ಬೆಂಗಳೂರು: ಬಿಗ್‌ಬಾಸ್ ಒಟಿಟಿ ಮೂಲಕ ಜನತೆಗೆ ಪರಿಚಿತರಾದ ನಟಿ ಉರ್ಫಿ ಜಾವೇದ್, ಸಾಮಾಜಿಕ ತಾಣಗಳಲ್ಲಿ ಸ್ವಲ್ಪ ಹೆಚ್ಚೇ ಎನ್ನಿಸುವಷ್ಟು ಸಕ್ರಿಯರಾಗಿರುತ್ತಾರೆ.
ಅದರಲ್ಲೂ ಬೋಲ್ಡ್ ಎನ್ನಿಸುವ ಹೇಳಿಕೆ ನೀಡುವಲ್ಲಿ ಅವರು ಸದಾ ಮುಂದು.. ಸೋಮವಾರ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ರೀಲ್ಸ್ ವಿಡಿಯೊ ಒಂದನ್ನು ಪೋಸ್ಟ್ ಮಾಡಿದ್ದಾರೆ.
ಅದರಲ್ಲಿ ಕಪ್ಪು ಬಣ್ಣದ, ಹೊಸ ವಿನ್ಯಾಸದ ಉಡುಪು ಒಂದನ್ನು ಧರಿಸಿರುವ ಉರ್ಫಿ, ‘ಯಾರು ಸೆಕ್ಸಿ?‘ ಎಂದು ಪ್ರಶ್ನಿಸಿ ಅಡಿಬರಹ ನೀಡಿದ್ದಾರೆ.
ಉರ್ಫಿ ಅವರ ಪೋಸ್ಟ್ ನೋಡಿರುವ ಟ್ರೋಲಿಗರು, ಸಾಮಾಜಿಕ ತಾಣಗಳಲ್ಲಿ ಉರ್ಫಿ ಹೊಸ ಉಡುಪು ಕುರಿತು ಟ್ರೋಲ್ ಮಾಡಿದ್ದಾರೆ.
ಹೌದು, ನನ್ನ ಬಟ್ಟೆಯನ್ನು ಇಲಿ ತಿಂದು ಹಾಕಿದೆ: ಉರ್ಫಿ ಜಾವೇದ್ ಪೋಸ್ಟ್!
ಆದರೆ ಮತ್ತಷ್ಟು ಜನರು ನಟಿಗೆ ಬೆಂಬಲ ಸೂಚಿಸಿದ್ದು, ನಿಮ್ಮಿಷ್ಟದಂತೆಯೇ ಇರಿ, ಯಾರದೋ ಮಾತುಗಳಿಗೆ ಕಿವಿಗೊಡಬೇಡಿ ಎಂದು ಕಾಮೆಂಟ್ ಮೂಲಕ ಬೆಂಬಲ ಸೂಚಿಸಿದ್ದಾರೆ.
[wpas_products keywords=”sexy dress for women stylish party wear short”]