Karnataka news paper

ಓಟಿಟಿಯಲ್ಲಿ ‘ಗರುಡ ಗಮನ ವೃಷಭ ವಾಹನ’ ಪ್ರಸಾರಕ್ಕೆ ದಿನಾಂಕ ಫಿಕ್ಸ್; ರಾಜ್ ಬಿ. ಶೆಟ್ಟಿಗೆ ಚಮಕ್ ಕೊಟ್ಟ ಶಿವಣ್ಣ


ಹೈಲೈಟ್ಸ್‌:

  • ರಾಜ್ ಬಿ. ಶೆಟ್ಟಿ, ರಿಷಬ್ ಶೆಟ್ಟಿ ನಟನೆಯ ‘ಗರುಡ ಗಮನ ವೃಷಭ ವಾಹನ’ ಸಿನಿಮಾ
  • ‘ಗರುಡ ಗಮನ ವೃಷಭ ವಾಹನ’ ಸಿನಿಮಾದ ಓಟಿಟಿ ರಿಲೀಸ್‌ ದಿನಾಂಕ ಫಿಕ್ಸ್
  • ‘ಗರುಡ ಗಮನ ವೃಷಭ ವಾಹನ’ ಸಿನಿಮಾಕ್ಕೆ ಸಾಥ್ ನೀಡಿದ ಶಿವರಾಜ್‌ಕುಮಾರ್‌

ರಾಜ್ ಬಿ. ಶೆಟ್ಟಿ ನಿರ್ದೇಶಿಸಿ, ರಿಷಬ್ ಶೆಟ್ಟಿ ಜೊತೆಗೆ ನಟಿಸಿರುವ ‘ಗರುಡ ಗಮನ ವೃಷಭ ವಾಹನ‘ ಸಿನಿಮಾವು ಚಿತ್ರಮಂದಿರದಲ್ಲಿ ನೋಡುಗರನ್ನು ಮೋಡಿ ಮಾಡಿತ್ತು. ಇದೀಗ ಆ ಸಿನಿಮಾವು ಓಟಿಟಿಗೂ ಎಂಟ್ರಿ ಕೊಟ್ಟಿದೆ. ಹೌದು, ಜೀ5ನಲ್ಲಿ ಇದೇ ಜನವರಿ 13ರಿಂದ ಸ್ಟ್ರೀಮ್ ಆಗಲಿದೆ. ಆ ಹಿನ್ನೆಲೆಯಲ್ಲಿ ಶಿವರಾಜ್‌ಕುಮಾರ್ ಅವರು ರಾಜ್ ಬಿ. ಶೆಟ್ಟಿಗೆ ಚಮಕ್ ಕೂಡ ಕೊಟ್ಟಿರುವ ಒಂದು ವಿಡಿಯೋ ಕೂಡ ವೈರಲ್ ಆಗಿದೆ. ಅಷ್ಟಕ್ಕೂ ಏನಿದು ಚಮಕ್? ಮುಂದೆ ಓದಿ.

‘ಮಂಗಳಾದೇವಿಯಲ್ಲಿ ನೀನೇನ್ ದೊಡ್ ಡಾನಾ?’- ಶಿವಣ್ಣ
‘ಗರುಡ ಗಮನ ವೃಷಭ ವಾಹನ’ ಸಿನಿಮಾ ನೋಡಿದವರಿಗೆ ಅದರಲ್ಲಿ ಮಂಗಳಾದೇವಿ ಬಗ್ಗೆ ಗೊತ್ತಿರುತ್ತದೆ. ಅದನ್ನೇ ಮುಖ್ಯವಾಗಿಟ್ಟುಕೊಂಡು ರಾಜ್ ಬಿ. ಶೆಟ್ಟಿಗೆ ಕರೆ ಮಾಡಿದ ಶಿವರಾಜ್‌ಕುಮಾರ್ ‘ಮಂಗಳಾದೇವಿಯಲ್ಲಿ ನೀನೇನ್ ದೊಡ್ ಡಾನಾ? ಬರ್ಲಾ ಆಲ್ಲಿಗೆ..’ ಅಂತ ವಿಡಿಯೋದಲ್ಲಿ ಕೇಳಿದ್ದಾರೆ. ‘ಯಾರು ಮಾತಾಡ್ತಿರೋದು’ ಅಂತ ರಾಜ್‌ ಬಿ. ಶೆಟ್ಟಿ ಕೇಳಿದ್ದಕ್ಕೆ, ‘ಭಜರಂಗಿ’ ಎಂಬ ಉತ್ತರವನ್ನು ನೀಡುತ್ತಾರೆ ಶಿವಣ್ಣ. ಇಬ್ಬರ ಈ ಫೋನ್ ಮಾತುಕಥೆ ನೋಡಲು ಮಜಾವಾಗಿದೆ. ಆ ಮೂಲಕ ಚಿತ್ರವು ಜೀ5ನಲ್ಲಿ ಜನವರಿ 13ರಿಂದ ಸ್ಟ್ರೀಮ್ ಆಗಲಿದೆ ಎಂಬ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ.

