ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಡಿಸೆಂಬರ್ 11 ರ ಶನಿವಾರದಂದು ಐದು ಗಂಟೆಗಳ ಕಾಲ ತನ್ನ ಇಂಟರ್ನೆಟ್ ಬ್ಯಾಂಕಿಂಗ್ ಲಭ್ಯವಿಲ್ಲ ಎಂದು ಘೋಷಿಸಿದೆ. ತಂತ್ರಜ್ಞಾನ ಅಪ್‌ಗ್ರೇಡ್‌ನಿಂದಾಗಿ ಡೌನ್‌ಟೈಮ್ ಆಗುತ್ತದೆ ಎಂದು ಬ್ಯಾಂಕ್ ಹೇಳಿದೆ. ನವೀಕರಣವು ಡಿಸೆಂಬರ್ 11, 2021 ರಂದು ರಾತ್ರಿ 11:30 ರಿಂದ ಬೆಳಿಗ್ಗೆ 4:30 ರವರೆಗೆ ನಡೆಯುತ್ತದೆ ಎಂದು ಎಸ್‌ಬಿಐ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಈ ಘೋಷಣೆ ಮಾಡಿದೆ.

ಡಿಸೆಂಬರ್ 11 ರಂದು ರಾತ್ರಿ 11:30 ರಿಂದ, ಡಿಸೆಂಬರ್ 12 ರಂದು ಮುಂಜಾನೆ 4:30 ಗಂಟೆಯ ನಡುವೆ ಡೌನ್‌ಟೈಮ್ ಸಂಭವಿಸುತ್ತದೆ. ಅಂದರೆ ಒಟ್ಟು 300 ನಿಮಿಷಗಳು ಸೇವೆಯಲ್ಲಿ ವ್ಯತ್ಯಯ ಎಂದು ಟ್ವೀಟ್‌ನಲ್ಲಿ ಎಸ್‌ಬಿಐ ಉಲ್ಲೇಖಿಸಲಾಗಿದೆ. ಈ ಅವಧಿಯಲ್ಲಿ – INB, ಯೂನೊ (Yono), ಯೂನೊ ಲೈಟ್ (Yono Lite), ಯೂನೊ ಬಿಸಿನೆಸ್ (Yono Business) ಮತ್ತು ಯುಪಿಐ (UPI) ಸೇವೆಗಳು ಲಭ್ಯವಿರುವುದಿಲ್ಲ ಎಂದು ಟ್ವೀಟ್‌ನಲ್ಲಿ ತಿಳಿಸಿದೆ.
‘ನಾವು ಉತ್ತಮ ಬ್ಯಾಂಕಿಂಗ್ ಅನುಭವವನ್ನು ಒದಗಿಸಲು ಪ್ರಯತ್ನಿಸುತ್ತಿರುವಾಗ ನಮ್ಮ ಗೌರವಾನ್ವಿತ ಗ್ರಾಹಕರು ನಮ್ಮೊಂದಿಗೆ ಸಹಿಸಿಕೊಳ್ಳಬೇಕೆಂದು ನಾವು ವಿನಂತಿಸುತ್ತೇವೆ.’ ಎಂದು ತನ್ನ ಅಧಿಕೃತ ಟ್ವೀಟ್‌ನಲ್ಲಿ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಉಲ್ಲೇಖಿಸಿದೆ.

ಇನ್ನು ಗೂಗಲ್ ಪೇ (Google Pay), ಫೋನ್‌ಪೇ (Phone Pe) ಸೇರಿದಂತೆ ಇತರೆ ಥರ್ಡ್ ಪಾರ್ಟಿ ಪಾವತಿ ಪ್ಲಾಟ್‌ಫಾರ್ಮ್‌ಗಳ ಮೂಲಕ ಪಾವತಿ ಮಾಡಲು ಪ್ರಯತ್ನಿಸುತ್ತಿರುವ ಎಸ್‌ಬಿಐ (SBI) ಬಳಕೆದಾರರು ದೋಷಗಳನ್ನು ಎದುರಿಸಬಹುದು ಎಂದು ವರದಿಯಲ್ಲಿ ತಿಳಿಸಲಾಗಿದೆ. ಎಸ್‌ಬಿಐನ ಈ ನವೀಕರಣವು ಮುಂಜಾನೆ ಅವಧಿಯಲ್ಲಿ ನಡೆಯುತ್ತಿರುವುದರಿಂದ, ಇದು ಹೆಚ್ಚಿನ ಗ್ರಾಹಕರ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಹೇಳಲಾಗಿದೆ.

