಡು, ಹೊಸಕೆರೆ ಹಳ್ಳಿ, ದ್ವಾರಕಾ ನಗರ, ಪದ್ಮನಾಭ ನಗರ, ಉತ್ತರಹಳ್ಳಿ, ಚಿಕ್ಕಲ್ಲಸಂದ್ರ, ರಾಮಂಜನೇಯ ನಗರ, ಪಿ. ಪಿ. ಲೇಔಟ್‌, ಶಾಂತಿ ನಗರ, ಭೈರಸಂದ್ರ, ಆರ್‌ಬಿಐ ಕಾಲೋನಿ, ಹೊಂಬೇಗೌಡ ನಗರ, ಸಿದ್ದಾಪುರ, ವಿಲ್ಸನ್‌ ಗಾರ್ಡನ್‌, ಲಕ್ಕಸಂದ್ರ, ಜೆ. ಪಿ. ನಗರ, ಗಾಂಧಿ ನಗರ, ವಸಂತ ನಗರ, ಹೈಗ್ರೌಂಡ್ಸ್‌ ಪ್ರದೇಶಗಳಲ್ಲಿ ನೀರು ಪೂರೈಕೆ ಇರುವುದಿಲ್ಲ.

ಬಿಬಿಎಂಪಿ ವ್ಯಾಪ್ತಿಯ 110 ಹಳ್ಳಿಗಳಿಗೆ ನೀರಿನ ಭಾಗ್ಯ; ಕಾವೇರಿ 5ನೇ ಹಂತದ ಯೋಜನೆಯಲ್ಲಿ ನೀರು ಪೂರೈಕೆ!
ಸಂಪಂಗಿ ರಾಮನಗರ, ಟೌನ್‌ ಹಾಲ್‌, ಲಾಲ್‌ಬಾಗ್‌ ರಸ್ತೆ, ಕಬ್ಬನ್‌ ಪೇಟೆ, ಸುಂಕಲ್‌ ಪೇಟೆ, ಕುಂಬಾರ ಪೇಟೆ, ಕಾಟನ್‌ ಪೇಟೆ, ಚಿಕ್ಕಪೇಟೆ, ಭಾರತಿನಗರ, ಸೇಂಟ್‌ ಜಾನ್ಸ್‌ ರಸ್ತೆ, ಇನ್‌ಫೆಂಟ್ರಿ ರೋಡ್‌, ಶಿವಾಜಿ ನಗರ, ಫ್ರೇಜರ್‌ ಟೌನ್‌ ಸೇವಾ ಠಾಣೆಯಡಿಯ ಪ್ರದೇಶಗಳು, ಎಂ. ಎಂ. ರಸ್ತೆ, ಬ್ಯಾಡರಹಳ್ಳಿ, ನೇತಾಜಿ ರಸ್ತೆ, ಕೋಲ್ಸ್‌ ರಸ್ತೆ, ಕಾಕ್ಸ್‌ ಟೌನ್‌, ವಿವೇಕಾನಂದ ನಗರ, ಮಾರುತಿ ಸೇವಾ ನಗರ. ಪಿ. ಟಿ. ಕಾಲೋನಿ, ಡಿ. ಜೆ. ಹಳ್ಳಿ, ನಾಗವಾರ, ಸಮಾಧಾನ ನಗರ, ಪಿಳ್ಳಣ್ಣ ಗಾರ್ಡನ್‌ 1, 2 ಮತ್ತು 3ನೇ ಹಂತ, ಲಿಂಗರಾಜಪುರ, ಚಾಮರಾಜಪೇಟೆ, ಬ್ಯಾಂಕ್‌ ಕಾಲೋನಿ, ಗವಿ ಪುರಂ, ಹನುಮಂತ ನಗರ, ಗಿರಿ ನಗರ, ಬ್ಯಾಟರಾಯನ ಪುರ, ನೀಲಸಂದ್ರ, ಅವಲಹಳ್ಳಿ, ಶ್ರೀನಗರ, ಬನಶಂಕರಿ, ಯಶವಂತಪುರ, ಮಲ್ಲೇಶ್ವರಂ, ಕುಮಾರ ಪಾರ್ಕ್, ಜಯಮಹಲ್‌, ಶೇಷಾದ್ರಿಪುರಂ, ಸದಾಶಿವನಗರ, ಪ್ಯಾಲೇಸ್‌ ಗುಟ್ಟಹಳ್ಳಿ, ಸಂಜಯನಗರ, ಡಾಲರ್ಸ್‌ ಕಾಲೋನಿ, ಗೆದ್ದಲಹಳ್ಳಿ, ಭೂಪಸಂದ್ರ, ಕಾವಲ್‌ ಬೈರಸಂದ್ರ, ಆರ್‌. ಟಿ. ನಗರ, ಆನಂದ ನಗರ, ಸುಲ್ತಾನ್‌ ಪಾಳ್ಯ, ಎಂ. ಜಿ. ರೋಡ್‌, ಎಚ್‌ಎಎಲ್‌ 2ನೇ ಹಂತ, ಇಂದಿರಾ ನಗರ, ಜೀವನ್‌ ಬಿಮಾನಗರ, ಹಲಸೂರು, ಜೋಗುಪಾಳ್ಯ, ಧೀನಬಂಧು ನಗರ, ಎಸ್‌. ಪಿ. ರೋಡ್‌, ಎಸ್‌. ಜೆ. ಪಿ. ರೋಡ್‌, ಓ. ಟಿ. ಪೇಟೆ, ಜಾಲಿ ಮೊಹಲ್ಲಾ, ಪಿ. ವಿ. ಆರ್‌. ರಸ್ತೆ, ಕೆ. ಜಿ. ಹಳ್ಳಿ, ಬಿ. ಟಿ. ಎಂ. ಲೇಔಟ್‌, ಮಡಿವಾಳ, ಡೇರಿ ಸರ್ಕಲ್‌, ಮಾರುತಿ ನಗರ, ನೇತಾಜಿ ನಗರ, ನಿಮ್ಹಾನ್ಸ್‌ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.

ಕಾವೇರಿ ನೀರು ಸರಬರಾಜು ಯೋಜನೆಯ 1, 2 ಮತ್ತು 3ನೇ ಘಟ್ಟದಡಿ ನೀರು ಸರಬರಾಜಾಗುವ ಪ್ರದೇಶಗಳ ಸಂಪೂರ್ಣ ವಿವರವನ್ನು ಮಂಡಳಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.

ಸಾರ್ವಜನಿಕರ ಗಮನಕ್ಕೆ.. ಬೆಂಗಳೂರು ನಗರದ ಹಲವೆಡೆ ಬುಧವಾರ ಕಾವೇರಿ ನೀರು ಬರಲ್ಲ..!



Read more

[wpas_products keywords=”deal of the day sale today offer all”]