ಹೈಲೈಟ್ಸ್:
- ಬ್ಯಾರೆಲ್‌ಗಳಲ್ಲಿ ತುಂಬಿದ 3,000 ಲೀಟರ್ ಆಲ್ಕೋಹಾಲ್ ನೀರಿಗೆ ಚೆಲ್ಲಿದ ಅಧಿಕಾರಿಗಳು
- ಕಾಬೂಲ್‌ನಲ್ಲಿ ದಾಳಿ ನಡೆಸಿ, ಸಂಗ್ರಹಿಸಿದ್ದ ಮದ್ಯ ವಶಪಡಿಸಿಕೊಂಡಿದ್ದ ಗುಪ್ತಚರ ಸಿಬ್ಬಂದಿ
- ಮುಸ್ಲಿಮರು ಆಲ್ಕೋಹಾಲ್ ಸೇವನೆ ಮತ್ತು ಮಾರಾಟ ಮಾಡದಿರುವುದನ್ನು ಪಾಲಿಸಬೇಕು
- ದೇಶದಲ್ಲಿ ಮದ್ಯ ಸಂಗ್ರಹ, ಮಾರಾಟವನ್ನು ಕಟ್ಟುನಿಟ್ಟಾಗಿ ನಿರ್ಬಂಧಿಸಿರುವ ತಾಲಿಬಾನ್
ಗುಪ್ತದರ ಪ್ರಧಾನ ನಿರ್ದೇಶನಾಲಯ (ಜಿಡಿಐ) ಬಿಡುಗಡೆ ಮಾಡಿರುವ ವಿಡಿಯೋ, ಬಾರೆಲ್‌ಗಳಲ್ಲಿ ಸಂಗ್ರಹಿಸಿದ ಮದ್ಯವನ್ನು ರಾಜಧಾನಿ ಕಾಬೂಲ್‌ನಲ್ಲಿ ದಾಳಿಯಲ್ಲಿ ವಶಪಡಿಸಿಕೊಂಡ ಬಳಿಕ ತನ್ನ ಸಿಬ್ಬಂದಿ ಕಾಲುವೆಗೆ ಸುರಿಯುವುದನ್ನು ತೋರಿಸಿದೆ.
ವಿದೇಶಿ ನೆರವು ಇಲ್ಲ, ಖಜಾನೆಯಲ್ಲಿ ಹಣವಿಲ್ಲ; ಆದರೂ ಬಜೆಟ್ ಮಂಡಿಸುವುದಾಗಿ ಘೋಷಿಸಿದ ತಾಲಿಬಾನ್!
‘ಮುಸ್ಲಿಮರು ಆಲ್ಕೋಹಾಲ್ ತಯಾರಿಸುವುದು ಮತ್ತು ಪೂರೈಸುವುದರಿಂದ ನಿಜಕ್ಕೂ ದೂರ ಇರಬೇಕು’ ಎಂದು ಟ್ವಿಟ್ಟರ್‌ನಲ್ಲಿ ಭಾನುವಾರ ವಿಡಿಯೋ ಹಂಚಿಕೊಂಡಿರುವ ಗುಪ್ತಚರ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ರಾಜಧಾನಿ ಕಾಬೂಲ್‌ನಲ್ಲಿ ಮದ್ಯ ಸಂಗ್ರಹದ ಮೇಲೆ ಯಾವಾಗ ದಾಳಿ ನಡೆಯಿತು ಹಾಗೂ ಅವುಗಳನ್ನು ಯಾವಾಗ ನಾಶಪಡಿಸಲಾಯಿತು ಎಂಬ ದಿನಾಂಕ ಸ್ಪಷ್ಟವಾಗಿಲ್ಲ. ಆದರೆ ಕಾರ್ಯಾಚರಣೆ ವೇಳೆ ಮೂವರು ಡೀಲರ್‌ಗಳನ್ನು ಬಂಧಿಸಲಾಗಿದೆ ಎಂದು ಸಂಸ್ಥೆ ಹೇಳಿಕೆ ತಿಳಿಸಿದೆ.
ಅಫ್ಘಾನಿಸ್ತಾನದಲ್ಲಿ ಪಶ್ಚಿಮ ದೇಶಗಳ ಬೆಂಬಲದೊಂದಿಗೆ ಸರ್ಕಾರ ನಡೆಯುತ್ತಿದ್ದ ಸಂದರ್ಭದಲ್ಲಿಯೂ ಆಲ್ಕೋಹಾಲ್ ಮಾರಾಟ ಮತ್ತು ಸೇವನೆಯನ್ನು ನಿಷೇಧಿಸಲಾಗಿತ್ತು. ಆದರೆ ಕಠಿಣ ಮುಸ್ಲಿಂ ಕಟ್ಟುಪಾಡುಗಳಿಗೆ ಹೆಸರಾಗಿರುವ ತಾಲಿಬಾನ್, ಅದನ್ನು ಸಂಪೂರ್ಣವಾಗಿ ಕಟ್ಟುನಿಟ್ಟಾಗಿ ನಿಷೇಧಿಸಿದೆ.
ಸತ್ತಿದ್ದಾನೆಂದು ಭಾವಿಸಿದ್ದ ತಾಲಿಬಾನ್ ಮುಖಂಡ ಪ್ರತ್ಯಕ್ಷ: ಮೊದಲ ಬಾರಿಗೆ ಕಾಣಿಸಿಕೊಂಡ ಅಖುಂಡ್‌ಜಾದಾ
ಆಗಸ್ಟ್ 15ರಂದು ತಾಲಿಬಾನ್ ಸಂಘಟನೆ ಅಫ್ಘಾನಿಸ್ತಾನ ಅಧಿಕಾರವನ್ನು ತನ್ನ ತೆಕ್ಕೆಗೆ ತೆಗೆದುಕೊಂಡ ಬಳಿಕ ಮಾದಕ ವ್ಯಸನಿಗಳು ಸೇರಿದಂತೆ ದೇಶಾದ್ಯಂತ ಅನೇಕ ದಾಳಿಗಳನ್ನು ನಡೆಸುತ್ತಿದೆ. ತಾಲಿಬಾನ್ ಆಡಳಿತವು ದೇಶದಲ್ಲಿ ಅನೇಕ ಕಠಿಣ ಕಾನೂನುಗಳನ್ನು ಜಾರಿಗೊಳಿಸಿದೆ. ಹಿಂದಿನ ಸರ್ಕಾರದ ಆಡಳಿತದಲ್ಲಿ ನೀಡಲಾಗಿದ್ದ ಮಹಿಳೆಯರ ಹಕ್ಕುಗಳನ್ನು ಕಸಿದುಕೊಂಡಿದ್ದು, ಹೆಣ್ಣುಮಕ್ಕಳ ಹಕ್ಕುಗಳನ್ನು ಸೀಮಿತಗೊಳಿಸುವ ಕೆಲವು ಅಂಶಗಳನ್ನು ಇತ್ತೀಚೆಗೆ ಬಿಡುಗಡೆ ಮಾಡಿತ್ತು.