News
ಕೊರೊನಾ ಸಾಂಕ್ರಾಮಿಕದ ನಡುವೆ ಬ್ಯಾಂಕಿಂಗ್ ಕ್ಷೇತ್ರ ನಿರಂತರವಾಗಿ ತನ್ನ ಗ್ರಾಹಕರಿಗೆ ಅಗತ್ಯ ಸೇವೆಗಳನ್ನು ನೀಡುತ್ತಿದೆ. ರಜಾದಿನಗಳಲ್ಲೂ ತುರ್ತು ವ್ಯವಹಾರಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳಲಾಗಿದೆ. 2022ರ ಆರಂಭದಲ್ಲಿ ಪ್ರಸಕ್ತ ಸಾಲಿನ ಬ್ಯಾಂಕ್ ರಜಾದಿನಗಳ ಪಟ್ಟಿಯನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಪ್ರಕಟಿಸಿದೆ. ಶನಿವಾರ, ಭಾನುವಾರ ಹೊರತು ಪಡಿಸಿ ಸುಮಾರು 31 ದಿನಗಳ ಕಾಲ ಬ್ಯಾಂಕ್ ರಜೆಯಲ್ಲಿರಲಿದೆ.
ಆನ್‌ಲೈನ್ ಬ್ಯಾಂಕಿಂಗ್ ಚಟುವಟಿಕೆಗಳು ಮುಂದುವರಿಯುತ್ತವೆಯಾದರೂ, ಈ ವರ್ಷದಲ್ಲಿ ಬ್ಯಾಂಕಿಂಗ್ ಕಾರ್ಯಾಚರಣೆಗಳು ಮುಚ್ಚಲ್ಪಡುವ ಕೆಲವು ದಿನಗಳನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಉಲ್ಲೇಖಿಸಿದೆ. ಆದಾಗ್ಯೂ ವಿವಿಧ ರಾಜ್ಯಗಳಲ್ಲಿನ ಬ್ಯಾಂಕಿಂಗ್ ಚಟುವಟಿಕೆಗಳು ಪರಸ್ಪರ ಬದಲಾಗಬಹುದು.
ನೀವು ಮುಂದಿನ ಬಾರಿ ಬ್ಯಾಂಕುಗಳಿಗೆ ಭೇಟಿ ಮಾಡಲು ಯೋಜಿಸುವಾಗ, ಈ ಯಾವುದೇ ರಜಾದಿನಗಳು ಯಾವುದೇ ರೀತಿಯಲ್ಲಿ ಏಕರೂಪವಾಗಿರುವುದಿಲ್ಲ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಲು ಸಹಾಯ ಮಾಡುತ್ತದೆ. ವಾರಾಂತ್ಯಗಳನ್ನು ಹೊರತುಪಡಿಸಿ ಎಲ್ಲಾ ರಾಜ್ಯಗಳಿಗೂ ಈ ರಜಾದಿನಗಳು ಅನ್ವಯಿಸುವುದಿಲ್ಲ. ಎಲ್ಲಾ ರಜಾದಿನಗಳನ್ನು ಭೌಗೋಳಿಕತೆ ಮತ್ತು ಆರ್‌ಬಿಐ ಸೂಚಿಸಿದ ದಿನಾಂಕಗಳ ಆಧಾರದ ಮೇಲೆ ವಿಸ್ತರಿಸಲಾಗಿದೆ.
ಸಾರ್ವಜನಿಕ ವಲಯ, ಖಾಸಗಿ ವಲಯ, ವಿದೇಶಿ ಹಾಗೂ ಸಹಕಾರಿ ಬ್ಯಾಂಕ್ ಸೇರಿದಂತೆ ಪ್ರಾದೇಶಿಕ ಬ್ಯಾಂಕುಗಳು ಎಲ್ಲಾ ಭಾನುವಾರ, 2 ಮತ್ತು 4ನೇ ಶನಿವಾರ ಸರ್ಕಾರಿ ರಜೆ ಇರುತ್ತದೆ. ಆರ್‌ಬಿಐ ಕಡ್ಡಾಯ ರಜೆ ದಿನಗಳಲ್ಲೂ ಕೆಲವು ನಿರ್ಬಂಧಿತ ಸೇವೆಗಳು ಲಭ್ಯವಿರಲಿದ್ದು, ಆನ್ ಲೈನ್ ಸೇವೆ ಕೂಡಾ ಹಲವು ಬ್ಯಾಂಕುಗಳು ನೀಡುತ್ತಿವೆ.

