ಕೋವಿಡ್ 3ನೇ ಅಲೆಯ ಎಫೆಕ್ಟ್ ಆಗಲೇ ಚಿತ್ರರಂಗದ ಮೇಲೆ ಬೀರಲು ಆರಂಭಿಸಿದೆ. ಇತ್ತೀಚೆಗಷ್ಟೇ ಕೋಟ್ಯಂತರ ರೂಪಾಯಿ ಖರ್ಚಿನಲ್ಲಿ ಪ್ರಮೋಷನ್ ಆಗಿರುವ ದೊಡ್ಡ ಮತ್ತು ಮೀಡಿಯಂ ಬಜೆಟ್‌ನ ಸಿನಿಮಾಗಳ ರಿಲೀಸ್ ಡೇಟ್‌ಗಳು ಕೊರೊನಾ ಭೀತಿಯಿಂದಾಗಿ ಮುಂದಕ್ಕೆ ಹೋಗಿದೆ. ಇದರಿಂದ ಸಾವಿರಾರು ಕೋಟಿ ರೂಪಾಯಿ ನಷ್ಟವಾಗಲಿದೆ ಎನ್ನಲಾಗಿದೆ.
ಇನ್ನೇನು ಕೊರೊನಾ ಓಡಿ ಹೋಯಿತು ಎಂದು ಚಿತ್ರರಂಗ ನಿರಾಳವಾಗಿದ್ದ ಸಮಯದಲ್ಲೇ ಈಗ ಅದರ ಹೊಸ ರೂಪಾಂತರಿ ಓಮ್ರಿಕಾನ್ ಕತ್ತಿ ಝಳಪಿಸುತ್ತಿದೆ. ಹೊಸ ವರ್ಷದ ಆರಂಭದಲ್ಲೇ ಅದು ಚಿತ್ರರಂಗಕ್ಕೆ ಬಲವಾದ ಏಟು ನೀಡಿದೆ. ಹೊಸ ವರ್ಷದ ಬಹುನಿರೀಕ್ಷಿತ ಸಿನಿಮಾವೆನ್ನಲಾಗುತ್ತಿದ್ದ ‘ಆರ್‌ಆರ್‌ಆರ್’ ಇದೇ 7 ರಂದು ಬಿಡುಗಡೆಯಾಗಬೇಕಿತ್ತು. ರಾಜಮೌಳಿ ನಿರ್ದೇಶನದ ಜೂ.ಎನ್.ಟಿ.ಆರ್ ಹಾಗೂ ರಾಮ್ ಚರಣ್ ನಟನೆಯ ‘ಆರ್‌ಆರ್‌ಆರ್’ ಚಿತ್ರ ಅಡ್ವಾನ್ಸ್ ಬುಕ್ಕಿಂಗ್‌ನಿಂದಲೇ 10 ಕೋಟಿ ರೂಪಾಯಿ ಸಂಗ್ರಹ ಮಾಡಿ ಗಮನ ಸೆಳೆದಿತ್ತು. ಆದರೆ ಈಗ ಹೆಚ್ಚುತ್ತಿರುವ ಕೊರೊನಾ ಭೀತಿಯಿಂದಾಗಿ ಈ ಚಿತ್ರ ಬಿಡುಗಡೆ ಮುಂದೂಡಲ್ಪಟ್ಟಿದೆ. ಇದರಿಂದ ಚಿತ್ರತಂಡಕ್ಕೆ ಸುಮಾರು 500 ಕೋಟಿ ರೂಪಾಯಿ ನಷ್ಟವಾಗಿದೆ ಎನ್ನಲಾಗುತ್ತಿದೆ.
