Karnataka news paper

ನಿಮ್ಮ ವೋಟರ್ ಐಡಿ ಕಾರ್ಡ್‌ನಲ್ಲಿ ವಿಳಾಸವನ್ನು ಬದಲಾಯಿಸಲು ಹೀಗೆ ಮಾಡಿ?


ವೋಟರ್‌ ಐಡಿ

ಹೌದು, ವೋಟರ್‌ ಐಡಿ ಇದು ಪ್ರಮುಖ ಗುರುತಿನ ಚೀಟಿಯಾಗಿ ಅವಶ್ಯಕವಾಗಿದೆ. ಇದು ಭಾರತೀಯ ನಾಗರಿಕರಿಗೆ ಗುರುತಿನ ಪುರಾವೆ ಅಥವಾ ವಿಳಾಸ ಪುರಾವೆಯಾಗಿ ಕಾರ್ಯನಿರ್ವಹಿಸುತ್ತದೆ. ಈ ಕಾರ್ಡ್ ಮತದಾನಕ್ಕೆ ಮಾತ್ರ ಮಾನ್ಯವಾಗಿಲ್ಲ, ಅಗತ್ಯವಿರುವಲ್ಲಿ ಹಲವಾರು ಸರ್ಕಾರಿ ಯೋಜನೆಗಳಿಗೆ ಮತದಾರರ ಚೀಟಿ ಅವಶ್ಯಕತೆ ಇದೆ. ಇನ್ನು ನೀವು ವಾಸಿಸುವ ವಿಳಾಶ ಪುರಾವೆಯಾಗಿ ಕೂಡ ವೋಟರ್‌ ಐಡಿ ಪ್ರಮುಖ ದಾಖಲೆಯಾಗಿದೆ. ಒಂದು ವೇಳೆ ನೀವು ವಿಳಾಸವನ್ನು ಬದಲಾಯಿಸಿಕೊಂಡರೆ ನಿಮ್ಮ ವೋಟರ್‌ ಐಡಿ ವಿಳಾಸವನ್ನು ಕೂಡ ಬದಲಾಯಿಸಬಹುದಾಗಿದೆ. ಹಾಗಾದ್ರೆ ವೋಟರ್‌ ಐಡಿಯಲ್ಲಿ ನಿಮ್ಮ ವಿಳಾಸವನ್ನು ಬದಲಾಯಿಸುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವೋಟರ್‌ ಐಡಿ

ಭಾರತದಲ್ಲಿ ಮತದಾರರ ಗುರುತಿನ ಚೀಟಿ ನಿಮ್ಮ ವಿಳಾಸದ ದಾಖಲೆಯಾಗಿ ಸಹ ಮಾನ್ಯತೆ ಹೊಂದಿದೆ. ವೋಟರ್‌ ಐಡಿಯಲ್ಲಿ ನಿಮ್ಮ ವಿಳಾಸದ ಆಧಾರದ ಮೇಲೆ ಸರ್ಕಾರದ ಯೋಜನೆಗಳನ್ನು ಪಡೆದುಕೊಳ್ಳಲು ಅನುಕೂಲವಾಗಲಿದೆ. ಇನ್ನು ನೀವು ಪ್ರಸ್ತುತ ವಾಸಮಾಡುತ್ತಿರುವ ಪ್ರದೇಶದಲ್ಲಿಯೇ ನಿಮ್ಮ ಮತದಾನ ಮಾಡಲು ವೋಟರ್‌ ಐಡಿ ವಿಳಾಶವನ್ನು ಬದಲಾಯಿಸಬಹುದು. ಸ್ಥಳೀಯ ಮಟ್ಟದ ಚುನಾವಣೆಗಳಿಂದ ಹಿಡಿದು ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಗಳು ಕೆಲವೇ ದಿನಗಳಲ್ಲಿ ಬರಲಿವೆ. ಇಂತಹ ಸನ್ನಿವೇಶದಲ್ಲಿ ನಿಮ್ಮ ವೋಟರ್‌ ಐಡಿಯ ವಿಳಾಸವನ್ನು ಬದಲಾಯಿಸುವುದು ಉತ್ತಮ.

