Karnataka news paper

ಕತ್ರಿನಾ ಕೈಫ್ ಅವರ ವಜ್ರಖಚಿತ ಮಾಂಗಲ್ಯ ಸರದ ಬೆಲೆ ಎಷ್ಟಿರಬಹುದು ಊಹಿಸಿ..


ಹೈಲೈಟ್ಸ್‌:

  • ತಮ್ಮ ಫೋಟೋಗಳನ್ನು ಹಂಚಿಕೊಂಡ ನಟಿ ಕತ್ರಿನಾ ಕೈಫ್
  • ಕತ್ರಿನಾ ಕೈಫ್ ಧರಿಸಿದ್ದ ಮಾಂಗಲ್ಯ ಸರದ ಬೆಲೆ ಎಷ್ಟು ಗೊತ್ತಾ?
  • ಕತ್ರಿನಾ ಕೈಫ್ ಅವರ ವಜ್ರಖಚಿತ ಮಂಗಳಸೂತ್ರದ ಬೆಲೆ ಬರೋಬ್ಬರಿ 5 ಲಕ್ಷ ರೂಪಾಯಿ

ಬಾಲಿವುಡ್‌ನ ಬಹುಬೇಡಿಕೆಯ ನಟಿ ಕತ್ರಿನಾ ಕೈಫ್ ಇತ್ತೀಚೆಗಷ್ಟೇ ವೈವಾಹಿಕ ಬದುಕಿಗೆ ನಾಂದಿ ಹಾಡಿದ್ದರು. ನಟ ವಿಕ್ಕಿ ಕೌಶಲ್ ಜೊತೆಗೆ ಕತ್ರಿನಾ ಕೈಫ್ ಅವರ ವಿವಾಹ ಮಹೋತ್ಸವ ರಾಯಲ್ ಆಗಿ ನಡೆದಿತ್ತು. ರಾಜಸ್ಥಾನದ ಐತಿಹಾಸಿಕ ಕೋಟೆಯಲ್ಲಿ ವಿಕ್ಕಿ ಕೌಶಲ್ ಹಾಗೂ ಕತ್ರಿನಾ ಕೈಫ್ ಅವರ ಕಲ್ಯಾಣ ನೆರವೇರಿತ್ತು. ಮದುವೆಯಾದ ಬಳಿಕ ಸಿನಿಮಾ ಕೆಲಸಗಳಲ್ಲಿ ಕತ್ರಿನಾ ಕೈಫ್ ಹಾಗೂ ವಿಕ್ಕಿ ಕೌಶಲ್ ಬಿಜಿಯಾಗಿದ್ದರು.

ಕ್ರಿಸ್ಮಸ್ ಹಾಗೂ ಹೊಸ ವರ್ಷವನ್ನು ದಂಪತಿ ಕತ್ರಿನಾ ಕೈಫ್ ಹಾಗೂ ವಿಕ್ಕಿ ಕೌಶಲ್ ಒಟ್ಟಿಗೆ ಆಚರಿಸಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುವ ಕತ್ರಿನಾ ಕೈಫ್ ಆಗಾಗ ತಮ್ಮ ಫೋಟೋಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ಸದ್ಯ ಕತ್ರಿನಾ ಕೈಫ್ ತಮ್ಮ ಮನೆಯಲ್ಲಿ ಕೂತಿರುವ ಫೋಟೋಗಳನ್ನು ಇನ್ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಚಿತ್ರಗಳು: ಮದರಂಗಿಯ ರಂಗಿನಲ್ಲಿ ವಿಕ್ಕಿ ಕೌಶಲ್ ಹಾಗೂ ಕತ್ರಿನಾ ಕೈಫ್

ಆ ಫೋಟೋಗಳಲ್ಲಿ ಕತ್ರಿನಾ ಕೈಫ್ ಅವರ ಮಾಂಗಲ್ಯ ಸರ ಎಲ್ಲರ ಕಣ್ಣು ಕುಕ್ಕುತ್ತಿದೆ. ಚಿನ್ನದ ಗುಂಡು ಹಾಗೂ ಕರಿಮಣಿಗಳನ್ನು ಹೊಂದಿರುವ ಈ ಮಂಗಳಸೂತ್ರ ಸಬ್ಯಸಾಚಿಯ ಬೆಂಗಾಲ್ ಟೈಗರ್ ಕಲೆಕ್ಷನ್‌ನದ್ದು. ಎರಡು ಡ್ರಾಪ್ ಡೌನ್ ವಜ್ರಗಳು ಇರುವ ಮಾಂಗಲ್ಯ ಸರದ ಬೆಲೆ ಎಷ್ಟು ಗೊತ್ತಾ? ಕತ್ರಿನಾ ಕೈಫ್ ಅವರ ವಜ್ರಖಚಿತ ಮಾಂಗಲ್ಯ ಸರದ ಬೆಲೆ ಬರೋಬ್ಬರಿ 5 ಲಕ್ಷ ರೂಪಾಯಿ ಎಂದು ವರದಿಯಾಗಿದೆ.

