ಹೈಲೈಟ್ಸ್:
- ಮತ್ತೆ ಹೆಚ್ಚಾಗುತ್ತಿದೆ ಕೊರೊನಾ ವೈರಸ್ ಪ್ರಕರಣಗಳು
- ಬಾಲಿವುಡ್ ನಟ ಜಾನ್ ಅಬ್ರಾಹಂ ದಂಪತಿಗೆ ತಗುಲಿದ ಸೋಂಕು
- ನಿರ್ಮಾಪಕಿ ಏಕ್ತಾ ಕಪೂರ್‌ಗೂ ಕೊರೊನಾ ಪಾಸಿಟಿವ್
ಬಾಲಿವುಡ್ ಹಾಗೂ ಹಿಂದಿ ಕಿರುತೆರೆಯಲ್ಲಿ ದೊಡ್ಡ ನಿರ್ಮಾಪಕಿ ಎನಿಸಿಕೊಂಡಿರುವ ಏಕ್ತಾ ಕಪೂರ್ ಅವರಿಗೆ ಕೊರೊನಾ ಪಾಸಿಟಿವ್ ಆಗಿದೆ. ಸ್ವತಃ ಈ ವಿಚಾರವನ್ನು ಸೋಮವಾರ (ಜ.3) ಅವರೇ ಬಹಿರಂಗಪಡಿಸಿದ್ದಾರೆ. 46 ವರ್ಷದ ಏಕ್ತಾ, ಸದ್ಯ ಕ್ವಾರಂಟೈನ್‌ನಲ್ಲಿದ್ದಾರೆ. ಜೊತೆಗೆ ಎಲ್ಲ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ಅವರು ತೆಗೆದುಕೊಂಡಿದ್ದಾರೆ. ಬಾಲಿವುಡ್ ನಟ ಜಾನ್ ಅಬ್ರಾಹಂ ದಂಪತಿಗೂ ಕೂಡ ಕೊರೊನಾ ಪಾಸಿಟಿವ್ ಆಗಿದೆ.
ಇನ್‌ಸ್ಟಾಗ್ರಾಮ್‌ನಲ್ಲಿ ಮಾಹಿತಿ ಹಂಚಿಕೊಂಡ ನಿರ್ಮಾಪಕಿ
‘ಎಲ್ಲಾ ರೀತಿಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡರೂ ಕೂಡ ನನಗೆ ಕೋವಿಡ್ ಪಾಸಿಟಿವ್ ಆಗಿದೆ. ಸದ್ಯ ನಾನು ಕ್ಷೇಮವಾಗಿದ್ದೇನೆ. ನನ್ನ ಮನವಿ ಏನೆಂದರೆ, ಈಚೆಗೆ ನನ್ನ ಪ್ರಾಥಮಿಕ ಸಂಪರ್ಕಕ್ಕೆ ಬಂದ ಎಲ್ಲರೂ ಕೂಡ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಿ’ ಎಂದು ಏಕ್ತಾ ಕಪೂರ್ ಹೇಳಿದ್ದಾರೆ. ಏಕ್ತಾ ಅವರು ಬೇಗ ಗುಣ ಆಗಲಿ ಎಂದು ಧೀರಜ್ ಧೂಪರ್, ವಿಕ್ರಾಂತ್ ಮೆಸ್ಸಿ, ಮೌನಿ ರಾಯ್, ಹಿನಾ ಖಾನ್ ಮುಂತಾದವರು ಹಾರೈಸಿದ್ದಾರೆ.
ಜಾನ್ ಅಬ್ರಾಹಂ ಹೇಳಿದ್ದೇನು?