ಆಫ್‌ಲೈನ್‌

ಇನ್ನು ನಿಮ್ಮ ಮತದಾರರ ಗುರುತಿನ ಚೀಟಿಯಲ್ಲಿ ನಿಮ್ಮ ವಿಳಾಸವನ್ನು ಬದಲಾಯಿಸುವುದು ತುಂಬಾ ಸರಳವಾಗಿದೆ. ಇದಕ್ಕಾಗಿ ನೀವು ಆಫ್‌ಲೈನ್‌ ಮತ್ತು ಆನ್‌ಲೈನ್‌ ಎರಡು ಮಾರ್ಗಗಳನ್ನು ಕೂಡ ಬಳಸಬಹುದಾಗಿದೆ. ನೀವು ನಿಮ್ಮ ವಿಳಾಸವನ್ನು ಆಫ್‌ಲೈನ್‌ನಲ್ಲಿ ಬದಲಾಯಿಸಲು ನೀವು ಬಯಸಿದರೆ, ನಿಮ್ಮ ಕ್ಷೇತ್ರದ ಚುನಾವಣಾ ಅಧಿಕಾರಿಗೆ ಅರ್ಜಿ ನಮೂನೆಯನ್ನು ಸಲ್ಲಿಸಬೇಕಾಗುತ್ತದೆ. ಆದರೆ ಆನ್‌ಲೈನ್‌ ಮೂಲಕ ವಿಳಾಸ ಬದಲಾವಣೆ ಮಾಡುವುದಕ್ಕೆ ಕೆಲವು ಹಂತಗಳನ್ನು ಅನುಸರಿಸಬೇಕಾಗುತ್ತದೆ.

ಆನ್‌ಲೈನ್‌ ನಿಮ್ಮ ವೋಟರ್ ಐಡಿ ಕಾರ್ಡ್‌ ವಿಳಾಸವನ್ನು ಬದಲಾಯಿಸುವುದು ಹೇಗೆ?

ಆನ್‌ಲೈನ್‌ ನಿಮ್ಮ ವೋಟರ್ ಐಡಿ ಕಾರ್ಡ್‌ ವಿಳಾಸವನ್ನು ಬದಲಾಯಿಸುವುದು ಹೇಗೆ?