ಹಬ್ಬಗಳ ದಿನದಂದು ರಜೆ: ಸಾರ್ವತ್ರಿಕ ರಜೆ ದಿನಗಳಂದು ಸರ್ಕಾರಿ ಸ್ವಾಮ್ಯದ ಕಚೇರಿ, ಬ್ಯಾಂಕ್ ಹಾಗೂ ಖಾಸಗಿ ಹಣಕಾಸು ಸಂಸ್ಥೆಗಳಿಗೂ ರಜಾ ದಿನವಿರಲಿದೆ. ಅಸ್ಸಾಂನ ಬಿಹು, ಕೇರಳ ಓಣಂ ಸೇರಿದಂತೆ ಪ್ರಾದೇಶಿಕ ಹಬ್ಬಗಳ ದಿನದಂದು ಆಯಾ ರಾಜ್ಯಗಳಲ್ಲಿ ಬ್ಯಾಂಕ್ ಕಾರ್ಯ ನಿರ್ವಹಿಸುವುದಿಲ್ಲ. ರಜಾದಿನಗಳ ಸಂಪೂರ್ಣ ಪಟ್ಟಿಯನ್ನು ಮತ್ತಷ್ಟು ತಿಳಿಯಿರಿ.
ಪ್ರತಿ ವರ್ಷ ಗಣರಾಜ್ಯದಿನ (ಜನವರಿ 26), ಸ್ವಾತಂತ್ರ್ಯೋತ್ಸವ ದಿನ (ಆಗಸ್ಟ್ 15) ಹಾಗೂ ಗಾಂಧಿ ಜಯಂತಿ (ಅಕ್ಟೋಬರ್ 02) ದಿನದಂದು ಸರ್ಕಾರಿಸ್ವಾಮ್ಯದ ಕಚೇರಿ, ಬ್ಯಾಂಕ್ ಹಾಗೂ ಖಾಸಗಿ ಹಣಕಾಸು ಸಂಸ್ಥೆಗಳಿಗೂ ರಜಾ ದಿನವಿರಲಿದೆ. ಅಸ್ಸಾಂನ ಬಿಹು, ಕೇರಳ ಓಣಂ ಸೇರಿದಂತೆ ಪ್ರಾದೇಶಿಕ ಹಬ್ಬಗಳ ದಿನದಂದು ಆಯಾ ರಾಜ್ಯಗಳಲ್ಲಿ ಬ್ಯಾಂಕ್ ಕಾರ್ಯ ನಿರ್ವಹಿಸುವುದಿಲ್ಲ. ಆರ್‌ಬಿಐ ರಜೆಯ ಪಟ್ಟಿ ರಾಜ್ಯೋತ್ಸವಗಳು, ಧಾರ್ಮಿಕ ರಜಾದಿನಗಳು ಮತ್ತು ಹಬ್ಬಗಳ ವರ್ಗಗಳ ಅಡಿಯಲ್ಲಿ ಬರುತ್ತದೆ. ಹೀಗಾಗಿ, ಕರ್ನಾಟಕದಲ್ಲಿ ನವೆಂಬರ್ 1 ರಂದು ಕನ್ನಡ ರಾಜ್ಯೋತ್ಸವದಂದು ರಜೆ ಇರಲಿದೆ.
ಕೊರೊನಾವೈರಸ್ ಸಾಂಕ್ರಾಮಿಕ ನಿರ್ಬಂಧ ಮಾರ್ಗಸೂಚಿ ನಡುವೆಯೂ ಆನ್ ಲೈನ್ ಬ್ಯಾಂಕಿಂಗ್, ಡಿಜಿಟಲ್ ಪೇಮೆಂಟ್ ವ್ಯವಸ್ಥೆ ಎಂದಿನಂತೆ ಸಕ್ರಿಯವಾಗಿರಲಿದೆ ಎಂದು ಆರ್ ಬಿ ಐ ತಿಳಿಸಿದೆ. ರಿಸರ್ವ್ ಬ್ಯಾಂಕ್ (RBI) ರಜಾದಿನಗಳನ್ನು ಮೂರು ವರ್ಗಗಳಾಗಿ ವರ್ಗೀಕರಿಸಿದೆ. ನೆಗೋಶಿಯಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್ ಅಡಿಯಲ್ಲಿ ರಜಾದಿನ; ನೆಗೋಶಿಯಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್ ಮತ್ತು ರಿಯಲ್-ಟೈಮ್ ಗ್ರಾಸ್ ಸೆಟಲ್ಮೆಂಟ್ ರಜಾ ಅಡಿಯಲ್ಲಿ ರಜೆ; ಮತ್ತು ಅಕೌಂಟ್ಸ್ ಕ್ಲೋಸಿಂಗ್. ನೀವು ಬ್ಯಾಂಕ್ ರಜಾದಿನಗಳ ಪಟ್ಟಿಯನ್ನು ತಿಳಿದುಕೊಳ್ಳಲು ಬಯಸಿದರೆ, ನೀವು ಈ ಲಿಂಕ್ ಅನ್ನು ಪರಿಶೀಲಿಸಬಹುದು.
