Karnataka news paper

2021 ರಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯದ 31 ಸಾವಿರ ಪ್ರಕರಣ, ಅರ್ಧದಷ್ಟು ಉತ್ತರ ಪ್ರದೇಶದಿಂದ ವರದಿ! 


The New Indian Express

ನವದೆಹಲಿ: ಕಳೆದ ವರ್ಷ ದೇಶಾದ್ಯಂತ 31 ಸಾವಿರ ಪ್ರಕರಣ ವರದಿಯಾಗಿದ್ದು, ಅರ್ಧದಷ್ಟು ಪ್ರಕರಣಗಳು ಉತ್ತರ ಪ್ರದೇಶದಿಂದ ವರದಿಯಾಗಿದೆ ಎಂದು ರಾಷ್ಟ್ರೀಯ ಮಹಿಳಾ ಆಯೋಗ (ಎನ್ ಸಿ ಡಬ್ಲ್ಯು) ಹೇಳಿದ್ದು ಈ ಅಂಕಿ-ಸಂಖ್ಯೆಗಳು 2014 ರಿಂದ ಅತ್ಯಂತ ಹೆಚ್ಚಳವಾಗಿದೆ.  

2020 ರಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯದ 23,722  ಪ್ರಕರಣಗಳು ವರದಿಯಾಗಿತ್ತು. ಇದಕ್ಕೆ ಹೋಲಿಕೆ ಮಾಡಿದಲ್ಲಿ 2021 ರಲ್ಲಿ ಶೇ.30 ರಷ್ಟು ಏರಿಕೆಯಾಗಿದೆ. 

30,864 ಪ್ರಕರಣಗಳ ಪೈಕಿ 11,013 ಪ್ರಕರಣಗಳು ಮಹಿಳೆಯರ ಮೇಲಿನ ಭಾವನಾತ್ಮಕ ದೌರ್ಜನ್ಯಕ್ಕೆ ಸಂಬಂಧಿಸಿದ್ದಾಗಿದ್ದು 6,633 ಪ್ರಕರಣಗಳು ಹಿಂಸಾಚಾರಕ್ಕೆ ಸಂಬಂಧಿಸಿದ್ದಾಗಿದ್ದರೆ 4,589 ಪ್ರಕರಣಗಳು ವರದಕ್ಷಿಣೆಗೆ ಸಂಬಂಧಪಟ್ಟಿದ್ದಾಗಿದೆ ಎಂದು ಎನ್ ಸಿ ಡಬ್ಲ್ಯು ಡೇಟಾ ಮೂಲಕ ತಿಳಿದುಬಂದಿದೆ. 

ಮಹಿಳೆಯರ ಮೇಲಿನ ಅತಿ ಹೆಚ್ಚಿನ ದೌರ್ಜನ್ಯ ಪ್ರಕರಣಗಳು ಉತ್ತರ ಪ್ರದೇಶದಲ್ಲಿ ವರದಿಯಾಗಿದ್ದು, ದೆಹಲಿ ನಂತರದ ಸ್ಥಾನದಲ್ಲಿದೆ. ಮಹಾರಾಷ್ಟ್ರ ಮೂರನೇ ಸ್ಥಾನದಲ್ಲಿದ್ದು ಹರ್ಯಾಣ, ಬಿಹಾರ ಅನುಕ್ರಮವಾಗಿ ನಾಲ್ಕು ಮತ್ತು 5 ನೇ ಸ್ಥಾನದಲ್ಲಿದೆ. 



Read more