ಚಿತ್ರಗಳು: ಅರಿಶಿನದಲ್ಲಿ ಮಿಂದೆದ್ದ ನವ ಜೋಡಿ ವಿಕ್ಕಿ ಕೌಶಲ್ ಹಾಗೂ ಕತ್ರಿನಾ ಕೈಫ್

ನಿಶ್ಚಿತಾರ್ಥದ ಉಂಗುರದ ಬೆಲೆಯೂ ದುಬಾರಿ!
ತಮ್ಮ ಮದುವೆಗೆ ವಜ್ರಖಚಿತ ನೀಲಮಣಿಯ ಉಂಗುರವನ್ನು ಕತ್ರಿನಾ ಕೈಫ್ ಧರಿಸಿದ್ದರು. ಅದೇ ಅವರ ಎಂಗೇಜ್‌ಮೆಂಟ್ ರಿಂಗ್ ಎನ್ನಲಾಗಿದೆ. ನೀಲಮಣಿ (ಸಫೈರ್) ಮತ್ತು ವಜ್ರಗಳನ್ನು ಒಳಗೊಂಡಿರುವ ಕತ್ರಿನಾ ಕೈಫ್ ಅವರ ನಿಶ್ಚಿತಾರ್ಥದ ಉಂಗುರ ಪ್ರಿನ್ಸೆಸ್ ಡಯಾನಾ ಅವರ ಐಕಾನಿಕ್ ನೀಲಮಣಿ ಉಂಗುರದಿಂದ ಪ್ರೇರಿತವಾಗಿದೆ. ಕತ್ರಿನಾ ಕೈಫ್ ತೊಟ್ಟಿದ್ದ ವಜ್ರಖಚಿತ ನೀಲಮಣಿಯ ಉಂಗುರದ ಬೆಲೆ ಎಷ್ಟು ಗೊತ್ತಾ? 7.41 ಲಕ್ಷ ರೂಪಾಯಿ ಎಂದು ವರದಿಯಾಗಿತ್ತು.

ಪ್ರಿನ್ಸೆಸ್ ಡಯಾನಾರ ಉಂಗುರದಿಂದ ಸ್ಫೂರ್ತಿ ಪಡೆದ ಕತ್ರಿನಾರ ನಿಶ್ಚಿತಾರ್ಥದ ರಿಂಗ್‌ನ ಬೆಲೆ ಇಷ್ಟೊಂದಾ.!

ಮದುವೆಗೆ ಕತ್ರಿನಾ ಕೈಫ್ ತೊಟ್ಟಿದ್ದ ಲೆಹೆಂಗಾದ ಬೆಲೆ ಎಷ್ಟು?
ರಾಜಸ್ಥಾನದ ಐತಿಹಾಸಿಕ ಬಾರ್ವಾರ ಕೋಟೆಯಲ್ಲಿ ವಿಕ್ಕಿ ಕೌಶಲ್ ಹಾಗೂ ಕತ್ರಿನಾ ಕೈಫ್ ಅವರ ಕಲ್ಯಾಣ ಮಹೋತ್ಸವ ಜರುಗಿತ್ತು. ಪಂಜಾಬಿ ಸಂಪ್ರದಾಯದಂತೆ ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ಅವರ ಮದುವೆ ನಡೆದಿತ್ತು. ಮದುವೆಗೆ ವರ ವಿಕ್ಕಿ ಕೌಶಲ್ ಐವೆರಿ ಹಾಗೂ ಗೋಲ್ಡ್ ಬಣ್ಣದ ಶೇರ್ವಾನಿ ತೊಟ್ಟಿದ್ದರು. ಇನ್ನೂ, ವಧು ಕತ್ರಿನಾ ಕೈಫ್ ಕೆಂಪು ಬಣ್ಣದ ಸಬ್ಯಸಾಚಿ ಲೆಹೆಂಗಾ ಧರಿಸಿದ್ದರು. ವರದಿಗಳ ಪ್ರಕಾರ, ಕತ್ರಿನಾ ಕೈಫ್ ಧರಿಸಿದ್ದ ಕೆಂಪು ಬಣ್ಣದ ಲೆಹೆಂಗಾದ ಬೆಲೆ ಬರೋಬ್ಬರಿ 17 ಲಕ್ಷ ರೂಪಾಯಿ.



Read more

[wpas_products keywords=”deal of the day party wear dress for women stylish indian”]