Karnataka news paper

ಟಾಲಿವುಡ್ ಸಿನಿಮಾ ನಿರ್ದೇಶಕ ಪಿ.ಚಂದ್ರಶೇಖರ್ ರೆಡ್ಡಿ ವಿಧಿವಶ


Online Desk

ಚೆನ್ನೈ: ಪ್ರಮುಖ ಚಲನ ಚಿತ್ರ ನಿರ್ದೇಶಕ ಪಿ. ಚಂದ್ರಶೇಖರ್ ರೆಡ್ಡಿ ಇಂದು ಬೆಳಗ್ಗೆ 8.30ಕ್ಕೆ ಚೆನ್ನೈನಲ್ಲಿ ನಿಧನರಾಗಿದ್ದಾರೆ. ಅವರಿಗೆ 86 ವರ್ಷ ವಯಸ್ಸಾಗಿತ್ತು.

ಸುಮಾರು 80 ಚಿತ್ರಗಳನ್ನು ಅವರು ನಿರ್ದೇಶಿಸಿದ್ದಾರೆ. ತೆಲುಗು ಚಿತ್ರ ರಂಗದ ಮೇರು ನಟರುಗಳಾದ ಡಾ. ಎನ್.‌ ಟಿ. ರಾಮರಾವ್‌, ಡಾ. ಅಕ್ಕಿನೇನಿ ನಾಗೃಶ್ವರರಾವ್‌, ಕೃಷ್ಣ, ಶೋಭನ್ ಬಾಬು, ಕೃಷ್ಣಂ ರಾಜು ರಂತಹ ಅಂದಿನ ಸುಪ್ರಿಸಿದ್ದ ನಾಯಕರೆಲ್ಲರ ಚಿತ್ರಗಳನ್ನು ನಿರ್ದೇಶಿಸಿದ್ದರು.

ಇದನ್ನೂ ಓದಿ: ಅಲ್ಲು ಅರ್ಜುನ್ ಗೆ ಬಾಲಿವುಡ್ ನಲ್ಲಿ ಚೊಚ್ಚಲ ಸಿನಿಮಾದ ಆಫರ್!

ಸೂಪರ್ ಸ್ಟಾರ್ ಕೃಷ್ಣ ಅವರ ಬಹುತೇಕ ಚಿತ್ರಗಳನ್ನು ನಿರ್ದೇಶಿಸಿದ್ದರು. ಪಿ.ಸಿ ರೆಡ್ಡಿ ಅವರ ನಿಧನಕ್ಕೆ ಟಾಲಿವುಡ್ ಕಲಾವಿದರು ಸಂತಾಪ ಸೂಚಿಸಿದ್ದಾರೆ.



Read more…