ಬ್ಯಾಡ್ ಬ್ಯಾಂಕ್‌ನಲ್ಲಿ, ಒಂದು ಸಂಸ್ಥೆ ಸಾಲಗಾರನ ಆಸ್ತಿ ವಸೂಲು ಮಾಡುತ್ತದೆ. ಹಾಗೂ ಇನ್ನೊಂದು ಸಂಸ್ಥೆ ಸಾಲ ನಿರ್ಣಯ ಮಾಡುತ್ತದೆ. ಇದಕ್ಕೆ ನಿಯಮಾವಳಿಗಲ್ಲಿ ಅವಕಾಶ ಇಲ್ಲ.ಇದನ್ನು ಈಗಾಗಲೇ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸರ್ಕಾರಕ್ಕೆ ತಿಳಿಸಿದೆ. ಹೀಗಾಗಿ ಬ್ಯಾಡ್ ಬ್ಯಾಂಕ್ ಸ್ಥಾಪನೆ ವಿಳಂಬ ಆಗಲಿದೆ ಎಂದು ಈ ಬಗ್ಗೆ ಖಚಿತ ಮಾಹಿತಿ ಇರುವವರು ತಿಳಿಸಿದ್ದಾರೆ.
ಈಗ ಸರ್ವ್ ಬ್ಯಾಂಕ್ ಆಫ್ ಇಂಡಿಯಾಗೆ ಸಲ್ಲಿಸಲಾಗಿರುವ ಪ್ರಸ್ತಾಪಿತ ಕರಡು ಪ್ರತಿಯಲ್ಲಿ, ರಾಷ್ಟ್ರೀಯ ಆಸ್ತಿ ಮರು ನಿರ್ಮಾಣ ಕಂಪನಿ ನಿಯಮಿತ (National Asset Reconstruction Company Ltd – NARCL) ಬ್ಯಾಂಕ್‌ಗಳ ಸುಸ್ತಿ ಸಾಲದ ಆಸ್ತಿಗಳನ್ನು ತನ್ನ ಸುಪರ್ದಿಗೆ ತೆಗೆದುಕೊಳ್ಳಲಿದೆ. ಭಾರತೀಯ ಸಾಲ ನಿರ್ಣಯ ಕಂಪನಿ ನಿಯಮಿತ (India Debt Resolution Company Ltd – IDRCL) ಸಾಲ ನಿರ್ಣಯ ಮಾಡಲಿದೆ ಎಂದು ಹೇಳಲಾಗಿದೆ. ಆದರೆ ನಿಯಮಾವಳಿಗಲ್ಲಿ ಇದಕ್ಕೆ ಅವಕಾಶ ಇಲ್ಲದೇ ಇರುವುದರಿಂದ, ಬ್ಯಾಡ್ ಬ್ಯಾಂಕ್ ಸ್ಥಾಪನೆಗೆ ಆರ್‌ಬಿಐ ಅವಕಾಶ ಕೊಟ್ಟಿಲ್ಲ. ಹೀಗಾಗಿ ಬ್ಯಾಡ್ ಬ್ಯಾಂಕ್ ಸ್ಥಾಪನೆ ವಿಳಂಬವಾಗಲಿದೆ.
ಇನ್ನು ಬ್ಯಾಡ್ ಬ್ಯಾಂಕ್ ಸ್ಥಾಪನೆಗೆ ಅವಕಾಶ ನಿರಾಕರಣೆ ಹಿನ್ನೆಲೆ, ರಾಷ್ಟ್ರೀಕೃತ ಬ್ಯಾಂಕ್‌ಗಳು ಮತ್ತೊಂದು ಪ್ರಸ್ತಾಪವನ್ನು ಆರ್‌ಬಿಐನ ಮುಂದಿಟ್ಟಿದೆ. NARCL ಹಾಗೂ IDRCL ನಡುವೆ ಏಜೆಂಟ್ ಒಬ್ಬರನ್ನು ನೇಮಿಸುವುದು. ಈ ಪ್ರಸ್ತಾವದನ್ವಯ, NARCL, IDRCL ನೊಂದಿಗೆ ಒಪ್ಪಂದ ಮಾಡಿಕೊಂಡು ಎನ್‌ಪಿಎ ನಿರ್ಣಯಕ್ಕೆ ಮೂರನೇ ಪಾರ್ಟಿಗೆ ಹೊರ ಗುತ್ತಿಗೆ ಕೊಡುವುದು. ಇದರಿಂದ IDRCL ನೀಡುವ ನಿರ್ಣಯಗಳು NARCL ಮೇಲೆ ಅಲಂಬಿತವಾಗಿರುವುದಿಲ್ಲ.
ಬ್ಯಾಡ್ ಬ್ಯಾಂಕ್ ಸ್ಥಾಪನೆಗೆ ನಿಯಮಗಳು ಅಡ್ಡಿಯಾಗಿರುವುದರಿಂದ, ಅದಷ್ಟು ಬೇಗ ಈ ಸಮಸ್ಯೆಯನ್ನು ನಿವಾರಣೆ ಮಾಡಬೇಕು ಎಂದು ಬ್ಯಾಂಕ್‌ಗಳು ಒತ್ತಾಯಿಸುತ್ತಿವೆ. ಫೆ.1 ರಂದು ಮಂಡನೆಯಾಗಲಿರುವ ಕೇಂದ್ರ ಬಜೆಟ್‌ಗೂ ಮುನ್ನ ಸುಸ್ತಿ ಸಾಲದ ಬಗ್ಗೆ ಘೋಷಣೆ ಮಾಡಬೇಕಾಗಿರುವುದರಿಂದ, ಬ್ಯಾಂಡ್ ಬ್ಯಾಂಕ್ ಸ್ಥಾಪಿಸಿ ಎಂದು ಬ್ಯಾಂಕ್‌ಗಳು ಒತ್ತಾಯಿಸುತ್ತಿವೆ.
ತೀಕ್ಷ್ಣ ಒಳನೋಟ ಹಾಗೂ 20ಕ್ಕೂ ಹೆಚ್ಚು ವಲಯಗಳ ವಿಸ್ತೃತ ಮಾಹಿತಿ ಒಳಗೊಂಡ ‘ಎಕನಾಮಿಕ್ ಟೈಮ್ಸ್’ ವಿಶೇಷ ಲೇಖನಗಳಿಗಾಗಿ ಈಗಲೇ ಸಬ್‌ಸ್ಕ್ರೈಬ್ ಆಗಿ.