Online Desk
ಜೋಹಾನ್ಸ್ ಬರ್ಗ್: ದಕ್ಷಿಣ ಆಫ್ರಿಕಾ ಬೌಲರ್ ಗಳ ದಾಳಿಗೆ ತತ್ತರಿಸಿದ ಟೀಂ ಇಂಡಿಯಾ ಬ್ಯಾಟ್ಸ್ ಮನ್ ಗಳು ಕೇವಲ 202ರನ್ ಗಳಿಗೆ ಆಲೌಟ್ ಆಗಿದೆ.
ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯ 2ನೇ ಪಂದ್ಯದಲ್ಲಿ ಟೀಮ್ ಇಂಡಿಯಾ ಕಳಪೆ ಬ್ಯಾಟಿಂಗ್ ಪ್ರದರ್ಶಿಸಿದ್ದು ಕೇವಲ 202 ರನ್ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿದೆ. ಈ ಮೂಲಕ ದಕ್ಷಿಣ ಆಫ್ರಿಕಾ ತಂಡದ ಬೌಲರ್ಗಳು ಮೊದಲ ಇನ್ನಿಂಗ್ಸ್ನಲ್ಲಿ ಸಂಪೂರ್ಣ ಮೇಲುಗೈ ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಟೀಮ್ ಇಂಡಿಯಾ ಪರವಾಗಿ ನಾಯಕ ಕೆಎಲ್ ರಾಹುಲ್ ಹಾಗೂ ಆರ್ ಅಶ್ವಿನ್ ರನ್ನು ಹೊರತು ಪಡಿಸಿದರೆ ಮತ್ತಾವ ಬ್ಯಾಟ್ಸ್ ಮನ್ ಕೂಡ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಲಿಲ್ಲ. ಅಗ್ರ ಕ್ರಮಾಂಕ ಹಾಗೂ ಮಧ್ಯಮ ಕ್ರಮಾಂಕದ ಎಲ್ಲಾ ಆಟಗಾರರು ಕೂಡ ಕಳಪೆ ಪ್ರದರ್ಶನ ನೀಡಿದ್ದು ತಂಡದ ಹಿನ್ನೆಡೆಗೆ ಕಾರಣವಾಯಿತು. ಅಂತಿಮ ಹಂತದಲ್ಲಿ ಅನುಭವಿ ಆರ್ ಅಶ್ವಿನ್ ನೀಡಿದ ಬ್ಯಾಟಿಂಗ್ ಪ್ರದರ್ಶನ ತಂಡದ ಮೊತ್ತ 200ರ ಗಡಿ ದಾಟಲು ಕಾರಣವಾಯಿತು.
ಆರಂಭಿಕ ಆಟಗಾರ ಮಯಾಂಕ್ ಅಗರ್ವಾಲ್ 26, ಮಧ್ಯಮ ಕ್ರಮಾಂಕದ ಪ್ರಮುಖರಾದ ಪೂಜಾರ 3, ರಹಾನೆ ಶೂನ್ಯ, ಹನುಮ ವಿಹಾರಿ 20, ಪಂತ್ 17ರನ್ ಗಳಿಸಿದರೆ ಕೆಳ ಕ್ರಮಾಂಕದಲ್ಲಿ ಠಾಕೂರ್ ಶೂನ್ಯ, ಶಮಿ 9, ಸಿರಾಜ್ 1ರನ್ ಗೆ ವಿಕೆಟ್ ಕೈ ಚೆಲ್ಲಿದರು. ಅಶ್ವಿನ್ ರ ಏಕಾಂಗಿ ಹೋರಾಟದ 46ರನ್ ಗಳ ಹೋರಾಟದಿಂದ ಭಾರತ ತಂಡ 200ರ ಗಡಿದಾಟಿತು.
ಉಳಿದಂತೆ ಆಫ್ರಿಕಾ ಪರ ಮಾರ್ಕೋ ಜಾನ್ಸೆನ್ 4 ವಿಕೆಟ್ ಪಡೆದರೆ, ರಬಾಡಾ ಮತ್ತು ಒಲಿವರ್ ತಲಾ 3 ವಿಕೆಟ್ ಪಡೆದರು.
ಆಫ್ರಿಕಾಗೆ ಆರಂಭಿಕ ಆಘಾತ ನೀಡಿದ ಶಮಿ
ಇನ್ನು ಮೊದಲ ಇನ್ನಿಂಗ್ಸ್ ಬ್ಯಾಟಿಂಗ್ ಆರಂಭಿಸಿರುವ ದಕ್ಷಿಣ ಆಫ್ರಿಕಾಗೆ ಮಹಮದ್ ಶಮಿ ಆಘಾತ ನೀಡಿದ್ದು, ಆರಂಭಿಕ ಆಟಗಾರ ಮರಕ್ರಾಮ್ ರನ್ನು ಔಟ್ ಮಾಡಿದ್ದಾರೆ.
Read more…
[wpas_products keywords=”sports items all”]