ನೆಟ್ ಬ್ಯಾಂಕಿಂಗ್ ವಹಿವಾಟ ನಡೆಸುವಾಗ ಅನುಸರಿಸಲೇಬೇಕಾದ ಕೆಲವು ಕ್ರಮಗಳು:
ಹಂತ:1 ಮೊದಲನೇಯದಾಗಿ ನೀವು ವ್ಯವಹರಿಸುತ್ತಿರುವ ಹಣಕಾಸು ಸಂಸ್ಥೆಯ ಬಗ್ಗೆ ಕೂಲಂಕುಶವಾಗಿ ಪರಿಶೀಲಿಸಿ.
ಹಂತ:2 ನೀವು ಹಣವನ್ನು ವರ್ಗಾಯಿಸುವ ಬ್ಯಾಂಕ್ ಖಾತೆಯನ್ನು ಪರಿಶೀಲಿಸುವುದು ಉತ್ತಮ.
ಹಂತ:3 ನಿಮಗೆ ಸ್ವಲ್ಪ ಅನುಮಾನ ಬಂದರೂ ಹಣ ವರ್ಗಾವಣೆ ಮಾಡಲು ಹೋಗಬೇಡಿ.
ಹಂತ:4 ಬ್ಯಾಂಕ್ ವಿವರಗಳನ್ನು ಪರಿಶೀಲಿಸಲು ಸಂಸ್ಥೆಯ ಅಧಿಕೃತ ಕಾಲ್ ಸೆಂಟರ್‌ಗೆ ಕರೆ ಮಾಡಿ.
ಹಂತ:5 ಅನುಮಾನವಿದ್ದಲ್ಲಿ, ಅಧಿಕೃತ ಬ್ಯಾಂಕ್ ಶಾಖೆಗೆ ಭೇಟಿ ನೀಡಿ.
ಹಂತ:6 ಯಾವುದೇ ಪರಿಶೀಲನೆ ಇಲ್ಲದೆ ಮೇಲ್ ಮೂಲಕ ವ್ಯವಹರಿಸಲು ಹೋಗಬೇಡಿ.
ಹಂತ:7 ನಿಮ್ಮ ಎಲ್ಲಾ ನೆಟ್ ಬ್ಯಾಂಕಿಂಗ್ ವಹಿವಾಟುಗಳ ಪ್ರಿಂಟ್‌ಸ್ಕ್ರೀನ್‌ಗಳನ್ನು ಯಾವಾಗಲೂ ತೆಗೆದುಕೊಳ್ಳಿ
ಹಂತ:8 ನೀವು ತಪ್ಪಾದ ಬ್ಯಾಂಕ್ ಖಾತೆಗೆ ಹಣವನ್ನು ವರ್ಗಾಯಿಸಿದರೆ, ಸಾಧ್ಯವಾದಷ್ಟು ಬೇಗ ಬ್ಯಾಂಕಿಂಗ್ ಸಂಸ್ಥೆಗೆ ವರದಿ ಮಾಡಿ.
ಹಂತ:9 ಹಣಕಾಸು ಸಂಸ್ಥೆಯ ವೆಬ್‌ಸೈಟ್ ತನ್ನ URL ನಲ್ಲಿ ‘https’ ಅನ್ನು ಹೊಂದಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ. ಪರಿಶೀಲಿಸಲು ಬ್ರೌಸರ್ ಪರಿಶೀಲಿಸಿ
ಸಾಮಾನ್ಯವಾಗಿ ಗಮನಿಸುವುದಾದರೆ ಸೈಬರ್ ಕ್ರಿಮಿನಲ್‌ಗಳು ಜನರನ್ನು ಸುಲಭವಾಗಿ ವಂಚನೆ ಮಾಡಿಬಿಡುತ್ತಾರೆ. ಬ್ಯಾಂಕ್ ಸಿಬ್ಬಂದಿ ಎಂದು ಹೇಳಿಕೊಡು ಆನ್‌ಲೈನ್ ಮೂಲಕ ವಂಚಿಸುತ್ತಾರೆ. ಇದಕ್ಕೆ ಮುಖ್ಯ ಕಾರಣ ಜನರಲ್ಲಿರುವ ಮಾಹಿತಿಯ ಕೊರತೆ. ಆದರಿಂದ ನೀವು ಯಾವುದೇ ಬ್ಯಾಂಕ್ ಮಾಹಿತಿಯನ್ನು ಹಂಚಿಕೊಳ್ಳುವಾಗ ಬ್ಯಾಂಕ್ ಅನ್ನು ಸಂಪರ್ಕಿಸುವುದು ಒಳಿತು.
ಯಾರಿಗಾದರೂ ಹಣ ಕಳುಹಿಸುವ ಮುನ್ನ ಗಮನಿಸಬೇಕಾದ ಅಂಶಗಳು
* ವಂಚಕರು ಹೆಚ್ಚಿನ ಪ್ರಮಾಣದಲ್ಲಿ ಆನ್‌ಲೈನ್‌ನಲ್ಲಿ ವಂಚಿಸುತ್ತಾರೆ.
* ಅಪರಿಚಿತ ವ್ಯಕ್ತಿಗಳು ಬ್ಯಾಂಕ್ ಸಿಬ್ಬಂದಿ ಎಂದು ಹೇಳಿದಾಗ ಅವರ ವಿವರಗಳನ್ನು ಪರಿಶೀಲಿಸಿ.
* ಅನೇಕ ಖಾತೆದಾರರು ತಮ್ಮ ಹಣವನ್ನು ಸೈಬರ್ ಅಪರಾಧಿಗಳಿಗೆ ವರ್ಗಾಯಿಸುತ್ತಾರೆ
* ಖಾತೆದಾರರು ಯಾವುದೇ ಅಪರಿಚಿತ ವ್ಯಕ್ತಿಗಳ ಹಣ ವರ್ಗಾವಣೆ ಮಾಡಲು ಹೋಗಬೇಡಿ.
Best Mobiles in India
English summary
SBI Internet Banking, YONO App Service Will Not work Today Few Hours: Details.