Online Desk
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಜಿಮ್ ನಲ್ಲಿ ಕಸರತ್ತು ಮಾಡುವ ವಿಡಿಯೋವೊಂದು ಎಲ್ಲೆಡೆ ಹರಿದಾಡುತ್ತಿದೆ.
ಐವೈಸಿ ಕರ್ನಾಟಕ ಟ್ವಿಟ್ಟರ್ ನಲ್ಲಿ ಮೋದಿ ಜಿಮ್ ಮಾಡುವ ವಿಡಿಯೋ ಶೇರ್ ಮಾಡಿದ್ದು. ಎಲ್ಲಾ ಬಿಟ್ಟ ಭಂಗಿ ನೆಟ್ಟ ಎಂಬ ಕ್ಯಾಪ್ಷನ್ ನೀಡಿ ಪ್ರಧಾನಿ ನರೇಂದ್ರ ಮೋದಿ ಅವರ ಕಾಲೆಳೆದಿದೆ.
ದೇಶದ ಗಲ್ವಾನ್ ಕಣಿವೆಯಲ್ಲಿ ನಮ್ಮ 20 ಸೈನಿಕರನ್ನು ಕಳೆದುಕೊಂಡ ದುಃಖ ಇನ್ನೂ ಮಾಸಿಲ್ಲ. ಆಗಲೆ ಚೀನಾದ ಸೈನಿಕರು ಅದೇ ಸ್ಥಳದಲ್ಲಿ ನಿಂತುಕೊಂಡು ತಮ್ಮ ದೇಶಕ್ಕೆ ಹೊಸ ವರ್ಷದ ಶುಭಾಶಯ ಕೋರುತ್ತಿದ್ದರೆ, ಇತ್ತ ಮೋದಿಯವರು ಜಿಮ್ ನಲ್ಲಿ ಪೋಸ್ ಕೊಡುತ್ತಾ ಆರಾಮಾಗಿದ್ದಾರೆ ಎಂದು ಲೇವಡಿ ಮಾಡಿದೆ.
ಎಲ್ಲಾ ಬಿಟ್ಟ ಭಂಗಿ ನೆಟ್ಟ ಅನ್ನೋ ಗಾದೆಯಂತಿದೆ. pic.twitter.com/cZ49LmZaEv
— IYC Karnataka (@IYCKarnataka) January 3, 2022