Karnataka news paper

ಅಗ್ಗದ ಬೆಲೆಯಲ್ಲಿ ಲಭ್ಯ ಇರುವ ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳು!


|

ಸ್ಮಾರ್ಟ್‌ಫೋನ್‌ ಮಾರುಕಟ್ಟೆಗೆ ಹಲವು ಹೊಸ ಸ್ಮಾರ್ಟ್‌ಫೋನ್‌ಗಳು ಎಂಟ್ರಿ ಕೊಡುತ್ತಲೇ ಸಾಗಿದ್ದು, ಅವುಗಳಲ್ಲಿ ಬಜೆಟ್‌ ಬೆಲೆಯ ಸ್ಮಾರ್ಟ್‌ಫೋನ್‌ಗಳು ಹೆಚ್ಚು ಆಕರ್ಷಕ ಎನಿಸುತ್ತಿವೆ. ಇತ್ತೀಚಿನ ಹೊಸ ಸ್ಮಾರ್ಟ್‌ಫೋನ್‌ಗಳಲ್ಲಿ ತ್ರಿವಳಿ ಕ್ಯಾಮೆರಾ, ಕ್ವಾಡ್‌ ಕ್ಯಾಮೆರಾ, ಅಧಿಕ ಪ್ರೊಸೆಸರ್‌, ಬಿಗ್ ಬ್ಯಾಟರಿ ಫೀಚರ್ಸ್‌ಗಳು ಸೇರಿದಂತೆ ಫೋನ್‌ ವಿನ್ಯಾಸಕ್ಕೂ ಹೆಚ್ಚಿನ ಗಮನ ನೀಡಲಾಗುತ್ತಿದೆ. ಅದಾಗ್ಯೂ ಕಡಿಮೆ ಬೆಲೆಗೆ ಲಭ್ಯ ಆಗುವ ಫೋನ್‌ಗಳಿಗೆ ಡಿಮ್ಯಾಂಡ್‌ ಜಾಸ್ತಿ.

ಅಗ್ಗದ ಬೆಲೆಯಲ್ಲಿ ಲಭ್ಯ ಇರುವ ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳು!

ಹೌದು, ಶಿಯೋಮಿ, ಸ್ಯಾಮ್‌ಸಂಗ್, ಒಪ್ಪೋ, ರಿಯಲ್‌ಮಿ ಸೇರಿದಂತೆ ಇತರೆ ಕಂಪನಿಗಳು ಭಿನ್ನ ಪ್ರೈಸ್‌ ಟ್ಯಾಗ್‌ನಲ್ಲಿ ಫೋನ್‌ಗಳ ಆಯ್ಕೆ ಹೊಂದಿವೆ. ಆದರೆ ಅನೇಕ ಗ್ರಾಹಕರು ಬಜೆಟ್‌ ದರದಲ್ಲಿ ಅತ್ಯುತ್ತಮ ಫೀಚರ್ಸ್‌ಗಳಿರುವ ಸ್ಮಾರ್ಟ್‌ಫೋನ್‌ ಖರೀದಿಗೆ ಮುಂದಾಗುತ್ತಾರೆ. ಈ ನಿಟ್ಟಿನಲ್ಲಿ ಮೊಬೈಲ್ ಕಂಪನಿಗಳು ಅಗ್ಗದ ಫೋನಿನಲ್ಲಿಯೂ ಅತ್ಯುತ್ತಮ ಫೀಚರ್ಸ್‌ ಪರಿಚಯಿಸಿ ಗ್ರಾಹಕರನ್ನು ತಮ್ಮತ್ತ ಸೆಳೆದಿವೆ. ಹಾಗಾದರೇ 10,000ರೂ. ಒಳಗೆ ಲಭ್ಯ ಇರುವ ಕೆಲವು ಅತ್ಯುತ್ತಮ ಫೋನ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಅಗ್ಗದ ಬೆಲೆಯಲ್ಲಿ ಲಭ್ಯ ಇರುವ ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳು!

ರಿಯಲ್‌ಮಿ ನಾರ್ಜೋ 30A
ರಿಯಲ್‌ಮಿ ನಾರ್ಜೋ 30A ಸ್ಮಾರ್ಟ್‌ಫೋನ್‌ 10,000 ಕ್ಕಿಂತ ಕಡಿಮೆ ಬೆಲೆಯ ಉತ್ತಮ ಸ್ಮಾರ್ಟ್‌ಫೋನ್‌ಗಳಲ್ಲಿ ಒಂದಾಗಿದೆ. ಇದು 1600 x 720-ಪಿಕ್ಸೆಲ್ ರೆಸಲ್ಯೂಶನ್ ಹೊಂದಿರುವ ದೊಡ್ಡ 6.51-ಇಂಚಿನ HD+ ಡಿಸ್ಪ್ಲೇಯೊಂದಿಗೆ ಬರುತ್ತದೆ. ಹಾಗೆಯೇ ಹಿಲಿಯೋ G85 ಆಕ್ಟಾ-ಕೋರ್ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಜೊತೆಗೆ 60Hz ರಿಫ್ರೆಶ್ ದರವನ್ನು ಬೆಂಬಲಿಸುತ್ತದೆ. ಇದು ಯೋಗ್ಯವಾದ 13 ಮೆಗಾ ಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಮತ್ತು 2 ಮೆಗಾ ಪಿಕ್ಸೆಲ್ ಆಳ ಸಂವೇದಕದೊಂದಿಗೆ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಅಪ್ ಅನ್ನು ಹೊಂದಿದೆ. ಮುಂಭಾಗದಲ್ಲಿ 8 ಮೆಗಾ ಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.

