Karnataka news paper

ಮುಂಬೈ: ಜೋರಾಗಿ ಸೌಂಡ್ ಇಟ್ಟುಕೊಂಡು ಹಾಡು ಕೇಳುತ್ತಿದ್ದ ವ್ಯಕ್ತಿಯ ಬರ್ಬರ ಕೊಲೆ


Source : Online Desk

ಮುಂಬೈ: ವ್ಯಕ್ತಿಯೋರ್ವನ ಮನೆಯ ಹೊರಗೆ ನೆರೆ ಮನೆಯ ವ್ಯಕ್ತಿ ಜೋರಾಗಿ ಹಾಡನ್ನು ಹಾಕಿದ್ದಕ್ಕೆ ಮತ್ತು ಅದರ ಸೌಂಡ್​ ಅನ್ನು ಕಡಿಮೆ ಮಾಡಲು ನಿರಾಕರಿಸಿದ್ದಕ್ಕೆ ಆ ವ್ಯಕ್ತಿಯನ್ನು ಕೊಲೆ ಮಾಡಿರುವ ಘಟನೆ ಮುಂಬೈನಲ್ಲಿ ನಡೆದಿದೆ.

ವ್ಯಕ್ತಿಯೊಬ್ಬ ತನ್ನ ಪಕ್ಕದ ಮನೆಯ 40 ವರ್ಷದ ವ್ಯಕ್ತಿಯನ್ನು ಕೊಂದಿದ್ದಾನೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ. ಮಾಲ್ವಾನಿ ಪ್ರದೇಶದ ಅಂಬುಜ್ವಾಡಿ ಪ್ರದೇಶದಲ್ಲಿ ಬುಧವಾರ ರಾತ್ರಿ ಈ ಘಟನೆ ನಡೆದಿದೆ ಎಂದು ಅವರು ಹೇಳಿದರು.

ಮೃತರನ್ನು ಸುರೇಂದ್ರ ಕುಮಾರ್ ಗುನ್ನಾರ್ ಎಂದು ಗುರುತಿಸಲಾಗಿದೆ. ಅವರು ತಮ್ಮ ಗುಡಿಸಲು ಹೊರಗೆ ಕುಳಿತು ರೆಕಾರ್ಡರ್‌ನಲ್ಲಿ ಕೆಲವು ಹಾಡುಗಳನ್ನು ಕೇಳುತ್ತಿದ್ದರು ಎಂದು ಅಧಿಕಾರಿ ತಿಳಿಸಿದ್ದಾರೆ.

ಅವರ ನೆರೆಹೊರೆಯವರು ಸೈಫ್ ಅಲಿ ಚಂದ್ ಅಲಿ ಶೇಖ್ (25) ವಾಲ್ಯೂಮ್ ಕಡಿಮೆ ಮಾಡಲು ಹೇಳಿದ್ದಾರೆ. ಆದರೆ ಗುನ್ನಾರ್ ಅದಕ್ಕೆ ನಿರಾಕರಿಸಿದ್ದಾರೆ. ಆಗ ಶೇಖ್ ಆತನಿಗೆ ಹೊಡೆದಿದ್ಧಾನೆ ಎನ್ನಲಾಗಿದೆ. ಅತಿಯಾದ ರಕ್ತ ಸೋರಿಕೆಯಿಂದಾಗಿ ಸುರೇಂದ್ರ ಕುಮಾರ್ ಗುನ್ನಾರ್ ಪ್ರಜ್ಞೆ ತಪ್ಪಿ ಬಿದ್ದಿದ್ದರು.

ಅವರನ್ನು ಹತ್ತಿರದ ಆಸ್ಪತ್ರೆಗೆ ತಕ್ಷಣ ಸಾಗಿಸಲಾದ್ರೂ, ಅಲ್ಲಿ ವೈದ್ಯರು ದಾಖಲು ಮಾಡುವ ಮೊದಲು ಅವರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಿದರು ಎಂದು ಅಧಿಕಾರಿ ತಿಳಿಸಿದ್ದಾರೆ.

ಆರೋಪಿಯನ್ನು ನಂತರ ಭಾರತೀಯ ದಂಡ ಸಂಹಿತೆ ಸೆಕ್ಷನ್ 302 (ಕೊಲೆ) ಮತ್ತು ಇತರ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಬಂಧಿಸಲಾಯಿತು ಎಂದು ಅವರು ಹೇಳಿದರು.



Read more

Leave a Reply

Your email address will not be published. Required fields are marked *