ಹೊಸಪೇಟೆ: ಲಂಚ ಪಡೆಯುತ್ತಿದ್ದ ಪೊಲೀಸರ ಮೇಲೆ ಎಸಿಬಿ ದಾಳಿ
2.30 ಲಕ್ಷ ಹಣ ಪಡೆಯುವ ವೇಳೆ ಸಿಕ್ಕಿ ಬಿದ್ದಿದ್ದರು. ಕೊಟ್ಟೂರು ತಾಪಂ ಮಾಜಿ ಅಧ್ಯಕ್ಷ ವೆಂಕಟೇಶ್ ನಾಯ್ಕ್ ಬಳಿ ಲಂಚ ಪಡೆಯುವ ವೇಳೆ ಬಳ್ಳಾರಿಯ ಎಸಿಬಿ ಅಧಿಕಾರಿಗಳು ದಾಳಿ ಮಾಡಿ ವಶಕ್ಕೆ ಪಡೆದಿದ್ದರು.
ಸಿಪಿಐರ ಮುರುಗೇಶ್ ರನ್ನು ಅಮಾನತ್ತು ಮಾಡುವಂತೆ ಐಜಿಪಿಗೆ ಶಿಫಾರಸು ಮಾಡಿದ್ದಾರೆ.
ಹಂಪಿ: ಪ್ರವಾಸಿಗನ ಬ್ಯಾಗ್ ವಾಪಸ್
ನಾಗಾಪುರದ ವ್ಯಕ್ತಿಯೊಬ್ಬರು ಕಳೆದುಕೊಂಡಿದ್ದ ನಗದು ಸಹಿತ ದಾಖಲೆಗಳ ಬ್ಯಾಗನ್ನು ನಗರದ ರೈಲ್ವೆ ನಿಲ್ದಾಣ ಪೊಲೀಸರು ಮರಳಿಸಿ ಮಾನವೀಯತೆ ಮೆರೆದಿದ್ದಾರೆ.
ನಾಗಾಪುರದ ರವೀಂದ್ರ ಮಿಶ್ರ ಎಂಬುವರು ಇತ್ತೀಚೆಗೆ ಹಂಪಿ ಪ್ರವಾಸಕ್ಕೆ ಬಂದ ವೇಳೆ ನಗರದ ರೈಲ್ವೆ ನಿಲ್ದಾಣದಲ್ಲಿಐದು ಸಾವಿರೂ ಸೇರಿ ಇತರೆ ದಾಖಲೆಗಳಿದ್ದ ಬ್ಯಾಗನ್ನು ಮರೆತು ಹಂಪಿ ಪ್ರವಾಸ ಮಾಡಿದ್ದರು. ನಂತರ ಬ್ಯಾಗ್ ಮರೆತು ಹೋಗಿದ್ದೇನೆ ಎಂದು ಹುಡುಕಲು ಬಂದಾಗ ರೈಲ್ವೆ ಪೊಲೀಸ್ ಮಂಜುನಾಥ್ ಪಾಟೀಲ್, ಗೃಹರಕ್ಷಕ ದಳದ ಮೈನುದ್ದೀನ್ ಕರೆದು ಬ್ಯಾಗ್ ಮರಳಿಸಿದ್ದಾರೆ ಎಂದು ಪ್ರವಾಸಿ ರವೀಂದ್ರ ತಿಳಿಸಿದ್ದು ರೈಲ್ವೆ ಸಿಬ್ಬಂದಿ ಕೃತಜ್ಞತೆ ಸಲ್ಲಿಸಿದ್ದಾರೆ.
ಸಾವಿರಾರು ಪ್ರವಾಸಿಗರಿಂದ ಹಂಪಿ ಸ್ಮಾರಕ ವೀಕ್ಷಣೆ
ವಿಶ್ವ ವಿಖ್ಯಾತ ಹಂಪಿಗೆ ಹೆಚ್ಚಿನ ಪ್ರವಾಸಿಗರು ಭಾನುವಾರ ಆಗಮಿಸಿ ಸ್ಮಾರಕಗಳನ್ನು ವೀಕ್ಷಿಸಿದರು. 4 ಸಾವಿರಕ್ಕೂ ಹೆಚ್ಚು ಪ್ರವಾಸಿಗರು ಆಗಮಿಸಿದ್ದರು. ಕಳೆದ ವಾರಕ್ಕಿಂತಲೂ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿದೆ.ಆದರೆ, ಕೋವಿಡ್, ಓಮಿಕ್ರಾನ್ ಭೀತಿಯಿಂದ ಪ್ರವಾಸಿಗರ ಸಂಖ್ಯೆಯಲ್ಲಿ ಸ್ವಲ್ಪ ಇಳಿಮುಖವಾಗಿದೆ.
ಸೇನಾ ನೇಮಕಾತಿಗೆ ನಕಲಿ ದಾಖಲೆ ಸೃಷ್ಟಿ: ಇಬ್ಬರು ಪೊಲೀಸ್ ಸಿಬ್ಬಂದಿ ಸೇರಿ 10 ಜನ ಬಂಧನ
ಹಂಪಿಯ ವಿರೂಪಾಕ್ಷೇಶ್ವರ ದೇಗುಲ, ಎದುರು ಬಸವಣ್ಣ ಮಂಟಪ, ರಾಣಿಯರ ಸ್ನಾನಗೃಹ, ಸಾಸಿವೆ ಕಾಳು, ಕಡಲೆಕಾಳು ಗಣಪ ಮಂಟಪ, ಮಹಾನವಮಿ ದಿಬ್ಬ, ಕಲ್ಲಿನ ರಥ, ವಿಜಯ ವಿಠ್ಠಲ ದೇಗುಲ ಸೇರಿದಂತೆ ವಿವಿಧ ಸ್ಮಾರಕಗಳನ್ನು ಪ್ರವಾಸಿಗರು ವೀಕ್ಷಿಸಿದರು.
ಹಂಪಿಯಲ್ಲಿಮಾಸ್ಕ್ ಕಡ್ಡಾಯಗೊಳಿಸಲಾಗಿದೆ. ಹೊರ ರಾಜ್ಯಗಳಿಂದ ಆಗಮಿಸುವ ಪ್ರವಾಸಿಗರು ಕಡ್ಡಾಯವಾಗಿ ವ್ಯಾಕ್ಸಿನ್ ಸರ್ಟಿಫಿಕೇಟ್,ಆರ್‌ಟಿಪಿಸಿಆರ್ ಪರೀಕ್ಷೆ ವರದಿ ಕಡ್ಡಾಯ ಎಂಬ ನಿಯಮ ಮಾಡಲಾಗಿದೆ.