ನಟ ಜಾನ್ ಅಬ್ರಾಹಂ ಮತ್ತು ಅವರ ಪತ್ನಿ ಪ್ರಿಯಾ ರುಂಚಲ್ ಅವರಿಗೆ ಕೊರೊನಾ ಪಾಸಿಟಿವ್ ಆಗಿದೆ. ಇವರಿಬ್ಬರು ಎರಡು ಡೋಸ್ ವ್ಯಾಕ್ಸಿನ್ ಪಡೆದುಕೊಂಡಿದ್ದಾರೆ. ಸದ್ಯ ಇಬ್ಬರಿಗೂ ಸಣ್ಣ ಪ್ರಮಾಣದ ಕೊರೊನಾ ರೋಗದ ಲಕ್ಷಣಗಳಿವೆ. ‘ಮೂರು ದಿನಗಳ ಹಿಂದೆ ಒಬ್ಬ ವ್ಯಕ್ತಿಯ ಸಂಪರ್ಕಕ್ಕೆ ಬಂದಿದ್ದೆ. ನಂತರ ಅವರಿಗೆ ಕೊರೊನಾ ಇರುವುದು ಗೊತ್ತಾಗಿತ್ತು. ನಾನು ಮತ್ತು ಪ್ರಿಯಾ ಕೋವಿಡ್ ಪಾಸಿಟಿವ್ ಆಗಿದ್ದೇವೆ. ನಾವಿಬ್ಬರೂ ಕೂಡ ಮನೆಯಲ್ಲೇ ಐಸೋಲೇಟ್ ಆಗಿದ್ದೇವೆ. ನಾವು ಯಾರ ಸಂಪರ್ಕಕ್ಕೂ ಬಂದಿಲ್ಲ. ನಮ್ಮಿಬ್ಬರಿಗೂ ವ್ಯಾಕ್ಸಿನ್ ಆಗಿದೆ. ಸಣ್ಣ ಪ್ರಮಾಣದ ರೋಗ ಲಕ್ಷಣಗಳನ್ನು ನಾವು ಎದುರಿಸುತ್ತಿದ್ದೇವೆ. ಎಲ್ಲರೂ ಹುಷಾರಾಗಿರಿ, ಮಾಸ್ಕ್ ಧರಿಸುವುದುನ್ನು ಮರೆಯಬೇಡಿ’ ಎಂದು ಹೇಳಿದ್ದಾರೆ.
ಮಹಾರಾಷ್ಟ್ರ, ದಿಲ್ಲಿ, ಬಂಗಾಳದಲ್ಲಿಯೂ ಕೊರೊನಾ ಸ್ಫೋಟ: ನಿಯಂತ್ರಣ ಮೀರುತ್ತಿದೆ ಸನ್ನಿವೇಶ
ಸಿನಿಮಾ ವಿಚಾರಕ್ಕೆ ಬರುವುದಾದರೆ, ಜಾನ್ ಅಬ್ರಾಹಂ ನಟಿಸಿರುವ ‘ಅಟ್ಯಾಕ್’ ಸಿನಿಮಾವು ಜನವರಿ 28ಕ್ಕೆ ತೆರೆಗೆ ಬರಲಿದೆ. ಈ ಚಿತ್ರದಲ್ಲಿ ಅವರೊಂದಿಗೆ ರಾಕುಲ್ ಪ್ರೀತ್ ಸಿಂಗ್ ಮತ್ತು ಜಾಕ್ವೇಲಿನ್ ಫರ್ನಾಂಡಿಸ್ ನಟಿಸಿದ್ದಾರೆ. ಲಕ್ಷ್ಯ ರಾಜ್ ಆನಂದ್ ಇದರ ನಿರ್ದೇಶನ ಮಾಡಿದ್ದಾರೆ.
ಶಾಲಾ ಕಾಲೇಜುಗಳು ಬಂದ್, ಕಚೇರಿಗಳಲ್ಲಿ ಶೇ 50ರಷ್ಟು ಅವಕಾಶ: ಬಂಗಾಳದಲ್ಲಿ ಮತ್ತೆ ನಿರ್ಬಂಧ

ಕೇರಳದಲ್ಲಿ ಜ.3ರಿಂದ ಮಕ್ಕಳಿಗೆ ವ್ಯಾಕ್ಸಿನೇಶನ್; ಇಂದಿನಿಂದ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಲಸಿಕೆ ಲಭ್ಯ
