Karnataka news paper

Bigg Boss: ರಾಜೀವ್ ನಟನೆಯ ‘ಉಸಿರೇ ಉಸಿರೇ’ ಚಿತ್ರದಲ್ಲಿ ಬಣ್ಣ ಹಚ್ಚಿದ ಮಂಜು ಪಾವಗಡ


ಹೈಲೈಟ್ಸ್‌:

  • ‘ಬಿಗ್ ಬಾಸ್’ ಕನ್ನಡ ಸೀಸನ್‌ 8ರ ವಿನ್ನರ್ ಆಗಿದ್ದ ಮಂಜು ಪಾವಗಡ
  • ಮಂಜು ಪಾವಗಡಗೆ ಸ್ಯಾಂಡಲ್‌ವುಡ್‌ನಿಂದ ಹರಿದುಬರುತ್ತಿವೆ ಸಿಕ್ಕಾಪಟ್ಟೆ ಆಫರ್‌
  • ರಾಜೀವ್ ಹೀರೋ ಆಗಿರುವ ಹೊಸ ಸಿನಿಮಾದಲ್ಲಿ ಮಂಜು ನಟನೆ

ಬಿಗ್ ಬಾಸ್ ಕನ್ನಡ ಸೀಸನ್‌ 8’ರ ವಿನ್ನರ್ ಮಂಜು ಪಾವಗಡಗೆ ಈಗ ಸಿನಿಮಾಗಳಿಂದ ಸಿಕ್ಕಾಪಟ್ಟೆ ಅವಕಾಶಗಳು ಸಿಗುತ್ತಿವೆ. ಕಾಮಿಡಿ ಮೂಲಕ ರಂಜಿಸಿದ್ದ ಅವರಿಗೆ ಅಂಥದ್ದೇ ಪಾತ್ರಗಳು ಹೆಚ್ಚು ಸಿಗುತ್ತಿವೆ. ಈಚೆಗಷ್ಟೇ ಅವರು ನಟಿಸಿದ್ದ ‘ರೈಡರ್’ ಸಿನಿಮಾ ತೆರೆಕಂಡಿತ್ತು. ಇದೀಗ ಅವರು ‘ಉಸಿರೇ ಉಸಿರೇ’ ಸಿನಿಮಾಕ್ಕಾಗಿ ಬಣ್ಣ ಹಚ್ಚಿದ್ದಾರೆ. ಅಂದಹಾಗೆ, ಬಿಗ್ ಬಾಸ್‌ನಿಂದ ಹೊರಬಂದ ನಂತರ ಮಂಜು ಪಾವಗಡ ಒಪ್ಪಿಕೊಂಡ ಮೊದಲ ಸಿನಿಮಾ ಇದಾಗಿದೆ.

ಬಿಗ್ ಬಾಸ್ ಕನ್ನಡ ಸೀಸನ್ 8ರಲ್ಲಿ ಮಂಜು ಪಾವಗಡ ಜೊತೆಗೆ ಮನೆಯೊಳಗೆ ಹೋಗಿದ್ದ ರಾಜೀವ್ ‘ಉಸಿರೇ ಉಸಿರೇ’ ಸಿನಿಮಾದಲ್ಲಿ ಹೀರೋ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ವಿಶೇಷವೆಂದರೆ, ಮತ್ತೋರ್ವ ಬಿಗ್ ಬಾಸ್ ಸ್ಪರ್ಧಿ ರಘು ಗೌಡ ಕೂಡ ಈ ಸಿನಿಮಾದಲ್ಲಿ ಬಣ್ಣ ಹಚ್ಚಲಿದ್ದಾರೆ. ಹೊಸ ನಿರ್ದೇಶಕ ವಿಜಯ್ ಸಿ.ಎಂ. ಇದರ ನಿರ್ದೇಶನ ಮಾಡುತ್ತಿದ್ದಾರೆ. ರಾಜೀವ್‌ಗೆ ನಾಯಕಿಯಾಗಿ ಶ್ರೀಜಿತಾ ಘೋಷ್ ನಟಿಸಿದ್ದಾರೆ.

