Karnataka news paper

ತಡ ರಾತ್ರಿ ಪೊಲೀಸರಿಂದಲೇ ಮಹಿಳೆಯರಿಗೆ ಮನೆ ತನಕ ಡ್ರಾಪ್: ಆಂಧ್ರ ಪೊಲೀಸರ ನೂತನ ಯೋಜನೆಗೆ ಶ್ಲಾಘನೆ 


Source : The New Indian Express

ಅಮರಾವತಿ:  ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ಪೊಲೀಸ್ ಇಲಾಖೆ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ತಡರಾತ್ರಿ ಮನೆಗೆ ಹಿಂದಿರುಗುವ ಮಹಿಳೆಯರನ್ನು ಸುರಕ್ಷಿತವಾಗಿ ಮನೆಗೆ ಡ್ರಾಪ್ ಮಾಡುವುದೇ ಆ ಯೋಜನೆ.

ಇದನ್ನೂ ಓದಿ: ಮನೆ ಮಾಲೀಕನ ಪುತ್ರಿ ಸ್ನಾನದ ವಿಡಿಯೊ ಚಿತ್ರೀಕರಣ ಮಾಡಿದ 16 ವರ್ಷದ ಬಾಲಕ: ಪ್ರಕರಣ ದಾಖಲು

ಮಹಿಳೆಯರ ಸುರಕ್ಷತೆಯ ಕುರಿತು ಎದ್ದಿರುವ ಅಪಸ್ವರದ ಬೆನ್ನಲ್ಲೇ ಪೊಲೀಸರ ಈ ಕ್ರಮಕ್ಕೆ ಜನರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಕಾಕಿನಾಡ ನಗರದ ನಿವಾಸಿ ಯಶ್ವಂತಿ ವಿಶಾಖಪಟ್ಟಣಂ ನಿಂದ ನಗರಕ್ಕೆ ಬರುವಾಗ ತಡವಾಗಿತ್ತು. ಸಂಜೆ ತಲುಪಬೇಕಿದ್ದ ಬಸ್ಸು, ದಾರಿ ಮಧ್ಯ ಕೆಟ್ಟಿದ್ದರಿಂದ ತಡವಾಗಿತ್ತು. 

ಇದನ್ನೂ ಓದಿ: ಕೇರಳ: ತೈಲ ಟ್ಯಾಂಕರ್ ಡ್ರೈವರ್ ಪರವಾನಗಿ ಪಡೆದ ರಾಜ್ಯದ ಎರಡನೇ ಮಹಿಳೆ 25 ವರ್ಷದ ಬರ್ಕತ್ ನಿಶಾ

ಆಗ ಸಮಯ ಮಧ್ಯರಾತ್ರಿ 1ರ ಅಸುಪಾಸು. ಆ ಸಮಯದಲ್ಲಿ ಒಬ್ಬರೇ ರಸ್ತೆಯಲ್ಲಿ ನಡೆದುಹೋಗಲೂ ಅವರಿಗೆ ಭಯವಾಯಿತು. ಇನ್ನು ರಿಕ್ಷಾ ಹಿಡಿಯಲು ಕೂಡಾ ಮನಸ್ಸು ತಡವರಿಸಿತು. ಆ ಸಮಯದಲ್ಲಿ ಅವರಿಗೆ ನೆನಪಾಗಿದ್ದು ‘ಮಹಿಳೆಯರನ್ನು ಮನೆಗೆ ಸುರಕ್ಷಿತವಾಗಿ ಡ್ರಾಪ್’ ಮಾಡುವ ಪೊಲೀಸರ ವಿನೂತನ ಸಹಾಯವಾಣಿ. ಬೇರೆ ದಾರಿ ಕಾಣದೆ ಯಶ್ವಂತಿ ಪೊಲೀಸ್ ಕಂಟ್ರೋಲ್ ರೂಮಿಗೆ ಫೋನ್ ಮಾಡಿದ್ದರು.

ಇದನ್ನೂ ಓದಿ: ಮಹಿಳೆ ಎದುರೇ ಕ್ಯಾಬ್ ಚಾಲಕ ಹಸ್ತಮೈಥುನ: ಕ್ರಮಕ್ಕೆ ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂಥ್ ಸೂಚನೆ

ಯಶ್ವಂತಿ ತಮ್ಮ ಪರಿಸ್ಥಿತಿಯನ್ನು ಪೊಲೀಸರಿಗೆ ಮನವರಿಕೆ ಮಾಡಿ, ತಾವು ಮನೆಗೆ ತಲುಪಲು ಸಹಾಯ ಮಾಡುವಂತೆ ಕೇಳಿಕೊಂಡರು. ತಕ್ಷಣವೇ ಮನವಿಗೆ ಪೊಲೀಸರು ಸ್ಪಂದಿಸಿದ್ದರು. ಯಶ್ವಂತಿ ಇದ್ದಲ್ಲಿಗೇ ಇನ್ಸ್ ಪೆಕ್ತರ್ ಮತ್ತು ಆಗ ರೌಂಡ್ಸ್ ನಲ್ಲಿದ್ದ ಪೇದೆಗಳು ಬಂದರು. ಯಶ್ವಂತಿಯನ್ನು ಪೊಲೀಸರು ಸುರಕ್ಷಿತವಾಗಿ ಅವರ ಮನೆಗೆ ಕರೆದೊಯ್ದರು. ಇದೊಂಡು ಉದಾಹರಣೆಯಷ್ಟೇ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಮಹಿಳೆ ಸಂಶಯಾಸ್ಪದ ಸಾವು: ಕುಡಿದ ಮತ್ತಿನಲ್ಲಿ ಕೆರೆಗೆ ಬಿದ್ದಿರುವ ಶಂಕೆ

Women Drop at Home ಎಂಬ ಹೆಸರಿನ ಈ ಯೋಜನೆ, ಎಸ್ಪಿ ರವೀಂದ್ರನಾಥ್ ಬಾಬು ಅವರ ಪರಿಕಲ್ಪನೆ. ಈ ಯೋಜನೆ ಶುರುವಾದಾಗಿನಿಂದಲೂಆಸಂಖ್ಯ ಮಹಿಳೆಯರಿಗೆ ರಾತ್ರಿ ವೇಳೆ ಪೊಲೀಸರ ನೆರವು ಒದಗಿದೆ.

ಇದನ್ನೂ ಓದಿ: ಪುತ್ರಿಯ ಖಾಸಗಿ ಫೋಟೊ ತೋರಿಸಿ ಮಹಿಳೆಗೆ ಬ್ಲ್ಯಾಕ್ ಮೇಲ್: ಸಾಲ ವಸೂಲಿಗೆ ವಿಕ್ಷಿಪ್ತ ಮಾರ್ಗ



Read more