Karnataka news paper

ನೂರು ಕೇಸ್ ಆಗಲಿ, ನೂರು ಬಾರಿ ಜೈಲಿಗೆ ಕಳಿಸಲಿ; ಹೆದರಲ್ಲ! ಡಿಕೆಶಿ



ಬೆಂಗಳೂರು: ನೂರು ಕೇಸ್ ಆಗಲಿ, ನೂರು ಬಾರಿ ಜೈಲಿಗೆ ಕಳಿಸಲಿ ನಾವು ಹೆದರಲ್ಲ! ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ. ಮೇಕೆದಾಟು ಪಾದಯಾತ್ರೆಯಿಂದ ಕೋವಿಡ್ ಹರಡಿಸಿದರೆ ಅದರ ಹೊಣೆ ಹೊತ್ತುಕೊಳ್ಳಬೇಕು ಎಂಬ ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿ,ಸುಧಾಕರ್ ಅವರು, ಕೇಂದ್ರದಿಂದ ರಾಜ್ಯಕ್ಕೆ ಸಿಗಬೇಕಾದ ಪರಿಹಾರದ ಮೊತ್ತವನ್ನು ಮೊದಲು ವಸೂಲಿ ಮಾಡಲಿ. ಏರ್ ಪೋರ್ಟ್ ನಲ್ಲಿ ಪ್ರಯಾಣಿಕರ ಮೇಲೆ ಕಿರುಕುಳ ನಡೆಯುತ್ತಿದೆ. ಮೊದಲು ಸುಧಾಕರ್ ಅದನ್ನು ಸರಿಪಡಿಸಲಿ. ನಮ್ಮ ಪಾದಯಾತ್ರೆ ನಡೆಯುತ್ತದೆ ಎಂದರು‌.

ಈ ಹಿಂದೆ ಪೆಟ್ರೋಲ್ ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ ನಡೆಸಿದ್ದಕ್ಕಾಗಿ ನಮ್ಮ ಮೇಲೆ ಕೇಸ್ ಹಾಕ್ತಾರೆ. ಅವರು ಮದುವೆಗಳಿಗೆ ಹೋಗಿದ್ದರು, ಸಮಾವೇಶಗಳಿಗೆ ಹೋಗಿದ್ದರು ಅವರ ಮೇಲೆ ಯಾಕೆ ಪ್ರಕರಣ ದಾಖಲಿಸಿಲ್ಲ? ಮುಖ್ಯಮಂತ್ರಿಯ ಮೇಲೆ ಏಕೆ ಪ್ರಕರಣ ದಾಖಲಿಸಿಲ್ಲ? ಎಂದು ಪ್ರಶ್ನಿಸಿದರು.

ಇನ್ನು ಇದೇ ಸಂದರ್ಭದಲ್ಲಿ ಡಿಕೆ ಸಹೋದರರ ವಿರುದ್ಧ ಬಿಜೆಪಿ ಪ್ರತಿಭಟನೆಗೆ ಪ್ರತಿಕ್ರಿಯೆ ನೀಡಿ,ರಾಜ್ಯ ಅಲ್ಲ ದೇಶಾದ್ಯಂತ ಹೋರಾಟ ಮಾಡಲಿ. ಬಹಳ ಒಳ್ಳೆಯ ನುಡಿಮುತ್ತುಗಳನ್ನು ಒಬ್ಬ ಮಂತ್ರಿ ವೇದಿಕೆಯಲ್ಲಿ ಮಾತನಾಡಿದ್ದಾರೆ.

ಅದನ್ನು ಸಿಎಂ ಬಸವರಾಜ ಬೊಮ್ಮಾಯಿ, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸೇರಿದಂತೆ ಬಿಜೆಪಿ ಮುಖಂಡರು ಸಮರ್ಥಿಸಿಕೊಂಡಿದ್ದಾರೆ. ಇನ್ನಷ್ಟು ಬಿರುದು, ಪ್ರಮೋಷನ್ ಗಳನ್ನು ನೀಡಿ ಮತ್ತಷ್ಟು ಕೆಲಸ ಮಾಡಲಿ ಎಂದು ಹೇಳಲಿ ಎಂದು ಕಿಡಿಕಾರಿದರು. ಅಷ್ಟೇ ಅಲ್ಲ ವೇದಿಕೆಯಲ್ಲಿ ಸಚಿವರ ಸಂಸ್ಕೃತಿ ವಿಶ್ವರೂಪ ದರ್ಶನ ಆಯಿತು ಎಂದರು.



Read more

[wpas_products keywords=”deal of the day sale today offer all”]