ನವೆಂಬರ್ 19ರಂದು ತೆರೆಕಂಡ ‘ಗರುಡ ಗಮನ ವೃಷಭ ವಾಹನ’ ಸಿನಿಮಾವು ನೋಡುಗರಿಂದ ಸಖತ್ ಮೆಚ್ಚುಗೆ ಪಡೆದುಕೊಂಡಿತ್ತು. ‘ಒಂದು ಮೊಟ್ಟೆಯ ಕಥೆ’ ಥರದ ಕಾಮಿಡಿ ಸಿನಿಮಾ ಮಾಡಿದ್ದ ರಾಜ್ ಬಿ. ಶೆಟ್ಟಿ, ಇಂಥದ್ದೊಂದು ಗ್ಯಾಂಗ್‌ಸ್ಟರ್ ಸಿನಿಮಾ ಮಾಡುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ. ಅದರಲ್ಲೂ ಅವರು ಮಾಡಿದ್ದ ಶಿವ ಪಾತ್ರ ಸಖತ್ ರಗಡ್ ಆಗಿ ಮೂಡಿಬಂದಿತ್ತು. ರಾಜ್ ಬಿ. ಶೆಟ್ಟಿ ಮತ್ತು ರಿಷಬ್‌ ಶೆಟ್ಟಿ ಕಾಂಬಿನೇಷನ್ ನೋಡುಗರಿಗೆ ಇಷ್ಟವಾಗಿತ್ತು.

‘ಗರುಡ ಗಮನ ವೃಷಭ ವಾಹನ’ ಡಬ್ಬಿಂಗ್ & ರಿಮೇಕ್‌ ಹಕ್ಕುಗಳಿಗೆ ಭಾರಿ ಬೇಡಿಕೆ! ರಾಜ್ ಬಿ. ಶೆಟ್ಟಿ ಹೇಳಿದ್ದೇನು?

ಸದ್ಯ ಜೀ5ನಲ್ಲಿ ಶಿವರಾಜ್‌ಕುಮಾರ್ ಅವರ ‘ಭಜರಂಗಿ 2’ ಒಳ್ಳೆಯ ಪ್ರಶಂಸೆ ಪಡೆದುಕೊಂಡಿದೆ. ಹಾಗೆಯೇ, ರವಿಚಂದ್ರನ್ ಅವರ ‘ಕನ್ನಡಿಗ’ ಕೂಡ ಸೌಂಡು ಮಾಡಿದೆ. ಈಗ ‘ಗರುಡ ಗಮನ ವೃಷಭ ವಾಹನ’ ಸಿನಿಮಾವೂ ಜೀ5 ಸೇರಿಕೊಂಡಿದೆ. ಅಂದಹಾಗೆ, ‘ಗರುಡ ಗಮನ ವೃಷಭ ವಾಹನ’ ಚಿತ್ರದ ರಿಮೇಕ್‌ ಹಕ್ಕುಗಳಿಗೆ ಪರಭಾಷೆಗಳಿಂದ ಬೇಡಿಕೆ ಬಂದಿದೆ. ತಮಿಳು ರಿಮೇಕ್ ಹಕ್ಕುಗಳನ್ನು ಖ್ಯಾತ ನಿರ್ದೇಶಕ ಗೌತಮ್‌ ವಾಸುದೇವ್ ಮೆನನ್‌ ಪಡೆದುಕೊಂಡಿರುವುದು ವಿಶೇಷ.

ಓಟಿಟಿಯಲ್ಲಿ ರಿಲೀಸ್ ಆಗ್ತಿದೆ ರಾಜ್ ಬಿ ಶೆಟ್ಟಿ, ರಿಷಬ್ ಶೆಟ್ಟಿ ನಟನೆಯ ‘ಗರುಡ ಗಮನ ವೃಷಭ ವಾಹನ’ ಚಿತ್ರ

ರಾಜ್ ಬಿ. ಶೆಟ್ಟಿ, ರಿಷಬ್‌ ಶೆಟ್ಟಿ, ಗೋಪಾಲಕೃಷ್ಣ ದೇಶಪಾಂಡೆ ಮುಂತಾದವರು ನಟಿಸಿರುವ ಈ ಸಿನಿಮಾವನ್ನು ರವಿ ರೈ, ಬಿ.ವಿ. ಕಳಸ, ವಚನ್ ಶೆಟ್ಟಿ, ಶ್ರೀಕಾಂತ್, ವಿಕಾಸ್ ನಿರ್ಮಿಸಿದ್ದರು. ರಕ್ಷಿತ್ ಶೆಟ್ಟಿ ತೆರೆಗೆ ಅರ್ಪಿಸಿದ್ದರು. ಛಾಯಾಗ್ರಹಣ ಮತ್ತು ಸಂಕಲನವನ್ನು ಪ್ರವೀಣ್ ಶ್ರೀಯಾನ್ ಮಾಡಿದ್ದರು. ಮಿಥುನ್ ಮುಕುಂದನ್ ಅವರ ಸಂಗೀತ ಸಂಯೋಜನೆಗೆ ಮೆಚ್ಚುಗೆ ಸಿಕ್ಕಿತ್ತು.

ತೆರೆಮೇಲೆ ಬರಲಿದೆ ಶೆಟ್ಟಿ ಗ್ಯಾಂಗ್‌ನ ಭೂಗತ ಲೋಕದ ಹೊಸ ಕಥೆ!



Read more