Karnataka news paper

ತೆಲುಗು ಸಿನಿಮಾಗೆ ಸಲಗ ಲಗ್ಗೆ: ಬಾಲಯ್ಯನ ಎದುರು ತೊಡೆ ತಟ್ಟಲಿರುವ ದುನಿಯಾ ವಿಜಯ್‌


ಬೆಂಗಳೂರು: ಸಲಗ ಸಿನಿಮಾ ಯಶಸ್ಸಿನಲ್ಲಿರುವ ನಟ ದುನಿಯಾ ವಿಜಯ್‌ ತೆಲುಗು ಸಿನಿಮಾರಂಗಕ್ಕೆ ಪದಾರ್ಪಣೆ ಮಾಡಲಿದ್ದಾರೆ.

ಖ್ಯಾತ ನಟ ನಂದಮೂರಿ ಬಾಲಕೃಷ್ಣ ಅವರ ಸಿನಿಮಾದಲ್ಲಿ ವಿಜಯ್‌ ನಟಿಸುವುದು ಖಚಿತವಾಗಿದೆ. ಈ ಬಗ್ಗೆ ಚಿತ್ರತಂಡ ವಿಜಯ್‌ಗೆ ಸ್ವಾಗತ ಕೋರಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟರ್‌ ಬಿಡುಗಡೆ ಮಾಡಿದೆ. 

ಇನ್ನೂ ಹೆಸರಿಡದ ಈ ಸಿನಿಮಾಗೆ ನಿರ್ದೇಶಕ ಗೋಪಿಚಂದ್‌ ಮಲಿನೇನಿ ಆ್ಯಕ್ಷನ್‌–ಕಟ್‌ ಹೇಳಲಿದ್ದಾರೆ. ಅವರು ವಿಜಯ್‌ಗೆ ಶುಭ ಕೋರಿ ಪೋಸ್ಟರ್‌ ಹಂಚಿಕೊಂಡಿದ್ದಾರೆ. ರಾಯಲಸೀಮಾ ಭಾಗದ ನೈಜ ಘಟನೆಗಳ ಕುರಿತಾದ ಕಥಾ ಹಂದರ ಹೊಂದಿರುವ ಸಿನಿಮಾ ಇದಾಗಿದೆ ಎಂದು ಗೋಪಿಚಂದ್‌ ಹೇಳಿದ್ದಾರೆ. 

ಇದು ಬಾಲಕೃಷ್ಣ ಅವರ 107ನೇ ಸಿನಿಮಾ. ನಾಯಕಿಯಾಗಿ ಶ್ರುತಿ ಹಾಸನ್‌ ಆಯ್ಕೆಯಾಗಿದ್ದಾರೆ. ಪಾತ್ರವರ್ಗದ ಆಯ್ಕೆ ನಡೆಯುತ್ತಿದೆ ಎಂದು ಚಿತ್ರತಂಡ ಹೇಳಿಕೆ ನೀಡಿದೆ. ಮೈತ್ರಿ ಮೂವೀ ಮೇಕರ್ಸ್​ ಈ ಸಿನಿಮಾವನ್ನು ನಿರ್ಮಾಣ ಮಾಡಲಿದೆ.

ಓದಿ: 

ಹಲವು ದಿನಗಳ ಹಿಂದೆಯೇ ವಿಜಯ್‌ ಟಾಲಿವುಡ್‌ಗೆ ಎಂಟ್ರಿ ಕೊಡಲಿದ್ದಾರೆ ಎಂಬ ಸುದ್ದಿ ಕೇಳಿಬಂದಿತ್ತು. ಆದರೆ ಚಿತ್ರತಂಡದಿಂದ ಅಧಿಕೃತ ಮಾಹಿತಿ ಹೊರಬಿದ್ದಿರಲಿಲ್ಲ. ಈಗ ಚಿತ್ರತಂಡ ಅಧಿಕೃತವಾಗಿ ಪ್ರಕಟಿಸಿದೆ. 

ಓದಿ: 



Read More…Source link