Source : PTI
ಬ್ಯಾಂಕಾಕ್: ಮ್ಯಾನ್ಮಾರ್ ಭದ್ರತಾ ಪಡೆಗಳು ಗ್ರಾಮಸ್ಥರನ್ನು ಸುತ್ತುವರೆದು ಮಕ್ಕಳು ಸೇರಿದಂತೆ 11 ಮಂದಿಯನ್ನು ಕಟ್ಟಿಹಾಕಿ ಹತ್ಯೆ ಮಾಡಿದ್ದಾರೆ ಎಂದು ಪ್ರತ್ಯಕ್ಷದರ್ಶಿ ಮತ್ತು ಇತರ ವರದಿಗಳು ತಿಳಿಸಿವೆ.
ಪ್ರತೀಕಾರದ ದಾಳಿಯಲ್ಲಿ ನಾಗರಿಕರನ್ನು ಅತ್ಯಂತ ಕ್ರೂರವಾಗಿ ಜೀವಂತವಾಗಿ ಸುಡಲಾಯಿತು ಎಂದು ವಿರೋಧ ಪಕ್ಷದ ನಾಯಕರೊಬ್ಬರು ಹೇಳಿದ್ದಾರೆ.
ಇದನ್ನು ಓದಿ: ಮ್ಯಾನ್ಮಾರ್: ಆಂಗ್ ಸಾನ್ ಸೂಕಿಗೆ ಜೈಲು ಶಿಕ್ಷೆ; ನ್ಯಾಯಾಲಯದ ತೀರ್ಪಿನಿಂದ ಆಘಾತವಾಗಿದೆ ಎಂದ ಭಾರತ
ಮಿಲಿಟರಿ ಬೆಂಗಾವಲು ಪಡೆಯ ಮೇಲಿನ ದಾಳಿಗೆ ಪ್ರತೀಕಾರವಾಗಿ 11 ಜನರನ್ನು ಸಜೀವ ದಹನ ಮಾಡಲಾಗಿದ್ದು, ಸುಟ್ಟ ದೇಹಗಳಿರುವ ವೀಡಿಯೊವೊಂದು ವೈರಲ್ ಆಗಿದ್ದು, ಅದರಲ್ಲಿ ಗುಡಿಸಲಿನ ಅವಶೇಷಗಳ ನಡುವೆ ಮೃತದೇಹಗಳು ಬಿದ್ದಿವೆ.
ಭದ್ರತಾ ಪಡೆಯ ಆಕ್ರಮಣದ ಗ್ರಾಫಿಕ್ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವುದರಿಂದ ಮ್ಯಾನ್ಮಾರ್ ಒಳಗೆ ಮತ್ತು ಹೊರಗೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಇದು ಇತರ ಇತ್ತೀಚಿನ ದಾಳಿಗಳಂತೆಯೇ ಇದೆ ಎಂದು ಹ್ಯೂಮನ್ ರೈಟ್ಸ್ ವಾಚ್ ಹೇಳಿದೆ.