The New Indian Express
ರಾಂಚಿ: ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ ಎನ್ನುವ ಗಾದೆಯನ್ನು ಸರಿಯಾಗಿ ಅರ್ಥ ಮಾಡಿಕೊಂಡ ಚತ್ತೀಸ್ ಗಢದ ಐಪಿಎಸ್ ಅಧಿಕಾರಿಯೋರ್ವರು ಶಾಲಾ ಮಕ್ಕಳಿಗೆ ಕಾನೂನು ಮತ್ತು ಸಂಹಿತೆ ಕುರಿತು ಅರಿವು ಮತ್ತು ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ.
ಇದನ್ನೂ ಓದಿ: ಪುಡಿಗಾಸು ಕಡಲೆಕಾಯಿ ಸಾಲ ಹಿಂದಿರುಗಿಸಲು ಅಮೆರಿಕದಿಂದ ಭಾರತಕ್ಕೆ ಹಾರಿಬಂದ ಅಣ್ಣ ತಂಗಿ
‘ಖಾಕಿ ಕೆ ರಂಗ್ ಸ್ಕೂಲ್ ಕೆ ಸಂಗ್’ ಎನ್ನುವ ವಿನೂತನ ಶಾಲಾ ಕಾರ್ಯಕ್ರಮವನ್ನು ಐಪಿಎಸ್ ಅಧಿಕಾರಿ ಭೋಜ್ ರಾಮ್ ಪಟೇಲ್ ಅವರು ಪ್ರಾರಂಭಿಸಿದ್ದಾರೆ.
ಇದನ್ನೂ ಓದಿ: ‘ಬೆಂಗಳೂರಿನ ಆದಾಯ ತೆರಿಗೆ ಇಲಾಖೆ ಅಧಿಕಾರಿಯಿಂದ ವಿಶಿಷ್ಟ ಹೊಸ ವರ್ಷದ ಕ್ಯಾಲೆಂಡರ್, ಗ್ರೀಟಿಂಗ್ ಕಾರ್ಡ್ ಸೃಷ್ಟಿ!
ಕುಗ್ರಾಮವೊಂದರಲ್ಲಿ ಶಾಲಾಶಿಕ್ಷಕರಾಗಿ ವೃತ್ತಿ ಆರಂಭಿಸಿದ್ದ ಐಪಿಎಸ್ ಅಧಿಕಾರಿ ಭೋಜ್ ರಾಮ್ ಪಟೇಲ್ ಅವರ ಜೀವನಗಾಥೆ ಎಂಥವರಿಗೂ ಮಾದರಿ. ಸಮಾಜ ಮತ್ತು ಪೊಲೀಸ್ ಇಲಾಖೆ ನಡುವೆ ಸಮನ್ವಯತೆ ಕೊರತೆ ಇದೆ ಎನ್ನುವುದನ್ನು ಅವರು ಒಪ್ಪಿಕೊಳ್ಳುತ್ತಾರೆ. ಹೀಗಾಗಿಯೇ ತಾವು ಈ ಕಾರ್ಯಕ್ರಮವನ್ನು ಪ್ರಾರಂಭಿಸಿದ್ದು ಎಂದು ಅವರು ಹೇಳುತ್ತಾರೆ.
ಇದನ್ನೂ ಓದಿ: 1 ಗಂಟೆಯಲ್ಲಿ ಅತಿ ಹೆಚ್ಚು ಜನರಿಗೆ ಮೆಹಂದಿ ಹಚ್ಚಿದ ಭಾರತದ ಯುವತಿ: ಪಾಕ್ ಮಹಿಳೆಯ ಗಿನ್ನೆಸ್ ದಾಖಲೆ ಧೂಳಿಪಟ
ಮಕ್ಕಳಿಗೆ ಕಾನೂನು ಕುರಿತಾದ ತಿಳಿವಳಿಕೆ ಹೇಳುವುದರಿಂದ ಮುಂದೆ ಸಮಾಜದಲ್ಲಿ ಅಪರಾಧಗಳ ಪ್ರಮಾಣ ತಗ್ಗುತ್ತದೆ ಅಲ್ಲದೆ ಆ ಕುರಿತು ಜಾಗೃತಿ ಮೂಡುತ್ತದೆ ಎಂದು ಅವರು ಆತ್ಮವಿಶ್ವಾಸದಿಂದ ಹೇಳುತ್ತಾರೆ.
ಇದನ್ನೂ ಓದಿ: ತಿರುಚ್ಚಿ: 24 ಗಂಟೆ ತೆರೆದಿರುವ ಈ ರೈಲ್ವೇ ಕೌಂಟರಿನಲ್ಲಿ ಯೂಸ್ ಅಂಡ್ ಥ್ರೋ ಬೆಡ್ ಶೀಟ್ ಮಾರಾಟ
ಈ ಕಾರ್ಯಕ್ರಮದಲ್ಲಿ ಕಾನೂನು ಮಾತ್ರವಲ್ಲದೆ, ಆರೋಗ್ಯ, ಮಾದಕ ವ್ಯಸನ, ಆತ್ಮರಕ್ಷಣಾ ಕಲಿಕೆ ಸೇರಿದಂತೆ ಹಲವು ವಿಚಾರಗಳ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ.
ಇದನ್ನೂ ಓದಿ: ಕನ್ನಡ ನಾಡಿನ ಸಮಾಜಮುಖಿ ಸೆಲಬ್ರಿಟಿಗಳು: ಕರ್ತವ್ಯಕ್ಕೂ ಜೈ ಸೇವೆಗೂ ಸೈ
Read more
[wpas_products keywords=”deal of the day”]