The New Indian Express
ಬೆಂಗಳೂರು: ಹೊಸ ವರ್ಷಕ್ಕೆ ನಮ್ಮಲ್ಲಿ ಅನೇಕರು ಹಲವು ಬಗೆಯ ರೆಸಲ್ಯೂಷನ್ನುಗಳನ್ನು ಇಟ್ಟುಕೊಂಡಿರುತ್ತಾರೆ. ಸ್ಲಿಮ್ ಆಗಬೇಕೆಂದೋ, ಪ್ರಮೋಷನ್ ಪಡೆಯಬೇಕೆಂದೋ ಹೀಗೆ ಇತ್ಯಾದಿ. ಆದರೆ ಬೆಂಗಳೂರಿನ ಆದಾಯ ತೆರಿಗೆ ಕಚೇರಿಯಲ್ಲಿ ಉದ್ಯೋಗ ನಿರ್ವಹಿಸುತ್ತಿರುವ ಅಧಿಕಾರಿ ಕುಮಾರೇಶ್ ಎಂಬುವವರ ರೆಸಲ್ಯೂಷನ್ನು, ಕ್ರಿಯೇಟಿವ್ ಆಗಿ ಹೊಸ ವರ್ಷದ ಗ್ರೀಟಿಂಗ್ ಕಾರ್ಡು, ಕ್ಯಾಲೆಂಡರುಗಳನ್ನು ತಯಾರಿಸುವುದು.
ಇದನ್ನೂ ಓದಿ: 1 ಗಂಟೆಯಲ್ಲಿ ಅತಿ ಹೆಚ್ಚು ಜನರಿಗೆ ಮೆಹಂದಿ ಹಚ್ಚಿದ ಭಾರತದ ಯುವತಿ: ಪಾಕ್ ಮಹಿಳೆಯ ಗಿನ್ನೆಸ್ ದಾಖಲೆ ಧೂಳಿಪಟ
ಗಣಿತದ ಸಮಸ್ಯೆಗಳು, ಮೆದುಳಿಗೆ ಕಸರತ್ತು ನೀಡುವ ಪಜಲ್ ಗಳನ್ನು ಹೊಂದಿದ ಕ್ಯಾಲೆಂಡರುಗಳನ್ನು ತಯಾರಿಸುವುದು ಅವರ ವೈಶಿಷ್ಟ್ಯ.
ಇದನ್ನೂ ಓದಿ: ಪುಡಿಗಾಸು ಕಡಲೆಕಾಯಿ ಸಾಲ ಹಿಂದಿರುಗಿಸಲು ಅಮೆರಿಕದಿಂದ ಭಾರತಕ್ಕೆ ಹಾರಿಬಂದ ಅಣ್ಣ ತಂಗಿ
ಕುಮಾರೇಶ್ ಅವರು ತಯಾರಿಸಿರುವ ಕ್ಯಾಲೆಂಡರುಗಳಲ್ಲಿ ಅಂಡಮಾನಿನ 22 ದ್ವೀಪಗಳ ಮಾಹಿತಿ ಮತ್ತು 22 ಸಂಖ್ಯೆ ಕುರಿತಾದ ಕುತೂಹಲಕರ ಮಾಹಿತಿಯನ್ನು ಹೊಂದಿದೆ.
ಇದನ್ನೂ ಓದಿ: ಕನ್ನಡ ನಾಡಿನ ಸಮಾಜಮುಖಿ ಸೆಲಬ್ರಿಟಿಗಳು: ಕರ್ತವ್ಯಕ್ಕೂ ಜೈ ಸೇವೆಗೂ ಸೈ
ಪ್ರತಿ ವರ್ಷ ಅವರು ಕ್ಯಾಲೆಂಡರ್ ತಯಾರಿಗಾಗಿ ನಿರ್ದಿಷ್ಟ ವಿಷಯವನ್ನು ಸಿದ್ಧಪಡಿಸಿಟ್ಟುಕೊಳ್ಳುತ್ತಾರೆ. ಈ ಹಿಂದೆ ಸಚಿನ್ ತೆಂಡುಲ್ಕರ್ ಸೇರಿದಂತೆ ಹಲವ್ಯು ಖ್ಯಾತನಾಮರನ್ನು ವಿಷಯವಾಗಿ ಆರಿಸಿಕೊಂಡಿದ್ದರು.
ಇದನ್ನೂ ಓದಿ: ಜೀವನಪ್ರೀತಿ ಮೂಡಿಸುವ ಟಾಪ್ 10 ಅಸಲಿ ಕೊರೊನಾ ಪಾಸಿಟಿವ್ ಕಥೆಗಳು- 2021
ಗಣಿತ ಅವರ ಮೆಚ್ಚಿನ ವಿಷಯ ಹೀಗಾಗಿ ಯಾವ ವಿಷಯ ಆರಿಸಿಕೊಂಡರೂ ಗಣಿತವನ್ನು ಅದರೊಂದಿಗೆ ಮಿಳಿತಗೊಳಿಸಿ ಕ್ಯಾಲೆಂಡರ್, ಗ್ರೀಟಿಂಗ್ ಕಾರ್ಡುಗಳನ್ನು ಅವರು ರೂಪಿಸುತ್ತಾರೆ.
ಇದನ್ನೂ ಓದಿ: ವೀಲ್ ಚೇರ್ ಆಸರೆಯಲ್ಲಿದ್ದವರೂ ಬೀಚ್ ಸೌಂದರ್ಯ ಸವಿಯಬಹುದು: ಮರೀನಾ ಬೀಚಿನಲ್ಲಿ ವಿಕಲಾಂಗ ಸ್ನೇಹಿ ಮಾರ್ಗ ನಿರ್ಮಾಣ
ಈ ಬಾರಿಯ ವಿಷಯ ಇಳಯ ರಾಜಾ. ಒಟ್ಟು 1000 ಕ್ಯಾಲೆಂಡರುಗಳನ್ನು ಪ್ರಿಂಟ್ ಹಾಕಿಸಿರುವ ಕುಮಾರೇಶ್ ಅವುಗಳನ್ನು ತಮ್ಮ ಆಪ್ತರಿಗೆ ಕಳಿಸುತ್ತಾರೆ.
ಇದನ್ನೂ ಓದಿ: ಇಂಧನ ಬೆಲೆಯೇರಿಕೆ ಬಿಸಿಯಿಂದ ತಪ್ಪಿಸಿಕೊಳ್ಳಲು ಅಸಲಿ ‘ಹಾರ್ಸ್ ಪವರ್’ ಮೊರೆ ಹೋದ ಫಾರೆಸ್ಟ್ ವಾಚರ್