Karnataka news paper

ಭಾರತದ ಎದುರು ನಾನು ತುಂಬಾ ನರ್ವಸ್‌ ಆಗಿದ್ದೆ ಎಂದ ಓಲಿವಿಯರ್‌!


ಹೈಲೈಟ್ಸ್‌:

  • ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಮೂರು ಪಂದ್ಯಗಳ ಟೆಸ್ಟ್‌ ಸರಣಿ.
  • ಎರಡನೇ ಟೆಸ್ಟ್ ಪ್ರಥಮ ಇನಿಂಗ್ಸ್‌ನಲ್ಲಿ ಭಾರತ ತಂಡ 202ಕ್ಕೆ ಆಲ್‌ಔಟ್‌ ಆಗಿತ್ತು.
  • ರಾಷ್ಟ್ರೀಯ ತಂಡಕ್ಕೆ ಕಮ್‌ಬ್ಯಾಕ್‌ ಅನುಭವ ಹಂಚಿಕೊಂಡ ಡುವಾನ್‌ ಓಲಿವಿಯರ್‌.

ಜೊಹಾನ್ಸ್‌ಬರ್ಗ್‌: ಭಾರತ ವಿರುದ್ಧ ಸೋಮವಾರ ಆರಂಭವಾದ ಎರಡನೇ ಟೆಸ್ಟ್‌ ಪಂದ್ಯದಲ್ಲಿ ಕಣಕ್ಕೆ ಇಳಿದ ನನಗೆ ಆತಂಕ ಉಂಟಾಗಿತ್ತು ಹಾಗೂ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದಂತಹ ಅನುಭವ ಉಂಟಾಗಿತ್ತು ಎಂದು ದಕ್ಷಿಣ ಆಫ್ರಿಕಾ ವೇಗಿ ಡುವಾನ್ ಓಲಿವಿಯರ್‌ ಹೇಳಿದ್ದಾರೆ.

ಯಾರ್ಕ್‌ಷೈರ್‌ನೊಂದಿಗೆ ಕೋಲ್ಪಾಕ್ ಒಪ್ಪಂದಕ್ಕೆ ಸಹಿ ಹಾಕುವ ಸಲುವಾಗಿ ರಾಷ್ಟ್ರೀಯ ತಂಡವನ್ನು ತೊರೆದಿದ್ದ ಡುವಾನ್‌ ಓಲಿವಿಯರ್‌ 2019 ರಿಂದ ಇದೇ ಮೊದಲ ಬಾರಿಗೆ ದಕ್ಷಿಣ ಆಫ್ರಿಕಾ ಪರ ಆಡಿದರು. ಇದರ ಹೊರತಾಗಿಯೂ ಬ್ರೆಕ್ಸಿಟ್ ನಂತರ ಕೊಲ್ಪಾಕ್ ಒಪ್ಪಂದ ಕುಸಿಯಿತು. ಇದಾದ ಬಳಿಕ ಓಲಿವಿಯರ್ ರಾಷ್ಟ್ರೀಯ ತಂಡಕ್ಕೆ ಮಳಿದ್ದಾರೆ.

ಇಲ್ಲಿನ ದಿ ವಾಂಡರರ್ಸ್‌ ಮೈದಾನದಲ್ಲಿ ಸೋಮವಾರ ಆರಂಭವಾದ ಎರಡನೇ ಟೆಸ್ಟ್‌ ಪಂದ್ಯದ ಪ್ರಥಮ ಇನಿಂಗ್ಸ್‌ನಲ್ಲಿ ಡುವಾನ್‌ ಓಲಿವಿಯರ್‌ ಮೂರು ವಿಕೆಟ್‌ಗಳನ್ನು ಪಡೆದುಕೊಂಡು ಭರ್ಜರಿ ಕಮ್‌ಬ್ಯಾಕ್‌ ಮಾಡಿದರು ಹಾಗೂ ಭಾರತ ತಂಡ 202ಕ್ಕೆ ಆಲ್‌ಔಟ್‌ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದರು.

ಭಾರತ 202ಕ್ಕೆ ಆಲ್‌ಔಟ್‌: ಹರಿಣಗಳ ಹಿಡಿತದಲ್ಲಿ ದ್ವಿತೀಯ ಟೆಸ್ಟ್‌!