ಬಹಳ ಹಿಂದೆಯೇ ‘ಉಸಿರೇ ಉಸಿರೇ’ ಸಿನಿಮಾದಲ್ಲಿ ಮಂಜು ಪಾವಗಡ ನಟಿಸುವುದು ಖಚಿತವಾಗಿತ್ತಾದರೂ, ಶೂಟಿಂಗ್ ಶುರುವಾಗಿರಲಿಲ್ಲ. ಇದೀಗ ಅವರು ಸಿನಿಮಾದ ಶೂಟಿಂಗ್‌ಗೆ ಭಾಗಿಯಾಗಿದ್ದಾರೆ. ಆ ಬಗ್ಗೆ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿರುವ ಮಂಜು, ‘ಲೈಟ್ಸ್, ಕ್ಯಾಮೆರಾ, ಆಕ್ಷನ್‌! ನಮ್ಮ ರಾಜೀವ್ ಅಣ್ಣನ ಜೊತೆಗೆ ‘ಉಸಿರೇ ಉಸಿರೇ’ ಸಿನಿಮಾ ಶೂಟಿಂಗ್ ಶುರು’ ಎಂದು ಹೇಳಿದ್ದಾರೆ. ಅಂದಹಾಗೆ, ‘ಬಿಗ್ ಬಾಸ್’ ಶೋನಲ್ಲೂ ರಾಜೀವ್ ಮತ್ತು ಮಂಜು ಉತ್ತಮ ಒಡನಾಟ ಹೊಂದಿದ್ದರು.

ಫೋಟೋಗಳು: ಉತ್ತರ ಕನ್ನಡಕ್ಕೆ ಟ್ರಿಪ್ ಹೋಗಿ ಬಂದ ಶುಭಾ ಪೂಂಜಾ, ಮಂಜು ಪಾವಗಡ

ಇನ್ನು, ಈ ಸಿನಿಮಾದಲ್ಲಿ ನಟಿಸುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದ ಮಂಜು ಪಾವಗಡ, ‘ಬಿಗ್ ಬಾಸ್‌ ಶೋನಲ್ಲಿ ರಾಜೀವ್ ನನ್ನ ಬೆಸ್ಟ್ ಫ್ರೆಂಡ್ ಆಗಿದ್ದರು. ಅಲ್ಲೇ ನಾನು ಅವರನ್ನು ಮೊದಲ ಬಾರಿಗೆ ಭೇಟಿ ಆಗಿದ್ದೆ. ಇದೀಗ ಅವರೊಂದಿಗೆ ಕೆಲಸ ಮಾಡಲು ಉತ್ಸುಕನಾಗಿದ್ದೇನೆ. ಈ ಸಿನಿಮಾದ ಕಥೆಯು ಕಾಲೇಜ್ ಹಿನ್ನೆಲೆಯಲ್ಲಿ ನಡೆಯಲಿದೆ. ನನ್ನ ಪಾತ್ರದಲ್ಲಿ ಸಾಕಷ್ಟು ಟ್ವಿಸ್ಟ್‌ಗಳು ಇವೆ. ಅದು ಕ್ಲೈಮ್ಯಾಕ್ಸ್‌ನಲ್ಲಿ ಮಾತ್ರ ಗೊತ್ತಾಗಲಿದೆ’ ಎಂದಿದ್ದರು. ಇನ್ನು, ಈಚೆಗಷ್ಟೇ ತೆರೆಕಂಡ ‘ಹುಟ್ಟುಹಬ್ಬದ ಶುಭಾಶಯಗಳು’ ಚಿತ್ರದ ಕಾರ್ಯಕ್ರಮಕ್ಕೆ ಹೋಗಿ ದಿಗಂತ್ ಮತ್ತು ತಂಡಕ್ಕೆ ಹಾರೈಸಿದ್ದರು ಮಂಜು. ಸದ್ಯ ಹಲವು ಕಥೆಗಳನ್ನು ಮಂಜು ಪಾವಗಡ ಕೇಳುತ್ತಿದ್ದಾರೆ. ಕೇವಲ ಹಾಸ್ಯ ಪಾತ್ರಗಳಿಗೆ ಮಾತ್ರ ಸೀಮಿತವಾಗಲು ಅವರಿಗೆ ಇಷ್ಟವಿಲ್ಲವಂತೆ. ಚಿತ್ರರಂಗದಲ್ಲಿ ಸಾಕಷ್ಟು ಕಾಲ ಉಳಿಯುವಂತಹ ಪಾತ್ರಗಳನ್ನು ಮಾಡಬೇಕು ಎಂಬುದು ಅವರ ಬಯಕೆ. ಅಂತಹ ಕಥೆಗಳನ್ನು ಅವರು ಎದುರು ನೋಡುತ್ತಿದ್ದಾರೆ.

ನಿಖಿಲ್ ಕುಮಾರಸ್ವಾಮಿ ‘ರೈಡರ್’ನಲ್ಲಿ ನಟಿಸಿರುವ ಮಂಜು ಪಾವಗಡ

ನಮ್ಮ ಊರು ಪಾವಗಡದಲ್ಲಿ ಕುಮಾರಣ್ಣ, ನಿಖಿಲ್‌ಣ್ಣನ ಅಬ್ಬರ ಜಾಸ್ತಿ: ಬಿಗ್ ಬಾಸ್ ಕನ್ನಡ 8 ವಿಜೇತ ಮಂಜು ಪಾವಗಡ





Read more