ಹಂತ:1 ಮೊದಲಿಗೆ ನೀವು www.nvsp.in ನಲ್ಲಿ ರಾಷ್ಟ್ರೀಯ ಮತದಾರರ ಸೇವೆಗಳ ಪೋರ್ಟಲ್‌ಗೆ ಲಾಗ್ ಇನ್ ಮಾಡಿ
ಹಂತ:2 ನಂತರ ಹೊಸ ಮತದಾರರ ನೋಂದಣಿ ಅಥವಾ AC ಯಿಂದ AC ಗೆ ವರ್ಗಾವಣೆಗಾಗಿ ಆನ್‌ಲೈನ್ ಅರ್ಜಿಯ ಅಡಿಯಲ್ಲಿ ನೀವು ಫಾರ್ಮ್ 6 ಅನ್ನು ಕ್ಲಿಕ್ ಮಾಡಬೇಕಾಗುತ್ತದೆ.
ಹಂತ:3 ನೀವು ಅದೇ ಕ್ಷೇತ್ರದೊಳಗೆ ಒಂದು ನಿವಾಸದಿಂದ ಇನ್ನೊಂದಕ್ಕೆ ಸ್ಥಳಾಂತರಗೊಂಡಿದ್ದರೆ, ಫಾರ್ಮ್ 8A ಕ್ಲಿಕ್ ಮಾಡಬೇಕಾಗುತ್ತದೆ.
ಹಂತ:4 ನಂತರ ನಿಮ್ಮ ಹೆಸರು, ಹುಟ್ಟಿದ ದಿನಾಂಕ, ರಾಜ್ಯ, ಕ್ಷೇತ್ರ, ಪ್ರಸ್ತುತ ಶಾಶ್ವತ ವಿಳಾಸ ಸೇರಿದಂತೆ ಅಗತ್ಯವಿರುವ ಎಲ್ಲಾ ವಿವರಗಳನ್ನು ಇಲ್ಲಿ ಭರ್ತಿ ಮಾಡಿ.
ಹಂತ:5 ಇಮೇಲ್ ವಿಳಾಸ ಮತ್ತು ಮೊಬೈಲ್ ಸಂಖ್ಯೆಯಂತಹ ಕೆಲವು ವಿವರಗಳು ಐಚ್ಛಿಕವಾಗಿದ್ದು, ನಿಮ್ಮ ಬಳಿಯಿದ್ದರೆ ತುಂಬಿರಿ.
ಹಂತ:6 ಭಾವಚಿತ್ರ, ವಿಳಾಸ ಪುರಾವೆ ಮತ್ತು ವಯಸ್ಸಿನ ಪುರಾವೆ ಸೇರಿದಂತೆ ಎಲ್ಲಾ ಮೂಲ ದಾಖಲೆಗಳನ್ನು ಅಪ್‌ಲೋಡ್ ಮಾಡಿ.
ಹಂತ:7 ನಂತರ ಅಪ್‌ಲೋಡ್ ಮಾಡಿದ ಎಲ್ಲಾ ದಾಖಲೆಗಳೊಂದಿಗೆ ಫಾರ್ಮ್ ಅನ್ನು ಆನ್‌ಲೈನ್‌ನಲ್ಲಿ ಸಬ್ಮಿಟ್‌ ಮಾಡಿ.
ಹಂತ:8 ಈಗ, ಡಿಕ್ಲೆರೇಷನ್ ಆಯ್ಕೆಯನ್ನು ಭರ್ತಿ ಮಾಡಿ ಮತ್ತು ಕ್ಯಾಪ್ಚಾವನ್ನು ನಮೂದಿಸಿ.
ಹಂತ:9 ಇದಾದ ನಂತರ ಎಲ್ಲಾ ವಿವರಗಳನ್ನು ಪರಿಶೀಲಿಸಿ.
ಹಂತ:10 ಎಲ್ಲವನ್ನು ಪರಿಶೀಲಿಸಿದ ನಂತರ ಸಬ್ಮಿಟ್‌ ಟ್ಯಾಬ್ ಮೇಲೆ ಕ್ಲಿಕ್ ಮಾಡಿ.

ಹೀಗೆ ಮಾಡುವ ಮೂಲಕ ನೀವು ನಿಮ್ಮ ವೋಟರ್‌ ಐಡಿಯ ವಿಳಾಸವನ್ನು ಬದಲಾಯಿಸಬಹುದಾಗಿದೆ.

ಆನ್‌ಲೈನ್‌ನಲ್ಲಿ ನಿಮ್ಮ ವೋಟರ್‌ ಐಡಿಯನ್ನು ಡೌನ್‌ಲೋಡ್ ಮಾಡುವುದು ಹೇಗೆ?

ಆನ್‌ಲೈನ್‌ನಲ್ಲಿ ನಿಮ್ಮ ವೋಟರ್‌ ಐಡಿಯನ್ನು ಡೌನ್‌ಲೋಡ್ ಮಾಡುವುದು ಹೇಗೆ?

ಪ್ರಸ್ತುತ, 2020 ರ ನವೆಂಬರ್ ನಂತರ ಹೊಸದಾಗಿ ನೋಂದಾಯಿತ ಮತದಾರರಿಗೆ ಇ-ಇಪಿಐಸಿ ಡೌನ್‌ಲೋಡ್ ಸೌಲಭ್ಯ ನೀಡಲಾಗಿದೆ. ನೀವು ನೋಂದಾಯಿತ ಮತದಾರರಾದ ನಂತರ, ನಿಮ್ಮ ಮತದಾರರ ಗುರುತಿನ ಚೀಟಿಯನ್ನು ಆನ್‌ಲೈನ್‌ನಲ್ಲಿ ಸುಲಭವಾಗಿ ಡೌನ್‌ಲೋಡ್ ಮಾಡುವುದಕ್ಕೆ ಈ ಕೆಳಗಿನ ಹಂತಗಳನ್ನು ಅನುಸರಿಸಿರಿ.