ದೀರ್ಘಾವಧಿಯ ಬಳಿಕ ರಾಷ್ಟ್ರೀಯ ತಂಡಕ್ಕೆ ಮರಳಿದ್ದರಿಂದ ನನ್ನಲ್ಲಿ ಆತಂಕ ಉಂಟಾಗಿತ್ತು ಹಾಗೂ ಚೊಚ್ಚಲ ಟೆಸ್ಟ್‌ ಪಂದ್ಯವಾಡುತ್ತಿದ್ದೇನೆಂಬ ರೀತಿ ಭಾಸವಾಯಿತು. ಈ ಹಿನ್ನೆಲೆಯಲ್ಲಿ ಹೆಚ್ಚಿನ ಪ್ರಯೋಗ ಮಾಡದೆ, ಸರಿಯಾದ ಜಾಗದಲ್ಲಿ ಚೆಂಡನ್ನು ಪಿಚ್‌ ಮಾಡುತ್ತಿದ್ದೆ. ಆ ಮೂಲಕ ದಕ್ಷಿಣ ಆಫ್ರಿಕಾ ತಂಡದ ಬ್ಯಾಟಿಂಗ್‌ ವಿಭಾಗದ ಮೇಲಿನ ಒತ್ತಡವನ್ನು ಕಡಿಮೆಗೊಳಿಸಲಾಯಿತು ಎಂದರು.

ಮೊದಲನೇ ದಿನದಾಟದ ಅಂತ್ಯಕ್ಕೆ ನ್ಯೂಸ್‌ 24 ಜೊತೆ ಮಾತನಾಡಿದ ಡುವಾನ್‌ ಓಲಿವಿಯರ್‌, “ಇಂದು(ಸೋಮವಾರ) ಚೊಚ್ಚಲ ಪಂದ್ಯವಾಡಿದಂತೆ ಭಾಸವಾಗುತ್ತಿದೆ. ಇದರ ಜೊತೆಗೆ ನನಗೆ ಆತಂಕವೂ ಇತ್ತು. ಹಾಗಾಗಿ ಉತ್ತಮ ಶಕ್ತಿಯೊಂದಿಗೆ ತಂಡಕ್ಕೆ ಮೇಲುಗೈ ಸಾಧಿಸಲು ನನ್ನಿಂದ ಸಾಧ್ಯವಾದುದನ್ನು ಪ್ರಯತ್ನಿಸಿದೆ. ಭಾರತವನ್ನು ಬಹುಬೇಗ ಕಟ್ಟಿ ಹಾಕಿದ್ದರಿಂದ ನಮ್ಮ ಬ್ಯಾಟ್ಸ್‌ಮನ್‌ಗಳಿಗೆ ಕೆಲಸವನ್ನು ಸುಲಭಗೊಳಿಸಲಾಗಿದೆ,” ಎಂದರು.

202ಕ್ಕೆ ಆಲ್‌ಔಟ್‌ ಆಗಿ ಬೇಸರದಲ್ಲಿದ್ದ ಭಾರತ ತಂಡಕ್ಕೆ ಮತ್ತೊಂದು ಆಘಾತ!

“ಅಂದಹಾಗೆ ಪಂದ್ಯದಲ್ಲಿ ಅತ್ಯುತ್ತಮ ವೇಗದೊಂದಿಗೆ ಸರಿಯಾದ ಜಾಗದಲ್ಲಿ ಚೆಂಡನ್ನು ಪಿಚ್‌ ಮಾಡಲು ಪ್ರಯತ್ನಿಸಿದ್ದೆ. ಇಂದು(ಸೋಮವಾರ) ಚೆಂಡು ಸ್ವಲ್ಪ ಫ್ಲಾಟ್‌ ಆಗಿ ಬರುತ್ತದೆ ಎಂದು ನನಗೆ ಗೊತ್ತಿತ್ತು. ಎಲ್ಲಾ ಸಮಯದಲ್ಲಿಯೂ ಚೆಂಡನ್ನು ಸರಿಯಾದ ಜಾಗದಲ್ಲಿ ಪಿಚ್‌ ಮಾಡಲು ಸಾಧ್ಯವಿಲ್ಲ. ಆದರೆ ಸಾಧ್ಯವಾದಷ್ಟು ಉತ್ತಮ ಜಾಗದಲ್ಲಿ ಪಿಚ್‌ ಮಾಡಲು ಪ್ರಯತ್ನಿಸುತ್ತಿದ್ದೆ,” ಎಂದು ಅವರು ತಿಳಿಸಿದರು.

