ಹೈಲೈಟ್ಸ್:
- ಮಹಿಳೆಯರಿಗೆ 2000 ರೂ. ಮಾಸಾಶನ, ಉಚಿತ ಸಿಲಿಂಡರ್
- ಕೈ ನಾಯಕ ನವಜೋತ್ ಸಿಂಗ್ ಸಿಧು ಭರವಸೆ
- ಈ ಹಿಂದೆ ಪ್ರಿಯಾಂಕಾ ಗಾಂಧಿಯಿಂದಲೂ ಭರ್ಜರಿ ಉಡುಗೊರೆ
”ಮುಂಬರುವ ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಅಧಿಕಾರಕ್ಕೆ ಬಂದರೆ ಗೃಹಿಣಿಯರಿಗೆ ಮಾಸಿಕ 2000 ರೂ. ನೀಡಲಾಗುವುದು. ಜೊತೆಗೆ ಪ್ರತಿ ವರ್ಷ ಕುಟುಂಬಕ್ಕೆ ಎಂಟು ಅಡುಗೆ ಅನಿಲ ಸಿಲಿಂಡರ್‌ಗಳನ್ನು ಉಚಿತವಾಗಿ ನೀಡಲಾಗುವುದು,” ಎಂದು ಸಿಧು ಘೋಷಿಸಿದ್ದಾರೆ. ”ಉನ್ನತ ವ್ಯಾಸಂಗಕ್ಕಾಗಿ ಕಾಲೇಜು ಪ್ರವೇಶ ಪಡೆಯುವ ಹೆಣ್ಣು ಮಕ್ಕಳಿಗೆ ದ್ವಿಚಕ್ರ ವಾಹನ ಹಾಗೂ ಕಂಪ್ಯೂಟರ್ ಉಚಿತವಾಗಿ ನೀಡಲಾಗುವುದು.
12ನೇ ತರಗತಿ ಉತ್ತೀರ್ಣರಾದ ಹೆಣ್ಣು ಮಕ್ಕಳಿಗೆ 20,000 ರೂ., 10ನೇ ತರಗತಿ ತೇರ್ಗಡೆ ಹೊಂದಿದ ಬಾಲಕಿಯರಿಗೆ 15,000 ರೂ. ಮತ್ತು ಐದನೇ ತರಗತಿ ಉತ್ತೀರ್ಣರಾದ ಬಾಲಕಿಯರಿಗೆ 5,000 ರೂ. ನೆರವು ನೀಡಲಾಗುವುದು,” ಎಂದೂ ಸಿಧು ಭರವಸೆ ನೀಡಿದ್ದಾರೆ.
ಒಂದೇ ವಾರದಲ್ಲಿ ಮೂರು ಪಕ್ಷಗಳಿಗೆ ರೌಂಡ್ ಹಾಕಿ ಮಾತೃ ಪಕ್ಷಕ್ಕೆ ಮರಳಿದ ಪಂಜಾಬ್ ಕಾಂಗ್ರೆಸ್ ಶಾಸಕ
ಉತ್ತರಾಖಂಡದಲ್ಲಿಕಾಂಗ್ರೆಸ್ ಚುನಾವಣಾ ಗೀತೆ ಬಿಡುಗಡೆ!
ಡೆಹ್ರಾಡೂನ್: ಉತ್ತರಾಖಂಡದಲ್ಲಿ ಚುನಾವಣಾ ಗೀತೆಯನ್ನು ಕಾಂಗ್ರೆಸ್ ಬಿಡುಗಡೆ ಮಾಡಿದೆ. ಮೂವರು ಮುಖ್ಯಮಂತ್ರಿಗಳಾದರೂ ಅಭಿವೃದ್ಧಿ ಕೆಲಸ ಹಾಳಾಯಿತು ಎನ್ನುವ ಅರ್ಥವನ್ನು ಧ್ವನಿಸುವ ‘ತೀನ್ ತಿಗಡಾ, ಕಾಮ್ ಬಿಗಡಾ’ ಎಂಬ ಶೀರ್ಷಿಕೆಯನ್ನು ಈ ಗೀತೆಗೆ ನೀಡಲಾಗಿದೆ.
‘‘ಕೇಂದ್ರ ಹಾಗೂ ರಾಜ್ಯಗಳಲ್ಲಿಒಂದೇ ಪಕ್ಷದ ಸರಕಾರವಿದ್ದರೆ ಡಬ್ಬಲ್ ಎಂಜಿನ್‌ನಂತೆ ಕೆಲಸ ಮಾಡಬಹುದು,’’ ಎಂಬ ಬಿಜೆಪಿ ಹೇಳಿಕೆಗೆ ಟಾಂಗ್ ನೀಡಲೆಂದೇ ಈ ಶೀರ್ಷಿಕೆ ನೀಡಲಾಗಿದೆ. ಉತ್ತರಾಖಂಡವು ಕಳೆದ ಐದು ವರ್ಷದಲ್ಲಿ ಮೂವರು ಮುಖ್ಯಮಂತ್ರಿಗಳನ್ನು ಕಂಡಿದೆ. ಅದನ್ನೇ ಪ್ರಮುಖವಾಗಿ ಬಿಂಬಿಸಿ, ಮೂವರು ಮುಖ್ಯಮಂತ್ರಿಗಳಾದರೂ ರಾಜ್ಯ ಅಭಿವೃದ್ಧಿ ಹೊಂದಿಲ್ಲ ಎಂದು ಕಾಂಗ್ರೆಸ್ ತನ್ನ ಚುನಾವಣಾ ಗೀತೆಯಲ್ಲಿ ಟೀಕಿಸಿದೆ.