ಬೆಂಗಳೂರು: ರಾಜ್ಯದಲ್ಲಿ ಸತತ ಎರಡನೇ ದಿನವೂ ಕೋವಿಡ್ ಪ್ರಕರಣಗಳ ಸಂಖ್ಯೆ ಸಾವಿರ ದಾಟಿದೆ. ಭಾನುವಾರದಂದು 1,187 ಕೋವಿಡ್ ಪ್ರಕರಣಗಳು ವರದಿಯಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಈ ಪೈಕಿ ಬೆಂಗಳೂರು ನಗರದಲ್ಲೇ ಮಾತ್ರ 923 ಪ್ರಕರಣಗಳು ದೃಢಪಟ್ಟಿವೆ.
ಇದನ್ನೂ ಓದಿ: ಕೋವಿಡ್ ನಿಯಂತ್ರಣಕ್ಕೆ ರಾಜ್ಯದಲ್ಲಿ ಮತ್ತಷ್ಟು ಕಠಿಣ ನಿಯಮಗಳು
ಹೊಸವರ್ಷದಂದು (ಜ.1 ಶನಿವಾರ) ರಾಜ್ಯದಲ್ಲಿ 1,033 ಕೋವಿಡ್ ಪ್ರಕರಣಗಳು ವರದಿಯಾಗಿದ್ದವು.
ಸಕ್ರಿಯ ಪ್ರಕರಣಗಳ ಸಂಖ್ಯೆಯೂ 10 ಸಾವಿರದ ಗಡಿ ದಾಟಿದೆ. ರಾಜ್ಯದಲ್ಲಿ ಈಗ 10,292 ಸಕ್ರಿಯ ಪ್ರಕರಣಗಳಿವೆ.
ಇಂದಿನ 02/01/2022 ಸಂಪೂರ್ಣ ಪತ್ರಿಕಾ ಪ್ರಕಟಣೆಗಾಗಿ ಇಲ್ಲಿ ನೀಡಲಾಗಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ.https://t.co/wohGQ6qy30 @CMofKarnataka @BSBommai @mla_sudhakar @Comm_dhfwka @BBMPCOMM @mysurucitycorp @mangalurucorp @DDChandanaNews @PIBBengaluru @KarnatakaVarthe pic.twitter.com/JgZcW5twY9
— K’taka Health Dept (@DHFWKA) January 2, 2022
ರಾಜ್ಯದಲ್ಲಿ ವರದಿಯಾಗಿರುವ ಒಟ್ಟು ಕೋವಿಡ್ ಪ್ರಕರಣಗಳ ಸಂಖ್ಯೆ 30.09 ಲಕ್ಷ ದಾಟಿದೆ. ಭಾನುವಾರದಂದು ಆರು ಮಂದಿ ಸೇರಿದಂತೆ ಕೋವಿಡ್ ಸೋಂಕಿನಿಂದ ಇದುವರೆಗೆ ಒಟ್ಟು 38,346 ಮಂದಿ ಮೃತಪಟ್ಟಿದ್ದಾರೆ.
275 ಮಂದಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, ಇದುವರೆಗೆ 29,60,890 ಮಂದಿ ಗುಣಮುಖರಾಗಿದ್ದಾರೆ.
ಸೋಂಕು ದೃಢ ಪ್ರಮಾಣ ಶೇ 1.08ರಷ್ಟಿದ್ದು, ಮೃತಪಟ್ಟವರ ಶೇಕಡಾವಾರು ಪ್ರಮಾಣ 0.50ರಷ್ಟಿದೆ.
ಇನ್ನುಳಿದಂತೆ ದಕ್ಷಿಣ ಕನ್ನಡದಲ್ಲಿ 63, ಉಡುಪಿಯಲ್ಲಿ 54, ಮೈಸೂರಿನಲ್ಲಿ 20, ಧಾರವಾಡ 15, ಬೆಳಗಾವಿ ಹಾಗೂ ಕೊಡಗಿನಲ್ಲಿ ತಲಾ 12, ಮಂಡ್ಯದಲ್ಲಿ 10 ಪ್ರಕರಣಗಳು ವರದಿಯಾಗಿವೆ.