ಕಿಚ್ಚ ಸುದೀಪ್ ಅವರ ಅಭಿನಯದ ‘ವಿಕ್ರಾಂತ್ ರೋಣ’ ಚಿತ್ರ ಬಿಡುಗಡೆಗೆ ಸಿದ್ಧವಾಗಿರುವ ಬೆನ್ನಲ್ಲೇ ಸುದೀಪ್ ಹೊಸ ಸಿನಿಮಾ ಘೋಷಣೆಯಾಗಿದೆ.
ಅಭಿಮಾನಿಗಳಿಗೆ ಸುದೀಪ್ ಮುಂದೆ ಯಾವ ಸಿನಿಮಾ ಮಾಡಲಿದ್ದಾರೆ ಎಂಬ ಕುತೂಹಲವಿತ್ತು. ಈಗ ಸಿನಿಮಾ ಪ್ರೇಮಿಗಳಿಗೆ ಉತ್ತರ ಸಿಕ್ಕಿದ್ದು, ತಮಿಳು ನಿರ್ದೇಶಕ ವೆಂಕಟ್ ಪ್ರಭು ಅವರು ಕಿಚ್ಚನಿಗೆ ಆ್ಯಕ್ಷನ್–ಕಟ್ ಹೇಳಲಿದ್ದಾರೆ.
Finally Finally Answer Is Here
Boss Next Project With #VenkatPrabhuOfficial Confirm 📣#VikrantRona | #KicchaSudeep | @KicchaSudeep pic.twitter.com/nxehJkc0U5
— Ruler Kiccha …🤫 (@RulerKiccha) January 2, 2022
ಕೋಟಿಗೊಬ್ಬ3 ಸಿನಿಮಾದ ಯಶಸ್ಸಿನ ಬಳಿಕ, ವಿಕ್ರಾಂತ್ ರೋಣ ಚಿತ್ರ ಕೂಡ ಬಿಡುಗಡೆಗೆ ಸಿದ್ದವಾಗಿದ್ದು ಈ ನಡುವೆ ಹೊಸ ಸಿನಿಮಾ ಘೋಷಣೆ ಮಾಡಿರುವುದು ಅಭಿಮಾನಿಗಳಿಗೆ ಖುಷಿ ನೀಡಿದೆ.
ಕೆಲವು ದಿನಗಳ ಹಿಂದೆ ವೆಂಕಟ್ ಪ್ರಭು ಅವರು ಬೆಂಗಳೂರಿಗೆ ಬಂದು ಸುದೀಪ್ ಅವರನ್ನು ಭೇಟಿ ಮಾಡಿ ಕತೆ ಹೇಳಿದ್ದರು. ವೆಂಕಟ್ ಪ್ರಭು ಅವರ ಕತೆ ಸುದೀಪ್‌ಗೆ ಇಷ್ಟವಾಗಿದ್ದು ಸಿನಿಮಾ ಮಾಡಲು ಒಪ್ಪಿಗೆ ನೀಡಿದ್ದಾರೆ. ಈ ಬಗ್ಗೆ ಅವರೇ ಸಂದರ್ಶನದಲ್ಲಿ ಹೇಳಿದ್ದಾರೆ.
ನೋಡಿ | ಸಿನಿ ಮಾತು: ಕಿಚ್ಚನ ಕನಸೇನು?
ಈ ಚಿತ್ರ ದೊಡ್ಡಮಟ್ಟದಲ್ಲಿ ನಿರ್ಮಾಣವಾಗುತ್ತಿದ್ದು ಕನ್ನಡ, ತಮಿಳು, ತೆಲುಗು ಭಾಷೆಯಲ್ಲಿ ತೆರೆಗೆ ಬರಲಿದೆ. ಆದಾಗ್ಯೂ ಸಿನಿಮಾ ನಿರ್ಮಾಪಕರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.
ವೆಂಕಟ್ ಪ್ರಭು ತಮಿಳಿನಲ್ಲಿ ಹಲವು ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. ಅವರು ಇತ್ತೀಚೆಗೆ ನಿರ್ದೇಶನ ಮಾಡಿದ್ದ ‘ಮಾನಾಡು’ ಚಿತ್ರ ಹಿಟ್ ಆಗಿತ್ತು.
[wpas_products keywords=”white striped shirts for men”]