ಹೈಲೈಟ್ಸ್:
- ಫ್ರಾನ್ಸ್‌ನಲ್ಲಿ ಕನಿಷ್ಠ 12 ಐಎಚ್‌ಒ ಕೋವಿಡ್ ತಳಿ ಪ್ರಕರಣಗಳು ಪತ್ತೆ
- ಆಫ್ರಿಕಾದ ಕ್ಯಾಮರೂನ್ ದೇಶದಿಂದ ಬಂದವರಲ್ಲಿ ಹೊಸ ತಳಿಯ ವೈರಸ್
- B.1.640.2 ತಳಿಗೆ ಐಎಚ್‌ಯು ಎಂದು ಹೆಸರು ಇರಿಸಿದ ವಿಜ್ಞಾನಿಗಳು
- ಓಮಿಕ್ರಾನ್‌ಗಿಂತಲೂ ಅಧಿಕ ರೂಪಾಂತರ ಹಾಗೂ ಪ್ರಸರಣ ಸಾಮರ್ಥ್ಯ
ಹೊಸ ರೂಪಾಂತರಿ B.1.640.2 ತಳಿ ಸೋಂಕಿಗೆ ಐಎಚ್‌ಯು (IHU) ಎಂದು ಹೆಸರು ನೀಡಲಾಗಿದೆ. ಈ ವೈರಸ್ ಅನ್ನು ಐಎಚ್‌ಯು ಮೆಡಿಟರೇನಿ ಇನ್‌ಫೆಕ್ಷನ್ ಸಂಸ್ಥೆಯ ತಜ್ಞರು ಕಂಡುಹಿಡಿದಿದ್ದಾರೆ. ಇದು ಒಮಿಕ್ರಾನ್‌ಗಿಂತಲೂ ಅಧಿಕ, ಅಂದರೆ 46 ರೂಪಾಂತರಗಳನ್ನು ಹೊಂದಿದೆ. ಅಲ್ಲದೆ, ಲಸಿಕೆಯ ವಿರುದ್ಧ ಮತ್ತಷ್ಟು ಪ್ರಭಾವಶಾಲಿಯಾಗಿದೆ. ಜತೆಗೆ ಹೆಚ್ಚು ಪ್ರಸರಣ ಶಕ್ತಿ ಹೊಂದಿದೆ ಎಂದು ಅವರು ತಿಳಿಸಿದ್ದಾರೆ.
ಶಾಲಾ ಕಾಲೇಜುಗಳು ಬಂದ್, ಕಚೇರಿಗಳಲ್ಲಿ ಶೇ 50ರಷ್ಟು ಅವಕಾಶ: ಬಂಗಾಳದಲ್ಲಿ ಮತ್ತೆ ನಿರ್ಬಂಧ
ಮರ್ಸೀಲ್ಲೆಸ್ ಸಮೀಪ ಹೊಸ ತಳಿ ವೈರಸ್‌ನ ಕನಿಷ್ಠ 12 ಪ್ರಕರಣಗಳು ಪತ್ತೆಯಾಗಿವೆ. ಈ ಎಲ್ಲ ಸೋಂಕಿತರು ಆಫ್ರಿಕಾದ ಕ್ಯಾಮರೂನ್ ದೇಶದಿಂದ ಪ್ರಯಾಣ ಮಾಡಿದ್ದವರಾಗಿದ್ದಾರೆ ಎಂದು ಹೇಳಿದ್ದಾರೆ. ಓಮಿಕ್ರಾನ್ ಜಗತ್ತಿನ ಬಹುತೇಕ ದೇಶಗಳಲ್ಲಿ ಹೆಚ್ಚು ಪ್ರಭಾವಶಾಲಿಯಾಗಿ ಹರಡುತ್ತಿದೆ. ಅದರ ಮಧ್ಯೆ ಐಎಚ್‌ಯು ತಳಿಯ ಭೀತಿ ಕೂಡ ಹೆಚ್ಚುತ್ತಿದೆ.