ಕಲೆಕ್ಷನ್‌ಗೆ ಹೊಡೆತ

ರಾಜಮೌಳಿಯ ‘ಆರ್‌ಆರ್‌ಆರ್’ ಚಿತ್ರಕ್ಕೆ ದಕ್ಷಿಣ ಭಾರತದಲ್ಲಿ ಬೇಡಿಕೆ ಇರುವಷ್ಟೇ ಉತ್ತರ ಭಾರತದಲ್ಲೂ ಇದೆ. ಆದರೆ ಈಗ ದೆಹಲಿ, ಮಹಾರಾಷ್ಟ್ರ ಸೇರಿದಂತೆ ಅನೇಕ ಕಡೆ ಚಿತ್ರಮಂದಿರಗಳ ಆಸನ ಭರ್ತಿಯನ್ನು ಶೇ. 50ಕ್ಕೆ ನಿಗದಿಪಡಿಸಲಾಗಿದ್ದು, ಇದರಿಂದಾಗಿ ಚಿತ್ರತಂಡ ನಿರೀಕ್ಷೆ ಮಾಡಿದ್ದ ಕಲೆಕ್ಷನ್‌ನಲ್ಲಿಅರ್ಧದಷ್ಟು ಕಡಿಮೆಯಾಗಲಿದೆ. ಇದು ಚಿತ್ರ ನಿರ್ಮಾಪಕರ ಮೇಲೆ ಭಾರಿ ಪರಿಣಾಮ ಬೀರಲಿರುವ ಮುನ್ಸೂಚನೆಯಿಂದಾಗಿಯೇ ಈ ಚಿತ್ರದ ರಿಲೀಸನ್ನು ಮುಂದೂಡಲಾಗಿದೆ ಟಾಲಿವುಡ್ ಸಿನಿಮಾ ವಿತರಕರು ಅಭಿಪ್ರಾಯಪಟ್ಟಿದ್ದಾರೆ.
ಕೊರೊನಾ ಎಫೆಕ್ಟ್: ‘RRR’ ಬಿಡುಗಡೆ ಪೋಸ್ಟ್‌ಪೋನ್ ಆಯ್ತು; ಹಾಗಾದ್ರೆ, ‘ರಾಧೆ ಶ್ಯಾಮ್’ ಕಥೆ ಏನು?
ಕಾಲಿವುಡ್‌ನಲ್ಲೂ ಕಾರ್ಮೋಡ

ಅಜಿತ್ ನಟನೆಯ ‘ವಲಿಮೈ’ ಚಿತ್ರ ಇದೇ ಜನವರಿ 13ಕ್ಕೆ ರಿಲೀಸ್ ಆಗಬೇಕಿದೆ. ಆದರೆ ತಮಿಳುನಾಡು ಸರ್ಕಾರವು ಕೊರೊನಾ ಮುನ್ನೆಚ್ಚರಿಕೆಗಾಗಿ ಚಿತ್ರಮಂದಿರದಲ್ಲಿ ಶೇ. 50ರಷ್ಟು ಸೀಟು ಭರ್ತಿಗೆ ನಿರ್ದೇಶನ ನೀಡಿರುವುದರಿಂದ ‘ವಲಿಮೈ’ ಚಿತ್ರ ನಿರ್ಮಾಪಕರು ಇದರ ಬಿಡುಗಡೆಯನ್ನು ಮುಂದೂಡುವ ಯೋಚನೆಯಲ್ಲಿದ್ದಾರೆ. ಕರ್ನಾಟಕದಲ್ಲೂ ಈ ಚಿತ್ರಕ್ಕೆ ಭಾರಿ ಬೇಡಿಕೆ ಇದ್ದು, ಈಗಾಗಲೇ ಕೋಟ್ಯಂತರ ರೂಪಾಯಿ ನೀಡಿ ಇಲ್ಲಿ ರಿಲೀಸ್ ಮಾಡಲು ವಿತರಕ ಕಮಾರ್ ಫಿಲ್ಮ್ ಫ್ಯಾಕ್ಟರಿ ಚಿತ್ರದ ಪ್ರದಶನ ಹಕ್ಕು ಖರೀದಿಸಿದೆ. ಪ್ರಭಾಸ್ ನಟನೆಯ ‘ರಾಧೆ ಶಾಮ್’ ಚಿತ್ರದ ರಿಲೀಸ್ ದಿನಾಂಕವೂ ನಿಗದಿಯಾಗಿದೆ. ಇದೇ ರೀತಿ ಮಹೇಶ್ ಬಾಬು, ಪವನ್ ಕಲ್ಯಾಣ್ ನಟನೆಯ ಚಿತ್ರಗಳು ಈ ತಿಂಗಳು ರಿಲೀಸ್ ಆಗಬೇಕಿತ್ತು. ಆದರೆ ಈಗ ದೊಡ್ಡ ಬಜೆಟ್‌ನ ಚಿತ್ರಗಳು ಯಾವಾಗ ರಿಲೀಸ್ ಅಗಲಿವೆ ಎಂಬುದು ಆ ಚಿತ್ರದ ನಿರ್ಮಾಪಕರಿಗೂ ಗೊತ್ತಾಗುತ್ತಿಲ್ಲ!
