Karnataka news paper

ಕೊರೊನಾ ರೂಪಾಂತರಿ ಓಮಿಕ್ರಾನ್ ವೈರಾಣು ಅಪಾಯಕಾರಿಯಲ್ಲ: ಲಂಡನ್ ತಜ್ಞರ ಅಭಯ


ಹೈಲೈಟ್ಸ್‌:

  • ಓಮಿಕ್ರಾನ್‌ ತನ್ನ ರಚನೆಯನ್ನು 30ಕ್ಕೂ ಹೆಚ್ಚು ಬಾರಿ ಮಾರ್ಪಡಿಸಿಕೊಂಡಿದೆ
  • ಹೀಗಾಗಿ, ಎರಡೂ ಡೋಸ್‌ ಲಸಿಕೆ ಪಡೆದವರಿಗೂ ಸೋಂಕು ತಗುಲುತ್ತಿದೆ
  • ಲಸಿಕೆಯಿಂದ ಉದ್ಭವವಾಗಿರುವ ಪ್ರತಿಕಾಯಗಳನ್ನು ಓಮಿಕ್ರಾನ್‌ ಸೋಂಕು ವಂಚಿಸಿ ರೋಗ ಲಕ್ಷಣ ಹೆಚ್ಚಿಸುತ್ತಿದೆ

ಲಂಡನ್‌: ಕೊರೊನಾದ ರೂಪಾಂತರಿ ವೈರಾಣು ಓಮಿಕ್ರಾನ್‌ ದೇಹದ ಸಹಜ ರೋಗ ನಿರೋಧಕ ಶಕ್ತಿಯನ್ನು ನಾಶಪಡಿಸಲು ಸಾಧ್ಯವಿಲ್ಲ ಎಂದು ಸಾಂಕ್ರಾಮಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

‘ಓಮಿಕ್ರಾನ್‌ ತನ್ನ ರಚನೆಯನ್ನು 30ಕ್ಕೂ ಹೆಚ್ಚು ಬಾರಿ ಮಾರ್ಪಡಿಸಿಕೊಂಡಿರುವ ಕಾರಣ, ಎರಡೂ ಡೋಸ್‌ ಲಸಿಕೆ ಪಡೆದವರಿಗೂ ಸೋಂಕು ತಗುಲುತ್ತಿದೆ. ಜತೆಗೆ, ಲಸಿಕೆಯಿಂದ ಉದ್ಭವವಾಗಿರುವ ಪ್ರತಿಕಾಯಗಳನ್ನು ಓಮಿಕ್ರಾನ್‌ ಸೋಂಕು ವಂಚಿಸಿ ರೋಗ ಲಕ್ಷಣ ಹೆಚ್ಚಿಸುತ್ತಿದೆ. ಆದರೂ, ದೇಹದಲ್ಲಿನ ಸಹಜ ರೋಗ ನಿರೋಧಕ ಶಕ್ತಿಯೇ ಓಮಿಕ್ರಾನ್‌ ವೈರಾಣು ಹತ್ತಿಕ್ಕುವಷ್ಟು ಸಮರ್ಥವಾಗಿದೆ’ ಎಂದು ಸಾಂಕ್ರಾಮಿಕ ರೋಗ ತಜ್ಞ ಮಿಕ್‌ ಬೇಲಿ ಹೇಳಿದ್ದಾರೆ.

ದೇಶದಲ್ಲಿ 23 ಕೋಟಿ ಡೋಸ್‌ ಲಸಿಕೆ ಉಳಿಕೆ; ಉ. ಪ್ರದೇಶ, ಬಿಹಾರ, ಬಂಗಾಳದಲ್ಲಿ ಅತ್ಯಧಿಕ ದಾಸ್ತಾನು
‘ಕೊರೊನಾ ನಿರೋಧಕ ಲಸಿಕೆಯಿಂದ ದೇಹದಲ್ಲಿ ಪ್ರತಿಕಾಯಗಳು ಸೃಷ್ಟಿಯಾಗುತ್ತವೆ. ಓಮಿಕ್ರಾನ್‌ ಈ ಪ್ರತಿಕಾಯಗಳನ್ನು ನಾಶ ಮಾಡಬಹುದು. ಪ್ರತಿಕಾಯಗಳು ಕಡಿಮೆ ಆದ ಮಾತ್ರಕ್ಕೆ ದೇಹದ ರೋಗ ನಿರೋಧಕ ಶಕ್ತಿಯೇ ನಾಶವಾಗಿದೆ ಎಂದಲ್ಲ. ದೇಹದಲ್ಲಿ ಸಹಜವಾಗಿಯೇ ಇರುವ ರೋಗ ನಿರೋಧಕ ಶಕ್ತಿಯು ಕೊರೊನಾ ರೂಪಾಂತರಿಗಳ ವಿರುದ್ಧ ಹೋರಾಟ ಮಾಡಲು ಸಶಕ್ತವಾಗಿದೆ ಎಂದು ಹಲವು ಸಂಶೋಧನೆಗಳು ತಿಳಿಸಿವೆ. ಡೆಲ್ಟಾ ಪ್ರಸರಣ ಆರಂಭವಾದಾಗಲೂ ಹಲವು ಜನರ ದೇಹವು ಸೋಂಕಿನ ವಿರುದ್ಧ ನೈಸರ್ಗಿಕವಾಗಿ ಹೋರಾಡಿ ಗೆದ್ದಿರುವುದು ಪೂರಕ ಅಂಶವಾಗಿದೆ’ ಎಂದು ಬೇಲಿ ವಿವರಿಸಿದ್ದಾರೆ.