B.1.640.2 ತಳಿ ಸೋಂಕು ಬೇರೆ ದೇಶಗಳಲ್ಲಿ ಕಂಡುಬಂದಿಲ್ಲ. ವಿಶ್ವ ಆರೋಗ್ಯ ಸಂಸ್ಥೆ ಇದರ ಬಗ್ಗೆ ತನಿಖೆಗೆ ಒಳಪಡಿಸುವಷ್ಟು ಗಂಭೀರವಾಗಿ ಇನ್ನೂ ಪರಿಗಣಿಸಿಲ್ಲ. ಮೆಡ್‌ರಿಕ್ಸಿವ್ ಪತ್ರಿಕೆಯಲ್ಲಿ ಈ ಅಧ್ಯಯನ ವರದಿ ಪ್ರಕಟವಾಗಿದೆ.
‘N501Y ಮತ್ತು E484K ಸೇರಿದಂತೆ 14 ಅಮಿನೋ ಆಸಿಡ್ ಪರ್ಯಾಯಗಳು ಹಾಗೂ 9 ರೂಪಾಂತರಗಳು ಸ್ಪೈಕ್ ಪ್ರೋಟೀನ್‌ನಲ್ಲಿ ಪತ್ತೆಯಾಗಿವೆ. ಈ ವಂಶವಾಹಿ ಮಾದರಿಯು B.1.640.2 ಎಂಬ ಹೊಸ ಸಂತತಿಯನ್ನು ಸೃಷ್ಟಿಸಲು ಕಾರಣವಾಗಿದೆ. ಇದು ಹಳೆಯ B.1.640 ಸಂತತಿಯ ಸೋದರ ಸಮೂಹವಾಗಿದೆ’ ಎಂದು ಸಂಶೋಧನಾ ಪತ್ರಿಕೆ ತಿಳಿಸಿದೆ.
ತೆಲಂಗಾಣದಲ್ಲಿ ಒಂದು ವಾರ ‘ಸಂಕ್ರಾಂತಿ ರಜೆ’: ಕೋವಿಡ್ ಹಿನ್ನೆಲೆ ಶಾಲೆ ಕಾಲೇಜುಗಳು ಬಂದ್
ಹೊಸ ತಳಿ ವೈರಸ್‌ಗಳು ಹುಟ್ಟುತ್ತಲೇ ಇರುತ್ತವೆ. ಆದರೆ ಅದರ ಅರ್ಥ ಅವು ಮತ್ತಷ್ಟು ಅಪಾಯಕಾರಿಯೇ ಆಗಿರುತ್ತವೆ ಎಂದಲ್ಲ ಎಂದು ಸಾಂಕ್ರಾಮಿಕ ರೋಗ ತಜ್ಞ ಎರಿಕ್ ಫೀಗಲ್ ಡಿಂಗ್ ತಿಳಿಸಿದ್ದಾರೆ. ತಳಿಗಳು ಮೂಲ ವೈರಸ್ ಜತೆ ಸಂಬಂಧ ಹೊಂದಿರುವುದರಿಂದ ರೂಪಾಂತರಗಳ ಸಂಖ್ಯೆಯ ಕಾರಣಕ್ಕೆ ಅದು ಅಪಾಯಕಾರಿಯಾಗುವ ಸಾಮರ್ಥ್ಯ ಪಡೆದಿರುತ್ತವೆ. ಓಮಿಕ್ರಾನ್‌ನಂತಹ ಹೆಚ್ಚು ಸಾಂಕ್ರಾಮಿಕ ಹಾಗೂ ಪ್ರತಿರಕ್ಷಣಾ ಸಾಮರ್ಥ್ಯವನ್ನು ಕುಗ್ಗಿಸುವಂತಾದರೆ ‘ಆತಂಕದ ತಳಿ’ಯಾಗಿ ಪರಿಣಮಿಸುತ್ತದೆ ಎಂದು ತಿಳಿಸಿದ್ದಾರೆ.
Read more
[wpas_products keywords=”deal of the day”]