ಹೈಲೈಟ್ಸ್:
- ಕೇವಲ ಮೂರು ತಿಂಗಳುಗಳಲ್ಲಿ ಶೇ.57 ರಷ್ಟು ಆದಾಯ ನೀಡಿದ ನೆಟ್‌ವರ್ಕ್ 18 ಮೀಡಿಯಾ ಅಂಡ್ ಇನ್ವೆಸ್ಟ್‌ಮೆಂಟ್
- ಒಂದೇ ವರ್ಷದಲ್ಲಿ ಕಂಪನಿಯ ಷೇರುಗಳು ಶೇ.148ರಷ್ಟು ಏರಿದೆ
- ಕಳೆದ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಉತ್ತಮ ಪ್ರದರ್ಶನ ನೀಡಿದ ಈ ಮಲ್ಟಿಬ್ಯಾಗರ್ ಸ್ಟಾಕ್
ಈ ಮಲ್ಟಿಬ್ಯಾಗರ್ ಸ್ಟಾಕ್ ಕಳೆದ ತ್ರೈಮಾಸಿಕದಲ್ಲಿ ಉತ್ತಮ ಪ್ರದರ್ಶನ ನೀಡಿದೆ. ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಅದರ ಕ್ರೋಢೀಕೃತ ನಿವ್ವಳ ಮಾರಾಟವು ತ್ರೈಮಾಸಿಕ ಆಧಾರದಲ್ಲಿ ಶೇ.14.23 ಅಂದರೆ 1387 ಕೋಟಿ ರೂ.ಗೆ ಏರಿತು. ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.31 ರಷ್ಟು ಬೆಳವಣಿಗೆ ಕಂಡಿದೆ. ಈ ಅವಧಿಯಲ್ಲಿ ಕಂಪನಿಯ ‘ಇಬಿಐಟಿಡಿಎ’ ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ ಶೇ.34ರಷ್ಟು ಏರಿಕೆಯಾಗಿ 252 ಕೋಟಿ ರೂ. ತಲುಪಿದೆ. ವರ್ಷದಿಂದ ವರ್ಷಕ್ಕೆ ಶೇ. 52ರಷ್ಟು ಏರಿಕೆ ಕಂಡಿದೆ. ಕಂಪನಿಯ ಸುದ್ದಿ ಮತ್ತು ಮನರಂಜನಾ ವಿಭಾಗಗಳು ಕಳೆದ ತ್ರೈಮಾಸಿಕದಲ್ಲಿ ಗಮನಾರ್ಹ ಬೆಳವಣಿಗೆ ಕಂಡಿವೆ. ಆದರೆ ಕಂಪನಿಯಲ್ಲಿ ನಿಯಂತ್ರಣವಿಲ್ಲದ ಷೇರುದಾರರ ಉಪಸ್ಥಿತಿಯಿಂದಾಗಿ, ಪ್ರೊಮೋಟರ್ಸ್ ಮತ್ತು ಸಾಮಾನ್ಯ ಷೇರುದಾರರು ತಮ್ಮ ನಿವ್ವಳ ಲಾಭದಲ್ಲಿ ರಾಜಿ ಮಾಡಿಕೊಳ್ಳಬೇಕಾಯಿತು. ಕಂಪನಿಯ ತೆರಿಗೆಯ ನಂತರದ ಲಾಭವು ತ್ರೈಮಾಸಿಕ ಆಧಾರದ ಮೇಲೆ ನಾಲ್ಕು ಪಟ್ಟು ಹೆಚ್ಚಳವಾಗಿದ್ದು, 32 ಕೋಟಿ ರೂಪಾಯಿಯಷ್ಟಿದೆ.
