Karnataka news paper

ತಿರುಚ್ಚಿ: 24 ಗಂಟೆ ತೆರೆದಿರುವ ಈ ರೈಲ್ವೇ ಕೌಂಟರಿನಲ್ಲಿ ಯೂಸ್ ಅಂಡ್ ಥ್ರೋ ಬೆಡ್ ಶೀಟ್ ಮಾರಾಟ


The New Indian Express

ತಿರುಚ್ಚಿ: ಕೊರೊನಾ ತನ್ನ ಕಬಂಧ ಬಾಹುಗಳನ್ನು ಮತ್ತೆ ಚಾಚುವ ಸೂಚನೆ ದೊರಕಿರುವಂತೆಯೇ ಕೇರಳದ ತಿರುಚ್ಚಿ ರೈಲ್ವೇ ಸ್ಟೇಷನ್, ಕೊರೊನಾ ಹೆಲ್ಪ್ ಕೌಂಟರ್ ತೆರೆಯುವ ಮೂಲಕ  ದೇಶದ ಗಮನ ಸೆಳೆದಿದೆ.

ಇದನ್ನೂ ಓದಿ: ಜೀವನಪ್ರೀತಿ ಮೂಡಿಸುವ ಟಾಪ್ 10 ಅಸಲಿ ಕೊರೊನಾ ಪಾಸಿಟಿವ್ ಕಥೆಗಳು- 2021

ತಿರುಚ್ಚಿ ರೈಲ್ವೇ ಸ್ಟೇಷನ್ ನಲ್ಲಿರುವ ಈ ಕೌಂಟರ್ 24 ಗಂಟೆಗಳ ಕಾಲ ಪ್ರಯಾಣಿಕರಿಗೆ ಕೊರೊನಾ ಸುರಕ್ಷತೆ ಸಂಬಂಧಿ ನೆರವು ನೀಡುತ್ತದೆ ಎನ್ನುವುದು ಒಂದು ವಿಶೇಷತೆ. ಜೊತೆಗೆ, ಈ ಕೌಂಟರಿನಲ್ಲಿ ಒಂದು ಬಾರಿ ಬಳಕೆಗೆ ಅರ್ಹವಾದ, ಯೂಸ್ ಅಂಡ್ ಥ್ರೋ ಬೆಡ್ ಶೀಟ್ ಅನ್ನು ಮಾರಾಟ ಮಾಡುತ್ತದೆ. 

ಇದನ್ನೂ ಓದಿ:  TNIE impact: ಹಲವರ ಜೀವನದಲ್ಲಿ ಸಕಾರಾತ್ಮಕ ಬದಲಾವಣೆ ತಂದ 2021ರ ವಿಶೇಷ ವರದಿಗಳು!

ರಾತ್ರಿ ರೈಲಿನಲ್ಲಿ ಪ್ರಯಾಣ ಮಾಡುವವರು ಚಳಿಯಿಂದ ತಮ್ಮನ್ನು ಕಾಪಾಡಿಕೊಳ್ಳಲು ಈ ಹೊದಿಕೆಗಳನ್ನು ಬಳಕೆ ಮಾಡಬಹುದಾಗಿದೆ. ಇದಲ್ಲದೆ ಆಸಕ್ತ ಪ್ರಯಾಣಿಕರು ಇಲ್ಲಿ ನೀಡಲಾಗುವ ಟ್ರಾವೆಲ್ ಕಿಟ್ ಅನ್ನು ಖರೀದಿಸಬಹುದಾಗಿದೆ.

ಇದನ್ನೂ ಓದಿ:  ವೀಲ್ ಚೇರ್ ಆಸರೆಯಲ್ಲಿದ್ದವರೂ ಬೀಚ್ ಸೌಂದರ್ಯ ಸವಿಯಬಹುದು: ಮರೀನಾ ಬೀಚಿನಲ್ಲಿ ವಿಕಲಾಂಗ ಸ್ನೇಹಿ ಮಾರ್ಗ ನಿರ್ಮಾಣ

ಆ ಕಿಟ್ ನಲ್ಲಿ ಎನ್95 ಮಾಸ್, ಕೈಗ್ಲವಸು, ಸ್ಯಾನಿಟೈಸರ್ ಮತ್ತು ಯೂಸ್ ಅಂಡ್ ಥ್ರೋ ಬೆಡ್ ಶೀಟ್ ಇರುತ್ತವೆ. ದೂರಪ್ರಯಾಣ ಮಾಡುವವರಿಗೆ ಈ ಕಿಟ್ ಸಹಕಾರಿ. ಈ ಕಿಟ್ ಬೆಲೆ 180 ರೂ.

ಇದನ್ನೂ ಓದಿ: ಕೋವಿಡ್ ನಂತರ ಶ್ವಾಸಕೋಶದ ಸಮಸ್ಯೆಗೆ ಒಳಗಾಗಿ 65 ದಿನ ‘ಇಸಿಎಂಒ’ನಲ್ಲಿದ್ದು ಸಾವನ್ನು ಗೆದ್ದು ಬಂದ 12 ವರ್ಷದ ಬಾಲಕ!



Read more