ಹಂತ:1. NVSP ಸೈಟ್‌ಗೆ ಹೋಗಿ, ಲಾಗಿನ್ / ರಿಜಿಸ್ಟರ್ ಕ್ಲಿಕ್ ಮಾಡಿ. ನೋಂದಣಿಗಾಗಿ, ಒಟಿಪಿ ಮತ್ತು ಇತರ ಮೂಲ ವಿವರಗಳನ್ನು ಬಳಸಿಕೊಂಡು ನಿಮ್ಮ ಮೊಬೈಲ್ ಸಂಖ್ಯೆಯನ್ನು ಪರಿಶೀಲಿಸಲು ನಿಮ್ಮನ್ನು ಕೇಳಲಾಗುತ್ತದೆ. ನೋಂದಣಿ ಪ್ರಕ್ರಿಯೆಯನ್ನು ಮುಗಿಸಿ.
ಹಂತ:2. ನೋಂದಾಯಿಸಿದ ನಂತರ ಅಥವಾ ಲಾಗಿನ್ ಆದ ನಂತರ, ಮುಖಪುಟದಲ್ಲಿ ಇ-ಎಪಿಕ್ ಡೌನ್‌ಲೋಡ್ ಆಯ್ಕೆಯನ್ನು ಕ್ಲಿಕ್ ಮಾಡಿ. ಇಪಿಐಸಿ ಎಂದರೆ ಚುನಾವಣಾ ಫೋಟೋ ಗುರುತಿನ ಚೀಟಿ.
ಹಂತ:3. ನಿಮ್ಮ ಇಪಿಐಸಿ ಸಂಖ್ಯೆ ಅಥವಾ ಫಾರ್ಮ್ ಉಲ್ಲೇಖ ಸಂಖ್ಯೆಯನ್ನು ಸೈಟ್ ಕೇಳುತ್ತದೆ. ನಿಮಗೆ ತಿಳಿದಿರುವ ಆಯ್ಕೆಯ ಮೇಲೆ ಕ್ಲಿಕ್ ಮಾಡಿ, ನೀವು ಸೇರಿರುವ ರಾಜ್ಯವನ್ನು ಆಯ್ಕೆ ಮಾಡಿ ಮತ್ತು ಹುಡುಕಾಟದ ಮೇಲೆ ಕ್ಲಿಕ್ ಮಾಡಿ.
ಹಂತ:4. ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಕಳುಹಿಸಲಾದ ಒಟಿಪಿ ಮೂಲಕ ಮತ್ತೊಮ್ಮೆ ಪರಿಶೀಲಿಸಿ.
ಹಂತ:5. ಡೌನ್‌ಲೋಡ್ ಇ-ಇಪಿಐಸಿ ಕ್ಲಿಕ್ ಮಾಡುವ ಮೂಲಕ ನಿಮ್ಮ ಮತದಾರರ ಗುರುತಿನ ಚೀಟಿಯನ್ನು ಡೌನ್‌ಲೋಡ್ ಮಾಡಬಹುದಾಗಿದೆ.

ವೋಟರ್‌ ಐಡಿ ಕಾರ್ಡ್‌ಗೆ ಅರ್ಜಿ ಸಲ್ಲಿಸಲು ಬೇಕಾದ ಪ್ರಮುಖ ದಾಖಲೆಗಳು?

ವೋಟರ್‌ ಐಡಿ ಕಾರ್ಡ್‌ಗೆ ಅರ್ಜಿ ಸಲ್ಲಿಸಲು ಬೇಕಾದ ಪ್ರಮುಖ ದಾಖಲೆಗಳು?

*ಪಾಸ್‌ಪೋರ್ಟ್‌ ಸೈಜ್‌ ಭಾವಚಿತ್ರ
*ಗುರುತಿನ ಪುರಾವೆ (ಜನನ ಪ್ರಮಾಣ ಪತ್ರ, ಪಾಸ್‌ಪೋರ್ಟ್‌, ಚಾಲನಾ ಪರವಾನಗಿ, ಪ್ಯಾನ್‌ ಕಾರ್ಡ್‌, ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ)
*ವಿಳಾಸದ ಪುರಾವೆ (ರೇಷನ್‌ ಕಾರ್ಡ್‌, ಪಾಸ್‌ಪೋರ್ಟ್‌, ಚಾಲನಾ ಪರವಾನಗಿ, ವಿದ್ಯುತ್‌ ಬಿಲ್‌)



Read more…