ಈ ಕಂಪೆನಿಯು ಪ್ರಸ್ತುತ ಟ್ರೆಂಡಿಂಗ್‌ನಲ್ಲಿದ್ದು ಒಟಿಟಿಯ Voot ಪ್ಲಾಟ್‌ಫಾರ್ಮ್ ಮೂಲಕ ಪ್ರಬಲ ಮಾರುಕಟ್ಟೆ ಪಾಲನ್ನು ಹೊಂದಿದೆ. ಇದರ ಡಿಜಿಟಲ್ ಎಕ್ಸ್ಕ್ಲೂಸಿವ್ ಪ್ರಾಪರ್ಟಿ, ಬಿಗ್ ಬಾಸ್ ಒಟಿಟಿ ಹಾಗೂ Voot ಗಣನೀಯ ಚಂದಾದಾರರ ಬೆಳವಣಿಗೆ ನಡೆಸುತ್ತಿದೆ. 3 ಪ್ರಮುಖ ಫುಟ್‌ಬಾಲ್ ಲೀಗ್ ಸ್ಟ್ರೀಮಿಂಗ್ ನಂತರ ಇದು ಜನಪ್ರಿಯ ವೇದಿಕೆಯಾಗುತ್ತಿದೆ. ಕಂಪನಿಯು ಭಾರತದ ಅತ್ಯಂತ ವೈವಿಧ್ಯಮಯ ಮನರಂಜನಾ ಪ್ಲಾಟ್‌ಫಾರ್ಮ್‌ಗಳಲ್ಲಿ ಒಂದಾಗಿದೆ. ಇದರ ಅಂಗಸಂಸ್ಥೆ TV18 ಬ್ರಾಡ್ ಕಾಸ್ಟ್ ಲಿಮಿಟೆಡ್ ಟಿವಿ ಚಾನಲ್‌ಗಳ ಪ್ರಾಥಮಿಕ ವ್ಯವಹಾರವನ್ನು ನಿರ್ವಹಿಸುತ್ತದೆ. ಹಲವು ಭಾಷೆಗಳು ಮತ್ತು ಪ್ಲಾಟ್‌ಫಾರ್ಮ್‌ಗಳಲ್ಲಿ ಮನರಂಜನೆ ಮತ್ತು ಸುದ್ದಿ ಚಾನಲ್‌ಗಳ ವ್ಯಾಪಕ ಹೂಡಿಕೆದಾರರನ್ನು ಆಕರ್ಷಿಸಿದೆ. ಈ ಮೂಲಕ ಕೇವಲ ಒಂದು ವರ್ಷದಲ್ಲಿ ಮಲ್ಟಿಬ್ಯಾಗ್ಗರ್ ಸ್ಟಾಕ್ ಆಗಿ ಸ್ಟಾಕ್ ಅನ್ನು ಆಕರ್ಷಿಸಿದೆ.
ಈ ಷೇರುಗಳ 52 ವಾರದ ಗರಿಷ್ಠ ಮತ್ತು ಕನಿಷ್ಠ ಮಟ್ಟವು ಕ್ರಮವಾಗಿ ₹115 ಮತ್ತು ₹34.55 ನಷ್ಟಿದೆ. 2021ರ ನವೆಂಬರ್ 3 ರಂದು ಇದು BSEನಲ್ಲಿ ಶೇ.1.44 ಲಾಭದೊಂದಿಗೆ 91.70 ರೂಪಾಯಿಗೆ ಏರಿಕೆಯಾಗಿತ್ತು.
ಹೆಚ್ಚಿನ ವಿವರಗಳಿಗಾಗಿ ದಲಾಲ್ ಸ್ಟ್ರೀಟ್ ಇನ್ವೆಸ್ಟ್‌ಮೆಂಟ್ ಜರ್ನಲ್, ಭಾರತದ ನಂ.1 ಇಕ್ವಿಟಿ ರಿಸರ್ಚ್ ಮತ್ತು ಇನ್ವೆಸ್ಟ್‌ಮೆಂಟ್ ಮ್ಯಾಗಜೀನ್‌ಗೆ ಚಂದಾದಾರರಾಗಿ. ದಲಾಲ್ ಸ್ಟ್ರೀಟ್ ಇನ್ವೆಸ್ಟ್ಮೆಂಟ್ ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ ನೀವು ಚಂದಾದಾರರಾಗಬಹುದು.
ಹಕ್ಕುತ್ಯಾಗ ( Disclaimer): ಮೇಲಿನ ವಿಷಯವನ್ನು ದಲಾಲ್ ಸ್ಟ್ರೀಟ್ ಇನ್ವೆಸ್ಟ್‌ಮೆಂಟ್ ಜರ್ನಲ್ (DSIJ)ಪರವಾಗಿ ಬರೆಯಲಾಗಿದೆ. ಇಲ್ಲಿ ವ್ಯಕ್ತಪಡಿಸಿದ ಅಥವಾ ಸೂಚಿಸಿದ, ಅದಕ್ಕೆ ಸಂಬಂಧಿಸಿದ ಎಲ್ಲ ವಾರಂಟಿಗಳನ್ನು ಟಿಐಎಲ್ ನಿರಾಕರಿಸುತ್ತದೆ. ಒದಗಿಸಿರುವ ಯಾವುದೇ ಮಾಹಿತಿ ಮತ್ತು ವಿಷಯವು ಸರಿಯಾಗಿದೆ, ನವೀಕರಿಸಲಾಗಿದೆ ಮತ್ತು ಪರಿಶೀಲಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಿ.