ಹೈಲೈಟ್ಸ್:
- ಪಿಎಲ್‌ಐ ಯೋಜನೆಯಡಿ ₹6200 ಕೋಟಿಯ ಉತ್ಪನ್ನಗಳನ್ನು ತಯಾರಿಸಿದ ಟೆಲಿಕಾಂ ಕಂಪನಿಗಳು
- 2021ರ ಏಪ್ರಿಲ್ 1 ರಿಂದ ಈ ಯೋಜನೆ ಜಾರಿಯಾಗಿದ್ದು, ಒಟ್ಟು 247 ಕೋಟಿ ರೂ. ಬಂಡವಾಳ ಹಾಕಿವೆ.
- ದೇಶಿಯ ಉತ್ಪಾದನೆಗೆ ಹೆಚ್ಚಿನ ಆದ್ಯತೆ ನೀಡಲು ಕೇಂದ್ರ ಸರ್ಕಾರ ಆರಂಭಿಸಿರುವ ಯೋಜನೆ ಇದು.
2021ರ ಏಪ್ರಿಲ್ 1 ರಿಂದ ಟೆಲಿಕಾಂ ಕಂಪನಿಗಳಿಗೆ ಈ ಯೋಜನೆ ಜಾರಿಯಾಗಿದ್ದು, ಒಟ್ಟು 247 ಕೋಟಿ ರೂ. ಬಂಡವಾಳ ಹಾಕಿ, 6200 ಕೋಟಿ ರೂ. ಮೌಲ್ಯದ ಉತ್ಪನ್ನಗಳನ್ನು ತಯಾರು ಮಾಡಿವೆ ಎಂದು ಅವರು ವಿಜಯ ಕರ್ನಾಟಕದ ಸೋದರ ಸಂಸ್ಥೆ ಎಕನಾಮಿಕ್ ಟೈಮ್ಸ್‌ಗೆ ಮಾಹಿತಿ ನೀಡಿದ್ದಾರೆ. ಅಲ್ಲದೇ ಉಪಕರಣಗಳ ಉತ್ಪಾದನೆಯ ಮಾಹಿತಿಯನ್ನು ಶೀಘ್ರವೇ ತಿಳಿಸಲಿದ್ದೇವೆ ಎಂದು ಅವರು ಹೇಳಿದ್ದಾರೆ.
ಒಟ್ಟು 247 ಕೋಟಿ ರೂ. ಗಳ ಪೈಕಿ ಬಹುರಾಷ್ಟ್ರೀಯ ಕಂಪನಿಗಳು 151 ಕೋಟಿ ರೂ. ಬಂಡವಾಳ ಹೂಡಿದ್ದು, ಭಾರತೀಯ ಕಂಪನಿಗಳಯ 86 ಕೋಟಿ ರೂ.ಗಳಷ್ಟು ಬಂಡವಾಳ ಹಾಕಿವೆ. ಇನ್ನುಳಿದ 9.7 ಕೋಟಿ ಬಂಡವಾಳ ಸಣ್ಣ ಹಾಗೂ ಅತೀ ಸಣ್ಣ ಹಾಗೂ ಮಧ್ಯಮ ಕಂಪನಿಗಳಿಂದ ಬಿದ್ದಿದೆ.
ಇನ್ನು ಈವರೆ ಆದ ಉತ್ಪಾದನೆಯನ್ನು ಗಮನಿಸುವುದಾದರೇ, ಒಟ್ಟು ಉತ್ಪಾದಿಸಲಾದ 6200 ಕೋಟಿ ರೂ. ಮೌಲ್ಯದ ಉತ್ಪನ್ನಗಳ ಪೈಕಿ ಅಂತಾರಾಷ್ಟ್ರೀಯ ಕಂಪನಿಗಳ ಕೊಡುಗೆ 5,471 ಕೋಟಿ ರೂ. ಇದೆ. ದೇಶಿಯ ಕಂಪನಿಗಳು 641 ಕೋಟಿ ಮೌಲ್ಯದ ಉತ್ಪನ್ನಗಳನ್ನು ಉತ್ಪಾದಿಸಿದ್ದರೇ, ಸಣ್ಣ, ಅತೀ ಸಣ್ಣ ಹಾಗೂ ಮಧ್ಯಮ ಕಂಪನಿಗಳು 122 ಕೋಟಿ ರೂ. ಮೌಲ್ಯದ ಉತ್ಪನ್ನಗಳನ್ನು ಉತ್ಪಾದಿಸಿವೆ.