ಕಗಿಸೊ ರಬಾಡ ಅವರಂತೆ ಡುವಾನ್‌ ಓಲಿವಿಯರ್‌ ಕೂಡ ಮೂರು ವಿಕೆಟ್‌ಗಳನ್ನು ತಮ್ಮ ಖಾತೆಗೆ ಹಾಕಿಕೊಂಡರು. ಸತತ ಎರಡು ಎಸೆತಗಳಲ್ಲಿ ಭಾರತದ ಹಿರಿಯ ಬ್ಯಾಟ್ಸ್‌ಮನ್‌ಗಳಾದ ಪೂಜಾರ ಮತ್ತು ರಹಾನೆ ಅವರನ್ನು ಓಲಿವಿಯರ್‌ ಔಟ್‌ ಮಾಡಿದ್ದು, ಪಂದ್ಯದ ಪಾಲಿಗೆ ಟರ್ನಿಂಗ್‌ ಪಾಯಿಂಟ್‌ ಆಗಿತ್ತು. ತಮ್ಮ ಮೂರನೇ ವಿಕೆಟ್‌ಗೆ ಅವರು ಶಾರ್ದುಲ್‌ ಠಾಕೂರ್‌ ಅವರನ್ನು ಔಟ್‌ ಮಾಡಿದ್ದರು.

ಜೊಹಾನ್ಸ್‌ಬರ್ಗ್‌ ಟೆಸ್ಟ್‌ನಲ್ಲಿ ವಿಶೇಷ ದಾಖಲೆ ಪಟ್ಟಿ ಸೇರಿದ ರಾಹುಲ್‌!

“ಪಿಚ್‌ನಲ್ಲಿನ ಕೆಲ ಪ್ಯಾಚ್‌ಗಳು ಅತ್ಯುತ್ತಮವಾಗಿದ್ದವು: ಓಲಿವಿಯರ್‌

“ವೇಗವಾಗಿ ಬೌಲ್‌ ಮಾಡಿದರೆ ಏನಾಗಬಹುದೆಂದು ನನಗೆ ಪ್ರಾಮಾಣಿಕವಾಗಿ ಗೊತ್ತಿರಲಿಲ್ಲ. ವೇಗದ ಬಗ್ಗೆ ಏನೂ ಹೇಳಲು ನಾನು ಬಯಸುವುದಿಲ್ಲ. ಏಕೆಂದರೆ ಇದೀಗ ನನ್ನ ವೇಗ ಕಡಿಮೆಯಾಗಿದೆ. ಹಾಗಾಗಿ ನಾನು ಹೆಚ್ಚಿನ ವೇಗದೊಂದಿಗೆ ಸರಿಯಾದ ಜಾಗದಲ್ಲಿ ಪಿಚ್‌ ಮಾಡಬಲ್ಲೆ ಎಂಬ ಬಗ್ಗೆ ನನಗೆ ಸ್ಪಷ್ಟತೆ ಇಲ್ಲ. ಪಿಚ್‌ನ ಕೆಲ ಭಾಗಗಳು ಚೆನ್ನಾಗಿದ್ದರೆ, ಇನ್ನು ಕೆಲವು ಭಾಗ ಸರಿಯಾಗಿ ಇರಲಿಲ್ಲ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ. ದ್ವಿತೀಯ ಇನಿಂಗ್ಸ್‌ಗೆ ಬಂದಾಗ ಇನ್ನಷ್ಟು ಉತ್ತಮ ಪ್ರದರ್ಶನ ತೋರಲು ಪ್ರಯತ್ನಿಸುತ್ತೇನೆ,” ಎಂದು ಹೇಳಿದ್ದಾರೆ.

ಭಾರತ ತಂಡ ಪ್ರಥಮ ಇನಿಂಗ್ಸ್‌ನಲ್ಲಿ 202ಕ್ಕೆ ಆಲ್‌ಔಟ್‌ ಆದ ಬಳಿಕ ಪ್ರಥಮ ಇನಿಂಗ್ಸ್‌ ಆರಂಭಿಸಿದ ದಕ್ಷಿಣ ಆಫ್ರಿಕಾ ತಂಡ 18 ಓವರ್‌ಗಳಿಗೆ ಒಂದು ವಿಕೆಟ್‌ ನಷ್ಟಕ್ಕೆ 35 ರನ್‌ ಗಳಿಸಿದೆ. ನಾಯಕ ಡೀನ್‌ ಎಲ್ಗರ್‌ ಹಾಗೂ ಕೀಗನ್ ಪೀಟರ್ಸನ್‌ ಎರಡನೇ ದಿನದಾಟದಲ್ಲಿ ಬ್ಯಾಟಿಂಗ್‌ ಮುಂದುವರಿಸಲಿದ್ದಾರೆ.

ಭಾರತ Vs ದಕ್ಷಿಣ ಆಫ್ರಿಕಾ 2ನೇ ಟೆಸ್ಟ್‌ ಸ್ಕೋರ್‌ಕಾರ್ಡ್



Read more