ಜನವರಿ ತಿಂಗಳು
ಜನವರಿ 1: ಹೊಸ ವರ್ಷಾಚರಣೆ
ಜನವರಿ 14: ಮಕರ ಸಂಕ್ರಾಂತಿ/ಪೊಂಗಲ್/ಐಮೊಯಿನು ಐರಪ
ಜನವರಿ 15: ಉತ್ತರಾಯಣ ಪುಣ್ಯಕಾಲ, ಸಂಕ್ರಮಣ, ಪೊಂಗಲ್, ತಿರುವಳ್ಳುವರ್ ದಿನ, ಗಾನ್ ಗಾಯಿ, ಮಾಘ್ ಬಿಹು
ಜನವರಿ 26: ಗಣರಾಜ್ಯೋತ್ಸವ
ಫೆಬ್ರವರಿ
ಫೆಬ್ರವರಿ 5: ವಸಂತ ಪಂಚಮಿ
ಮಾರ್ಚ್
ಮಾರ್ಚ್ 1: ಮಹಾ ಶಿವರಾತ್ರಿ
ಮಾರ್ಚ್ 8: ಹೋಳಿ
ಏಪ್ರಿಲ್
ಏಪ್ರಿಲ್ 10: ರಾಮ ನವಮಿ
ಏಪ್ರಿಲ್ 13: ಉಗಾದಿ
ಏಪ್ರಿಲ್ 14: ಡಾ. ಅಂಬೇಡ್ಕರ್ ಜಯಂತಿ, ಮಹಾವೀರ ಜಯಂತಿ, ಬೈಸಾಕಿ, ತಮಿಳು ಹೊಸ ವರ್ಷ, ಚೈರೊಬಾ, ಬಿಜು ಹಬ್ಬ, ಬೊಹಾಗ್ ಬಿಹು
ಏಪ್ರಿಲ್ 15: ಗುಡ್ ಫ್ರೈಡೇ, ಬೆಂಗಾಲಿ ಹೊಸ ವರ್ಷ, ಹಿಮಾಚಲ ದಿನ, ವಿಶು
ಮೇ
ಮೇ 1: ಕಾರ್ಮಿಕರ ದಿನಾಚರಣೆ
ಮೇ 3: ಭಗವಾನ್ ಪರಶುರಾಮ್ ಜಯಂತಿ, ರಂಜಾನ್ ಈದ್(ಈದ್ ಉಲ್ ಫಿತ್ರ್), ಬಸವ ಜಯಂತಿ, ಅಕ್ಷಯ ತೃತೀಯ
ಮೇ 16: ಬುದ್ಧ ಪೂರ್ಣಿಮಾ
ಜೂನ್
ಜೂನ್ 14: ಸಂತ ಗುರು ಕಬೀರ್ ಜಯಂತಿ
ಜುಲೈ
ಜುಲೈ 10: ಬಕ್ರೀದ್- ಈದ್ ಅಲ್ ಅದಾ
ಆಗಸ್ಟ್
ಆಗಸ್ಟ್ 9 : ಮೊಹರಂ
ಆಗಸ್ಟ್ 12: ರಕ್ಷಾ ಬಂಧನ
ಆಗಸ್ಟ್ 15: ಸ್ವಾತಂತ್ರ್ಯ ದಿನಾಚರಣೆ
ಆಗಸ್ಟ್ 16: ಪಾರ್ಸಿ ಹೊಸ ವರ್ಷ
ಆಗಸ್ಟ್ 19: ಕೃಷ್ಣ ಜನ್ಮಾಷ್ಟಮಿ
ಆಗಸ್ಟ್ 31: ಗಣೇಶ ಚತುರ್ಥಿ
ಸೆಪ್ಟೆಂಬರ್
ಸೆಪ್ಟೆಂಬರ್ 8: ತಿರು ಓಣಂ
ಅಕ್ಟೋಬರ್
ಅಕ್ಟೋಬರ್ 2: ಮಹಾತ್ಮ ಗಾಂಧಿ ಜಯಂತಿ
ಅಕ್ಟೋಬರ್ 3: ಮಹಾ ಅಷ್ಟಮಿ
ಅಕ್ಟೋಬರ್ 4: ಮಹಾ ನವಮಿ
ಅಕ್ಟೋಬರ್ 5: ವಿಜಯ ದಶಮಿ
ಅಕ್ಟೋಬರ್ 9: ಈದ್ ಇ ಮಿಲಾದ್
ಅಕ್ಟೋಬರ್ 24: ದೀಪಾವಳಿ
ನವೆಂಬರ್
ನವೆಂಬರ್ 8: ಗುರು ನಾನಕ್ ಜಯಂತಿ
ಡಿಸೆಂಬರ್
ಡಿಸೆಂಬರ್ 25: ಕ್ರಿಸ್ ಮಸ್
English summary
Bank Holidays 2022: Full List of Days Banks Will Remain Closed
Here is the list of bank of holidays 2021. 31 holidays in for banks in 2021 apart from Saturday and Sunday’s.
Story first published: Monday, January 3, 2022, 9:34 [IST]