ಜನವರಿ 7ಕ್ಕೆ ರಿಲೀಸ್ ಆಗಬೇಕಿದ್ದ RRR ಸಿನಿಮಾ ಮತ್ತೆ ಮುಂದಕ್ಕೆ ಹೋಯ್ತು: ಅಧಿಕೃತಪಡಿಸಿದ ಚಿತ್ರತಂಡ
ಮೀಡಿಯಂ ಬಜೆಟ್‌ನ ಸಿನಿಮಾ ಕಥೆ

ದೊಡ್ಡ ಬಜೆಟ್‌ನ ಚಿತ್ರಗಳು ಯಾವಾಗ ರಿಲೀಸ್ ಆದರೂ ದುಡ್ಡು ಮಾಡುತ್ತವೆ. ಆದರೆ ಸಣ್ಣ ಹಾಗೂ ಮೀಡಿಯಂ ಬಜೆಟ್‌ನ ಚಿತ್ರಗಳ ನಿರ್ಮಾಪಕರ ಕಥೆ ಏನು ಎಂಬುದು ಆತಂಕದ ವಿಷಯವಾಗಿದೆ. ಜನವರಿಯಲ್ಲಿ ಟಾಲಿವುಡ್‌ನಲ್ಲಿ ಸುಮಾರು 7, ಕಾಲಿವುಡ್‌ನಲ್ಲಿ 8, ಮಾಲಿವುಡ್‌ನಲ್ಲಿ 5, ಸ್ಯಾಂಡಲ್‌ವುಡ್‌ನಲ್ಲಿ 4 ಮೀಡಿಯಂ ಬಜೆಟ್‌ನ ಚಿತ್ರಗಳು ರಿಲೀಸ್ ಆಗಬೇಕಿವೆ. ಈ ನಿರ್ಮಾಪಕರ ಬಜೆಟ್ ಕನಿಷ್ಠ 5 ರಿಂದ 10 ಕೋಟಿ ರೂಪಾಯಿ. ಈಗ ಈ ಚಿತ್ರಗಳು ಸರಿಯಾದ ಸಮಯಕ್ಕೆ ರಿಲೀಸ್ ಆಗದಿದ್ದರೆ ನಿರ್ಮಾಪಕರು ತೀವ್ರ ಆರ್ಥಿಕ ನಷ್ಟ ಅನುಭವಿಸಲಿದ್ದಾರೆ. ‘ಬಡ್ಡಿಗೆ ಹಣ ತಂದು ಸಿನಿಮಾ ಮಾಡಿದ್ದೇವೆ. ಈಗ ಚಿತ್ರವನ್ನು ಬರೀ ಒಟಿಟಿಯಲ್ಲಿ ರಿಲೀಸ್ ಮಾಡಿದರೆ ಹಾಕಿರುವ ಬಂಡವಾಳ ವಾಪಸ್ ಬರುವುದಿಲ್ಲ. ಚಿತ್ರಮಂದಿರಗಳಿಂದ ಬರುವ ಶೇರ್ ನಿರ್ಮಾಪಕರಿಗೆ ಹೆಚ್ಚು ಲಾಭ ಕೊಡಲಿದೆ. ಕೊರೊನಾದಿಂದಾಗಿ ಶೇ. 50ರಷ್ಟು ಆಸನ ಭರ್ತಿಗೆ ಮಾತ್ರ ಅವಕಾಶ ಇರುವುದರಿಂದ ಚಿತ್ರಮಂದಿರಕ್ಕೆ ಹೆಚ್ಚು ಜನರು ಬರುವುದಿಲ್ಲ. ನಾವು ನಿರೀಕ್ಷೆ ಮಾಡಿದಷ್ಟು ಹಣ ಸಂಗ್ರಹವಾಗುವುದಿಲ್ಲ’ ಎಂದು ನಿರ್ಮಾಪಕರೊಬ್ಬರು ಅಭಿಪ್ರಾಯಪಟ್ಟಿದ್ದಾರೆ. ಮೀಡಿಯಂ ಬಜೆಟ್‌ನ ಚಿತ್ರಗಳು ಈಗಾಗಲೇ ಚಿತ್ರದ ಪ್ರಮೊಷನ್‌ಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿವೆ. ಈಗ ದಿಢೀರನೆ ಚಿತ್ರದ ರಿಲೀಸ್ ಮುಂದೂಡಿದರೆ ನಿರ್ಮಾಪಕರ ಗತಿ ಏನು ಎಂದು ವಿಶ್ಲೇಷಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಚಿತ್ರರಂಗ ಯಾವ ರೀತಿ ಚೇತರಿಸಿಕೊಳ್ಳಲಿದೆ, ಆ ಹೊತ್ತಿಗೆ ಯಾವ ನಿರ್ಮಾಪಕರು ದಿವಾಳಿಯಾಗುತ್ತಾರೋ ಎಂಬ ಭಯ ಚಿತ್ರರಂಗವನ್ನು ಕಾಡುತ್ತಿದೆ.
ಮತ್ತೆ ಕೋವಿಡ್ ಆತಂಕ: RRR ಬಿಡುಗಡೆ ಮುಂದಕ್ಕೆ ಹೋಗಲಿದೆಯೇ? ರಾಜಮೌಳಿ ನೀಡಿದ್ರು ಸ್ಪಷ್ಟನೆ
ಕೋಟ್ಯಂತರ ರೂಪಾಯಿ ನಷ್ಟ

ಈಗಾಗಲೇ ಚಿತ್ರದ ರಿಲೀಸ್ ದಿನಾಂಕ ಅನೌನ್ಸ್ ಮಾಡಿರುವ ನಿರ್ಮಾಪಕರು, ಚಿತ್ರಮಂದಿರದ ಮಾಲೀಕರಿಂದ ಮುಂಗಡ ಹಣ ಪಡೆದಿರುತ್ತಾರೆ. ಚಿತ್ರ ಮುಂದೂಡಲ್ಪಟ್ಟಾಗ ಆ ಹಣ ವಾಪಸ್ ಕೊಡಬೇಕು. ಜತೆಗೆ ಚಿತ್ರದ ಪ್ರಚಾರಕ್ಕೆ ಖರ್ಚು ಮಾಡಿರುವ ಹಣ ನೀರಿನಲ್ಲಿ ಹೋಮ ಮಾಡಿದಂತೆಯೇ. ‘ಆರ್‌ಆರ್‌ಆರ್’ ಚಿತ್ರದ ಪ್ರಮೋಷನಲ್ ಬಜೆಟ್ ಇಡೀ ದಕ್ಷಿಣ ಭಾರತಕ್ಕೇ 50 ಕೋಟಿ ರೂಪಾಯಿ ಎಂದು ನಿಗದಿಯಾಗಿತ್ತು. ಈಗಾಗಲೇ ಈ ಚಿತ್ರತಂಡವು ಮುಂಬಯಿ, ಬೆಂಗಳೂರು, ಕೇರಳ ಸೇರಿದಂತೆ ಅನೇಕ ಕಡೆ ಪ್ರಮೋಷನ್ ಮಾಡಿದೆ. ಆದರೆ ರಿಲೀಸ್ ದಿನಾಂಕ ಮುಂದೆ ಹೋಗಿರುವ ಕಾರಣ ಮತ್ತೆ ಪ್ರಮೋಷನ್ ಬಜೆಟ್‌ಗೆ ಹೆಚ್ಚು ಹಣ ಬೇಕೇ ಬೇಕು. ಇದು ಚಿತ್ರ ನಿರ್ಮಾಪಕರ ಮೇಲೆ ದೊಡ್ಡ ಆರ್ಥಿಕ ಹೊರೆ ಎಂದೇ ಹೇಳಲಾಗುತ್ತಿದೆ.