ಮೊಟೊ G10 ಪವರ್
ಮೊಟೊ G10 ಪವರ್ ಫೋನ್‌ 6.51-ಇಂಚಿನ ಹೆಚ್‌ಡಿ+ ಡಿಸ್ಪ್ಲೇಯನ್ನು ಹೊಂದಿದೆ. ಈ ಫೋನ್ ಸ್ನ್ಯಾಪ್‌ಡ್ರಾಗನ್ 460 ಪ್ರೊಸೆಸರ್ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುತ್ತದೆ. ಮೊಟೊ G10 ಪವರ್ ಫೋನ್ 48 ಮೆಗಾ ಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಮತ್ತು 8 ಮೆಗಾ ಪಿಕ್ಸೆಲ್ ಮುಂಭಾಗದ ಸೆಲ್ಫಿ ಕ್ಯಾಮೆರಾದೊಂದಿಗೆ ಕ್ವಾಡ್ ರಿಯರ್ ಕ್ಯಾಮೆರಾ ಸೆಟಅಪ್ ಅನ್ನು ಹೊಂದಿದೆ. ಹಾಗೆಯೇ ಈ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್‌ 11 ಓಎಸ್‌ ಸಪೋರ್ಟ್‌ ಪಡೆದಿದೆ. ಜೊತೆಗೆ 4 GB RAM ಮತ್ತು 64 GB ಆಂತರಿಕ ಸಂಗ್ರಹಣೆಯೊಂದಿಗೆ 6000mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ.

ಅಗ್ಗದ ಬೆಲೆಯಲ್ಲಿ ಲಭ್ಯ ಇರುವ ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳು!

ರೆಡ್ಮಿ 9 ಪ್ರೈಮ್‌ ಸ್ಮಾರ್ಟ್‌ಫೋನ್‌
ರೆಡ್ಮಿ 9 ಪ್ರೈಮ್‌ ಸ್ಮಾರ್ಟ್‌ಫೋನ್‌ 1080×2340 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.53-ಇಂಚಿನ ಫುಲ್‌ ಹೆಚ್‌ಡಿ + ಡಿಸ್‌ಪ್ಲೇ ಯನ್ನು ಹೊಂದಿದೆ. ಈ ಡಿಸ್‌ಪ್ಲೇಯು 19.5: 9 ರಚನೆಯ ಅನುಪಾತವನ್ನು ಹೊಂದಿದೆ. ಆಕ್ಟಾ-ಕೋರ್ ಮೀಡಿಯಾ ಟೆಕ್ ಹಿಲಿಯೊ G80 ಪ್ರೊಸೆಸರ್ ಹೊಂದಿದ್ದು, ಆಂಡ್ರಾಯ್ಡ್‌ 10 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೇಯೆ ಈ ಸ್ಮಾರ್ಟ್‌ಫೋನ್ 4GB RAM ಮತ್ತು 64GB ಆಂತರಿಕ ಸಂಗ್ರಹ ಸಾಮರ್ಥ್ಯವನ್ನು ಹೊಂದಿದೆ. ಈ ಸ್ಮಾರ್ಟ್‌ಫೋನ್‌ ಕ್ವಾಡ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಒಳಗೊಂಡಿದೆ. ಇದರಲ್ಲಿ 13 ಮೆಗಾ ಪಿಕ್ಸೆಲ್ ಹೊಂದಿದೆ. ಹಾಗೆಯೇ 5,020mAh ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ಅಪ್‌ ಅನ್ನು ಹೊಂದಿದೆ.

ಮೈಕ್ರೋಮ್ಯಾಕ್ಸ್ ಇನ್ 1
ಮೈಕ್ರೋಮ್ಯಾಕ್ಸ್ ಇನ್ 1 ಸ್ಮಾರ್ಟ್‌ಫೋನ್ 6.67-ಇಂಚಿನ ಪೂರ್ಣ HD+ ಡಿಸ್ಪ್ಲೇ ಜೊತೆಗೆ 1080 x 2400 ಪಿಕ್ಸೆಲ್‌ಗಳ ರೆಸಲ್ಯೂಶನ್‌ನೊಂದಿಗೆ ಬರುತ್ತದೆ. ಇದು ಮೀಡಿಯಾ ಟೆಕ್ ಹಿಲಿಯೋ G80 ಪ್ರೊಸೆಸರ್‌ನಿಂದ ಚಾಲಿತವಾಗಿದೆ ಮತ್ತು 4 GB RAM ನೊಂದಿಗೆ ಬರುತ್ತದೆ. ಇದು ಆಂಡ್ರಾಯ್ಡ್ 10 ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದರ ಜೊತೆಗೆ 5000 mAh ಬ್ಯಾಟರಿ ಬ್ಯಾಕ್‌ಅಪ್‌ ಹೊಂದಿದೆ.

Best Mobiles in India

  • 54,535

  • 1,19,900

  • 54,999

  • 86,999

  • 49,975

  • 49,990

  • 20,999

  • 1,04,999

  • 44,999

  • 64,999

  • 20,699

  • 49,999

  • 11,499

  • 54,999

  • 7,999

  • 8,980

  • 17,091

  • 10,999

  • 34,999

  • 39,600


  • 25,750


  • 33,590


  • 27,760


  • 44,425


  • 13,780


  • 1,25,000


  • 45,990


  • 1,35,000


  • 82,999


  • 17,999

English summary

Top Smartphones Under Rs 10,000 in November 2021: Redmi 9 Prime And More.

Story first published: Friday, November 5, 2021, 11:43 [IST]



Read more…