ಬೂಸ್ಟರ್‌ ರಾಮಬಾಣ: ‘ಓಮಿಕ್ರಾನ್‌ ಸೋಂಕಿನ ರೋಗ ಲಕ್ಷಣಗಳಿಂದ ಬಳಲುತ್ತಿರುವವರನ್ನು ಸೂಕ್ಷ್ಮವಾಗಿ ಗಮನಿಸಲಾಗಿದ್ದು, ಮೂರನೇ ಡೋಸ್‌ ಅಥವಾ ಬೂಸ್ಟರ್‌ ಡೋಸ್‌ ನೀಡಿದಲ್ಲಿ ಓಮಿಕ್ರಾನ್‌ ದಾಳಿಗೆ ಅಂಕುಶ ಹಾಕಲು ಸಾಧ್ಯ’ ಎಂದು ಬ್ರಿಟನ್‌ ಆರೋಗ್ಯ ಸುರಕ್ಷತೆ ಏಜೆನ್ಸಿ (ಯುಕೆಎಚ್‌ಎಸ್‌ಎ) ಹೇಳಿದೆ.

ಓಮಿಕ್ರಾನ್‌ ಆತಂಕದ ನಡುವೆ ರಾಜ್ಯದಲ್ಲಿ ಹೊಸ ಕೊರೊನಾ ಕೇಸ್‌ ಮತ್ತಷ್ಟು ಇಳಿಕೆ!
‘ಸದ್ಯ ಓಮಿಕ್ರಾನ್‌ ಸೋಂಕಿತರು ಪ್ರದರ್ಶಿಸುತ್ತಿರುವ ಲಕ್ಷಣಗಳಾದ ಮೈ – ಕೈ ನೋವು, ಜ್ವರ, ಸುಸ್ತನ್ನು ಕೊರೊನಾ ನಿರೋಧಕ ಲಸಿಕೆಯ ಮೂರನೇ ಡೋಸ್‌ ಅನ್ನು ಮುಂಚಿತವಾಗಿಯೇ ಪಡೆದವರು ಸುಲಭವಾಗಿ ಎದುರಿಸಬಹುದು. ಅವರ ದೇಹವು ಶೀಘ್ರವೇ ಓಮಿಕ್ರಾನ್‌ ವೈರಾಣುವನ್ನು ಹತೋಟಿಗೆ ತರಲಿದೆ. ಓಮಿಕ್ರಾನ್‌ ಸೋಂಕಿನ ವಿರುದ್ಧ 3ನೇ ಡೋಸ್‌ ಲಸಿಕೆಯು 70-75% ರಕ್ಷಣೆ ನೀಡಲಿದೆ’ ಎಂದು ಸಂಸ್ಥೆ ತಿಳಿಸಿದೆ.

ಓಮಿಕ್ರಾನ್‌ ಪ್ರಸರಣ ಹತ್ತಿಕ್ಕುವ ಸಲುವಾಗಿ 30 ವರ್ಷ ಮೇಲ್ಪಟ್ಟ ಎಲ್ಲರಿಗೂ 3ನೇ ಡೋಸ್‌ ಅಥವಾ ಬೂಸ್ಟರ್‌ ಡೋಸ್‌ ನೀಡುವ ತೀರ್ಮಾನವನ್ನು ಬ್ರಿಟನ್‌ ಸರಕಾರ ಮಾಡಿದೆ. ಸೋಮವಾರದಿಂದ ಯುವಕರು ಬೂಸ್ಟರ್‌ ಡೋಸ್‌ಗೆ ಆನ್‌ಲೈನ್‌ ಬುಕ್ಕಿಂಗ್‌ ಮಾಡಲು ಅವಕಾಶ ಕಲ್ಪಿಸಲಾಗುವುದು. ಬ್ರಿಟನ್‌ನಲ್ಲಿ 30 – 39 ವರ್ಷಗಳ ನಡುವಿನ 75 ಲಕ್ಷ ಜನರಿದ್ದಾರೆ. ಕ್ರಿಸ್‌ಮಸ್‌ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ಜನರು ಎಚ್ಚರಿಕೆ ವಹಿಸಬೇಕಿದೆ. ಈ ಬಗ್ಗೆ ಸರಕಾರವು ಘೋಷಣೆ ಹೊರಡಿಸಿದೆ.

ಓಮಿಕ್ರಾನ್‌ ಸೋಂಕಿತರಿಗೆ ಪ್ರತ್ಯೇಕ ಮಾರ್ಗಸೂಚಿ



Read more