Karnataka news paper

ಮಾರುತಿ ಸುಜುಕಿ ಕಾರುಗಳ ಮಾರಾಟ ಕುಸಿತ; ಡಿಸೆಂಬರ್‌ನಲ್ಲಿ ಹ್ಯುಂಡೈ ಹಿಂದಿಕ್ಕಿದ ಟಾಟಾ


The New Indian Express

ನವದೆಹಲಿ: ಭಾರತದ ಎರಡು ಪ್ರಮುಖ ಕಾರು ತಯಾರಿಕಾ ಕಂಪನಿಗಳಾದ ಮಾರುತಿ ಸುಜುಕಿ(MSIL) ಮತ್ತು ಹ್ಯುಂಡೈ ಕಾರುಗಳ ದೇಶೀಯ ಮಾರಾಟದಲ್ಲಿ ಗಮನಾರ್ಹ ಕುಸಿತದೊಂದಿಗೆ 2021 ಕೊನೆಗೊಂಡಿದೆ.

ಸುಮಾರು ಅರ್ಧದಷ್ಟು ಭಾರತದ ಪ್ರಯಾಣಿಕ ವಾಹನ(PV) ಮಾರುಕಟ್ಟೆಯನ್ನು ನಿಯಂತ್ರಿಸುವ ಮಾರುತಿ ಸುಜುಕಿ, ಡಿಸೆಂಬರ್ 2021 ರಲ್ಲಿ ದೇಶೀಯ ಮಾರುಕಟ್ಟೆಯಲ್ಲಿ 123,016 PV ಗಳನ್ನು ಮಾರಾಟ ಮಾಡಿದೆ. ಒಂದು ವರ್ಷದ ಹಿಂದೆ ಇದೇ ತಿಂಗಳಲ್ಲಿ 140,754 ಯುನಿಟ್‌ಗಳನ್ನು ಮಾರಾಟ ಮಾಡಿತ್ತು. ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಶೇ 13 ರಷ್ಟು ಕುಸಿತವಾಗಿದೆ.

ಇದನ್ನು ಓದಿ: ದೈತ್ಯ ಸೆಮಿಕಂಡಕ್ಟರ್ ಕಂಪನಿಗಳು ಭಾರತದಲ್ಲಿ ಹೂಡಿಕೆ ಮಾಡುವುದನ್ನು ಎದುರು ನೋಡುತ್ತಿದ್ದೇವೆ: ರಾಜೀವ್ ಚಂದ್ರಶೇಖರ್

“ಎಲೆಕ್ಟ್ರಾನಿಕ್ ಘಟಕಗಳ ಕೊರತೆಯು ಡಿಸೆಂಬರ್ ತಿಂಗಳಲ್ಲಿ ವಾಹನಗಳ ಉತ್ಪಾದನೆಯ ಮೇಲೆ ಅಲ್ಪ ಪರಿಣಾಮ ಬೀರಿತು. ಕೊರತೆಯು ಪ್ರಾಥಮಿಕವಾಗಿ ದೇಶೀಯ ಮಾರುಕಟ್ಟೆಯಲ್ಲಿ ಮಾರಾಟವಾದ ವಾಹನಗಳ ಉತ್ಪಾದನೆಯ ಮೇಲೆ ಪರಿಣಾಮ ಬೀರಿತು. ಕಂಪನಿಯು ಪರಿಣಾಮವನ್ನು ಕಡಿಮೆ ಮಾಡಲು ಸಾಧ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಂಡಿದೆ” ಎಂದು ಮಾರುತಿ ಸುಜುಕಿ ಶನಿವಾರ ನಿಯಂತ್ರಕ ಫೈಲಿಂಗ್‌ನಲ್ಲಿ ತಿಳಿಸಿದೆ.

ಇನ್ನೂ ಭಾರತದ ಎರಡನೇ ಅತಿದೊಡ್ಡ ಕಾರು ತಯಾರಕ ಹ್ಯುಂಡೈ ಕಂಪನಿಯು ಡಿಸೆಂಬರ್ 2020 ರಲ್ಲಿ 47,400 ಯುನಿಟ್‌ಗಳನ್ನು ಮಾರಾಟ ಮಾಡಿತ್ತು. ಆದರೆ 2021ರ ಡಿಸೆಂಬರ್ ನಲ್ಲಿ 32,312 ಯುನಿಟ್‌ಗಳನ್ನು ಮಾರಾಟ ಮಾಡಿದ್ದು, ಶೇ. 32 ರಷ್ಟು ಕುಸಿತ ಕಂಡಿದೆ.

ಹೆಚ್ಚು ಗಮನಾರ್ಹವಾದ ಸಂಗತಿಯೆಂದರೆ, ಟಾಟಾ ಮೋಟಾರ್ಸ್ ಒಂದು ದಶಕದ ನಂತರ ಮೊದಲ ಬಾರಿಗೆ ಕೊರಿಯನ್ ಕಾರು ತಯಾರಕ ಕಂಪನಿಯನ್ನು ಹಿಂದಿಕ್ಕಿದೆ. ಹ್ಯುಂಡೈ ಕಳೆದ ಡಿಸೆಂಬರ್ ನಲ್ಲಿ 32,312 ಯೂನಿಟ್‌ ಕಾರುಗಳನ್ನು ಮಾರಾಟ ಮಾಡಿದ್ದರೆ, ಟಾಟಾ ಮೋಟಾರ್ಸ್ 35,299 ಯುನಿಟ್‌ಗಳನ್ನು ಮಾರಾಟ ಮಾಡಿದೆ.



Read more…