ಇನ್ನು ಈ ಯೋಜನೆಯ ಫಲ ಪಡೆದು ಉತ್ಪಾದನೆ ಆರಂಭಿಸಿರುವ ಬಹುರಾಷ್ಟ್ರೀಯ ಕಂಪನಿಗಳ ಪೈಕಿ ನೋಕಿಯಾ ಹಾಗೂ ಎರಿಕ್ಸನ್ ಭಾರೀ ಪ್ರಮಾಣದಲ್ಲಿ ಉತ್ಪಾದನೆ ಮಾಡಿವೆ. ಐದು ವರ್ಷದ ಗುರಿಯನ್ನು ಮುಟ್ಟಲು ಕೇವಲ ನಾಲ್ಕು ತಿಂಗಳು ಮಾತ್ರ ನೀಡಲಾಗಿದೆ. ಹೀಗಾಗಿ ನಮಗೆ ನೀಡಿರುವ ಅವಧಿಯನ್ನು ವಿಸ್ತರಣೆ ಮಾಡಬೇಕು ಎಂದು ದೇಶಿಯ ಟೆಲಿಕಾಂ ಕಂಪನಿಗಳು ಸರ್ಕಾರವನ್ನು ಕೋರಿಕೊಂಡಿವೆ.
ನಮಗೆ ಸಿಕ್ಕಿರುವ ಮಾಹಿತಿ ಪ್ರಕಾರ ಎರಿಕ್ಸನ್ ಹಾಗೂ ನೋಕಿಯಾ ಕಂಪನಿಗಳು ಈಗಾಗಲೇ ತಮ್ಮ ಮೊದಲ ವರ್ಷದ ಗುರಿಯನ್ನು ಮುಟ್ಟಿದ್ದು, ತಮಗೆ ನೀಡಿರುವ ಅವಧಿಯನ್ನು ವಿಸ್ತರಿಸಿ ಎಂದು ಸರ್ಕಾರದೊಂದಿಗೆ ಮನವಿ ಮಾಡಿಲ್ಲ. ಆದರೆ ದೇಶಿಯ ಹಾಗೂ ಅಂತಾರಾಷ್ಟ್ರೀಯ ಕಾಂಟ್ರಾಕ್ಟ್ ಕಂಪನಿಗಳು ತಮಗೆ ನೀಡಿರುವ ಕಾಲಾವಕಾಶ ವಿಸ್ತರಿಸಿ ಎಂದು ಕೋರಿ ಸರ್ಕಾರಕ್ಕೆ ಪತ್ರ ಬರೆದಿವೆ.
ಏನಿದು ಪಿಎಲ್‌ಐ ಯೋಜನೆ?
ದೇಶಿಯ ಉತ್ಪಾದನೆಗೆ ಹೆಚ್ಚಿನ ಆದ್ಯತೆ ನೀಡಲು ಕೇಂದ್ರ ಸರ್ಕಾರ ಆರಂಭಿಸಿರುವ ಯೋಜನೆ ಇದಾಗಿದ್ದು, ಈ ಯೋಜನೆಯಡಿ ಸರಕು ಉತ್ಪಾದಿಸುವ ಕಂಪನಿಗಳಿಗೆ ವಿಶೇಷ ರಿಯಾಯಿತಿ, ತೆರಿಗೆ ವಿನಾಯಿತಿ ಸಿಗಲಿದೆ. ಹೆಚ್ಚಿನ ಬಂಡವಾಳ ಆರ್ಷಣೆ ಹಾಗೂ ರಫ್ತು ಏರಿಕೆಗೆ ಸರ್ಕಾರ ರೂಪಿಸಿರುವ ನೀತಿಯೇ ಪಿಎಲ್‌ಐ ಯೋಜನೆ.
ಟಿಲಿಕಾಂ ಮಂತ್ರಾಲಯಕ್ಕೆ ಈ ಯೋಜನೆ 2021ರ ಏಪ್ರಿಲ್ 1 ರಿಂದ ಅನ್ವಯವಾಗಿದ್ದು, 2025-26ರ ವರೆಗೆ ಇದು ಜಾರಿಯಲ್ಲಿರಲಿದೆ. ಈ ಯೋಜನೆಯಡಿ ಸರ್ಕಾರ ವಿವಿಧ ಅವಧಿಗಳಿಗೆ 4% ರಿಂದ 7% ವರೆಗೆ ಸಾಲ ಸೌಲಭ್ಯ ನೀಡುತ್ತದೆ.
ತೀಕ್ಷ್ಣ ಒಳನೋಟ ಹಾಗೂ 20ಕ್ಕೂ ಹೆಚ್ಚು ವಲಯಗಳ ವಿಸ್ತೃತ ಮಾಹಿತಿ ಒಳಗೊಂಡ ‘ಎಕನಾಮಿಕ್ ಟೈಮ್ಸ್‘ ವಿಶೇಷ ಲೇಖನಗಳಿಗಾಗಿ ಈಗಲೇ ಸಬ್‌ಸ್ಕ್ರೈಬ್ ಆಗಿ.