ಬೆಂಗಳೂರಿನಲ್ಲಿ ಫೈನಾನ್ಶಿಯರ್ ಕೊಲೆಗೈದು ತಲೆಮರೆಸಿಕೊಂಡಿದ್ದ ಕುಖ್ಯಾತ ರೌಡಿ ಶೀಟರ್ ಕಾಲಿಗೆ ಗುಂಡೇಟು..!
ಪ್ರಯಾಣಿಕರ ಸೋಗಿನಲ್ಲಿ ದರೋಡೆ ಮಾಡುತ್ತಿದ್ದವರ ಬಂಧನ
ಪ್ರಯಾಣಿಕರ ಸೋಗಿನಲ್ಲಿಆಟೋ ಏರಿ, ಚಾಲಕನನ್ನೇ ದರೋಡೆ ಮಾಡಿದ್ದ ನಾಲ್ವರು ದುಷ್ಕರ್ಮಿಗಳನ್ನು ಬೆಂಗಳೂರು: ಬ್ಯಾಟರಾಯನಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬ್ಯಾಟರಾಯನಪುರದ ನಾಗೇಂದ್ರ (25), ದೊಡ್ಡವೀರೇಗೌಡ (29), ದರ್ಶನ್ (26), ಶಿವಕುಮಾರ್ (27) ಬಂಧಿತರು. ಈ ಆರೋಪಿಗಳಿಂದ 3 ಲಕ್ಷ ರೂ. ಮೌಲ್ಯದ ಆಟೋ, 2 ಮೊಬೈಲ್, 46 ಗ್ರಾಂ ತೂಕದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳ ಬಂಧನದಿಂದ ಕೆಂಗೇರಿ, ಕನಕಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಒಂದು ಸುಲಿಗೆ, ಮನೆಗಳವು ಹಾಗೂ ಒಂದು ಸರಗಳವು ಪ್ರಕರಣ ಬೆಳಕಿಗೆ ಬಂದಿದೆ.
ಗಿರಿನಗರದ ನಿವಾಸಿ, ಆಟೋ ಚಾಲಕ ಶಿವಕುಮಾರ್ ನ.17ರಂದು ಜಯನಗರ, ಬಸವನಗುಡಿಯಲ್ಲಿ ಬಾಡಿಗೆ ಓಡಿಸಿ, ರಾತ್ರಿ 11 ಗಂಟೆಗೆ ಮನೆಗೆ ಹಿಂತಿರುಗುತ್ತಿದ್ದರು. ರಿಂಗ್ ರಸ್ತೆಯಲ್ಲಿರುವ ಪಿಇಎಸ್ ಕಾಲೇಜು ಪಕ್ಕದ ಬಸ್ ನಿಲ್ದಾಣದಲ್ಲಿ ನಾಲ್ವರು ಆರೋಪಿಗಳು, ಆಟೋ ನಿಲ್ಲಿಸುವಂತೆ ಹೇಳಿದ್ದರು. ಲಗ್ಗೆರೆಗೆ ಹೋಗಬೇಕೆಂದು ತಿಳಿಸಿದ್ದರು.
ನಾಯಂಡಹಳ್ಳಿ ಜಂಕ್ಷನ್ ಬಳಿ ಬಂದಾಗ ರೈಲ್ವೆ ನಿಲ್ದಾಣದತ್ತ ಕರೆದುಕೊಂಡು ಹೋಗುವಂತೆ ಸೂಚಿಸಿದ್ದರು. ಅದರಂತೆ ನಾಯಂಡಹಳ್ಳಿಯ ಸ್ಲಂ ಕಡೆ ಶಿವಕುಮಾರ್ ಹೋಗುತ್ತಿದ್ದಂತೆಯೇ, ಏಕಾಏಕಿ ಆಟೋ ನಿಲ್ಲಿಸುವಂತೆ ಬೆದರಿಕೆ ಹಾಕಿದ್ದಾರೆ. ಆನಂತರ ಶಿವಕುಮಾರ್ ಬಳಿ ಇದ್ದ ಎರಡು ಮೊಬೈಲ್, 9 ಸಾವಿರ ರೂ. ನಗದು ಕಿತ್ತುಕೊಂಡು ಬಲವಂತವಾಗಿ ಅವರನ್ನು ಆಟೋದ ಹಿಂಬದಿ ಆಸನದಲ್ಲಿ ಕೂರಿಸಿದ್ದಾರೆ.
ಪತ್ನಿಗೆ ಅಶ್ಲೀಲ ಸಂದೇಶ ಕಳುಹಿಸಿದೆನೆಂದು ಆರೋಪಿಸಿ ಸೆಕ್ಯೂರಿಟಿ ಮೇಲೆ ಹಲ್ಲೆ..!
ನಾಲ್ಕು ಮಂದಿ ದುಷ್ಕರ್ಮಿಗಳ ಪೈಕಿ ಒಬ್ಬ ಆಟೋ ಓಡಿಸಿಕೊಂಡು ನಾಯಂಡಹಳ್ಳಿ ಜಂಕ್ಷನ್ ಕಡೆ ಬಂದಾಗ, ಪೊಲೀಸರು ನಿಂತಿರುವುದನ್ನು ಕಂಡು ಶಿವಕುಮಾರ್ ಕಿರುಚಿಕೊಂಡಿದ್ದಾರೆ. ಅನುಮಾನಗೊಂಡ ಹೊಯ್ಸಳ ಸಿಬ್ಬಂದಿ ಆಟೋವನ್ನು ಹಿಂಬಾಲಿಸಿಕೊಂಡು ಹೋಗಿದ್ದಾರೆ. ಪೊಲೀಸರು ಬೆನ್ನಟ್ಟುತ್ತಿರುವುದನ್ನು ಕಂಡು ಆತಂಕಗೊಂಡ ಆರೋಪಿಗಳು ಶಿವಕುಮಾರ್‌ನ್ನು ಬಲವಂತವಾಗಿ ಆಟೋದಿಂದ ಕೆಳಗೆ ತಳ್ಳಿ ಪರಾರಿಯಾಗಿದ್ದರು.
ಪ್ರಕರಣ ದಾಖಲಿಸಿಕೊಂಡಿದ್ದ ಬ್ಯಾಟರಾಯನಪುರ ಠಾಣೆ ಪೊಲೀಸರು ಮೊಬೈಲ್ ಟವರ್ ಲೊಕೇಶನ್ ಆಧರಿಸಿ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ.