Karnataka news paper

ಪಾಂಗಾಂಗ್ ಸರೋವರದ ಬದಿಯಲ್ಲಿ ಚೀನಾ ಸೇತುವೆ ನಿರ್ಮಾಣ: ಉಪಗ್ರಹ ಚಿತ್ರದಲ್ಲಿ ಗೋಚರ


Prajavani

ನವದೆಹಲಿ: ‘ಪೂರ್ವ ಲಡಾಖ್‌ನ ಪಾಂಗಾಂಗ್‌ ಸರೋವರದ ಬದಿಯಲ್ಲಿ ಚೀನಾ ಸೇತುವೆಯನ್ನು ನಿರ್ಮಿಸುತ್ತಿರುವ ಮಾಹಿತಿಯು ಸೋಮವಾರ ಉಪಗ್ರಹವು ಸೆರೆ ಹಿಡಿದಿರುವ ಚಿತ್ರದ ಮೂಲಕ ಪತ್ತೆಯಾಗಿದೆ’ ಎಂದು ಮೂಲಗಳು ತಿಳಿಸಿವೆ. 

ಗಡಿ ಪ್ರದೇಶದಲ್ಲಿ ಭಾರತ ಮತ್ತು ಚೀನಾದ ನಡುವಣ ಸುದೀರ್ಘ ಮಿಲಿಟರಿ ಬಿಕ್ಕಟ್ಟಿನ ನಡುವೆಯೇ ಈ ಬೆಳವಣಿಗೆಗೆ ನಡೆದಿದೆ. 

ಜಿಯೊ ಇಂಟೆಲಿಜೆನ್ಸ್ ತಜ್ಞ ಡೇಮಿಯನ್ ಸೈಮನ್ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಉಪಗ್ರಹ ಚಿತ್ರವನ್ನು ಪೋಸ್ಟ್ ಮಾಡಿದ್ದು, ‘ಪಾಂಗಾಂಗ್‌ ಸರೋವರದ ಉತ್ತರ ಮತ್ತು ದಕ್ಷಿಣ ದಂಡೆಗಳನ್ನು ಸಂಪರ್ಕಿಸಲು ಚೀನಾ ಹೊಸ ಸೇತುವೆಯನ್ನು ನಿರ್ಮಿಸುತ್ತಿದೆ ಎನ್ನುವ ಕುರಿತು ಮಾಧ್ಯಮಗಳು ವರದಿಯಲ್ಲಿ ಆರೋಪಿಸಿವೆ. ಈ ಸ್ಥಳದಲ್ಲಿ ಚೀನಾದ ಸೇತುವೆ ನಿರ್ಮಾಣದ ಹಂತದ ಚಿತ್ರವನ್ನು ಜಿಯೊ ಇಂಟೆಲಿಜೆನ್ಸ್ ಸೆರೆಹಿಡಿದಿದೆ’ ಎಂದೂ ಟ್ವೀಟ್ ಮಾಡಿದ್ದಾರೆ.

‘ಉಪಗ್ರಹವು ಸೆರೆ ಹಿಡಿದಿರುವ ಚಿತ್ರದಲ್ಲಿನ ಪ್ರದೇಶವು, ಗಾಲ್ವಾನ್ ಕಣಿವೆ ಪ್ರದೇಶ ಸಮೀಪದಲ್ಲಿರುವ ವಾಸ್ತವ ಗಡಿ ನಿಯಂತ್ರಣ ರೇಖೆಯ (ಎಲ್‌ಎಸಿ) ಚೀನಾದ ಭಾಗದಲ್ಲಿದೆ’ ಎಂದು ಈ ಬೆಳವಣಿಗೆಯ ಬಗ್ಗೆ ಮಾಹಿತಿ ಇರುವ ಜನರು ತಿಳಿಸಿದ್ದಾರೆ.

ಗೊತ್ತಿದೆ: ‘ಭಾರತವು ಎಲ್‌ಎಸಿಯ ಎಲ್ಲಾ ಪ್ರಮುಖ ಪ್ರದೇಶಗಳಲ್ಲಿ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸುತ್ತಿದೆ ಮತ್ತು ಈ ಪ್ರದೇಶದಲ್ಲಿ ಚೀನಾದ ಚಟುವಟಿಕೆಗಳ ಬಗ್ಗೆ ಭಾರತಕ್ಕೆ ತಿಳಿದಿದೆ’ ಎಂದು ಭಾರತೀಯ ಮಿಲಿಟರಿ ಮೂಲಗಳು ತಿಳಿಸಿವೆ.



Read more from source