The New Indian Express
ನಟ ಪ್ರಜ್ವಲ್ ದೇವರಾಜ್ ಕೈತುಂಬಾ ಹಲವು ಸಿನಿಮಾಗಳಿವೆ, ಖಾದರ್ ಕುಮಾರ್ ಅವರ ವೀರಂ ಮತ್ತು ಎಚ್.ಎಸ್ ಲೋಹಿತ್ ಅವರ ಮಾಫಿಯಾ ಸಿನಿಮಾದಲ್ಲಿ ಸದ್ಯ ಪ್ರಜ್ವಲ್ ಬ್ಯುಸಿಯಾಗಿದ್ದಾರೆ.
ಇದೇ ವೇಳೆ ತಮ್ಮ ಸ್ನೇಹಿತ ಪನ್ನಾಗಭರಣ ಜೊತೆಯಲ್ಲಿ ಮತ್ತೆರಡು ಸಿನಿಮಾ ಮಾಡಲು ತಯಾರಾಗಿದ್ದಾರೆ. ಎರಡು ಸಿನಿಮಾಗಳ ಬಗ್ಗೆ ಒಂದು ವರ್ಷದ ಹಿಂದೆಯೇ ಚರ್ಚಿಸಲಾಗಿತ್ತು, ಆದರೆ ಕೋವಿಡ್ ಇದ್ದ ಕಾರಣ ಪ್ರಾಜೆಕ್ಟ್ ವಿಳಂಭವಾಗಿತ್ತು. ಈಗ ಮತ್ತೆ ಸಿನಿಮಾ ಬಗ್ಗೆ ಚರ್ಚೆ ನಡೆಸಿದ್ದು ಶೀಘ್ರದಲ್ಲೆ ಚಿತ್ರದ ಬಗ್ಗೆ ಘೋಷಣೆ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆದರೆ ಯಾವಾಗ ಆರಂಭವಾಗಲಿದೆ ಎಂಬ ಬಗ್ಗೆ ಇನ್ನೂ ಸರಿಯಾದ ಮಾಹಿತಿ ದೊರೆತಿಲ್ಲ.
ಇದನ್ನೂ ಓದಿ: ‘ಅರ್ಜುನ್ ಗೌಡ’ ಸಿನಿಮಾವನ್ನು ‘ಲಾಕಪ್ ಡೆತ್’ ಥರ ಮಾಡಬೇಕೆಂದು ನಿರ್ಮಾಪಕ ರಾಮು ಆಶಿಸಿದ್ದರು: ಪ್ರಜ್ವಲ್ ದೇವರಾಜ್
ರಾಮ್ ನಾರಾಯಣ್ ನಿರ್ದೇಶಿಸಿ ಪ್ರಜ್ವಲ್ ದೇವರಾಜ್ ನಟಿಸಿರುವ ಅಬ್ಬರ ರಿಲೀಸ್ ಗಾಗಿ ಕಾಯುತ್ತಿದೆ. ಸದ್ಯ ಮಾಫಿಯಾ ಸಿನಿಮಾ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಜಕ್ಕ ಹರಿಪ್ರಸಾದ್ ನಿರ್ದೇಶನದ ಮತ್ತೊಂದು ಥ್ರಿಲ್ಲರ್ ಸಿನಿಮಾಗೂ ಪ್ರಜ್ವಲ್ ಸಹಿ ಮಾಡಿದ್ದಾರೆ.
ಪ್ರೆಂಚ್ ಬಿರಿಯಾನಿ ನಿರ್ದೇಶಕ ಪನ್ನಗಾಭರಣ ಪಾರುಲ್ ಯಾದವ್ ಅವರ ಮುಂದಿನ ಸಿನಿಮಾ ಡೈರೆಕ್ಷನ್ ಮಾಡಲು ಸಿದ್ಧತೆ ನಡೆಸಿದ್ದಾರೆ. ಆದರೆ ಇನ್ನೂ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.