Karnataka news paper

ಕರುನಾಡಲ್ಲಿ ಕೊರೊನಾ ಸ್ಫೋಟ..! ಭಾನುವಾರ ಒಂದೇ ದಿನ 1,187 ಹೊಸ ಕೇಸ್..!


ಹೈಲೈಟ್ಸ್‌:

  • ರಾಜ್ಯದಲ್ಲಿ ಈವರೆಗೆ ದೃಢಪಟ್ಟ ಕೊರೊನಾ ವೈರಸ್ ಸೋಂಕಿತರ ಒಟ್ಟು ಸಂಖ್ಯೆ 30,09,557
  • ಭಾನುವಾರ ಕೂಡಾ 275 ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್
  • ರಾಜ್ಯದಲ್ಲಿ ಇದುವರೆಗೂ ಗುಣಮುಖರಾಗಿ ಡಿಸ್ಚಾರ್ಜ್ ಆದವರ ಒಟ್ಟು ಸಂಖ್ಯೆ 29,60,890

ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಭಾನುವಾರ ಮತ್ತೆ ಕೊರೊನಾ ಸ್ಫೋಟವಾಗಿದೆ. ರಾಜ್ಯಾದ್ಯಂತ 1,187 ಕೊರೊನಾ ವೈರಸ್ ಸೋಂಕು ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಕರ್ನಾಟಕ ರಾಜ್ಯದಲ್ಲಿ ಈವರೆಗೆ ದೃಢಪಟ್ಟ ಕೊರೊನಾ ವೈರಸ್ ಸೋಂಕಿತರ ಒಟ್ಟು ಸಂಖ್ಯೆ 30,09,557ಕ್ಕೆ ಏರಿಕೆ ಕಂಡಿದೆ.

ಭಾನುವಾರ ಕೂಡಾ ಗುಣಮುಖರಾಗಿ 275 ಸೋಂಕಿತರು ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯಾದ್ಯಂತ ಇದುವರೆಗೂ ಗುಣಮುಖರಾಗಿ ಡಿಸ್ಚಾರ್ಜ್ ಆದವರ ಒಟ್ಟು ಸಂಖ್ಯೆ 29,60,890ಕ್ಕೆ ಏರಿಕೆ ಕಂಡಿದೆ. ರಾಜ್ಯದಲ್ಲಿ ಸದ್ಯ ಕೊರೊನಾ ವೈರಸ್ ಸೋಂಕಿನ ಸಕ್ರಿಯ ಪ್ರಕರಣಗಳ ಸಂಖ್ಯೆ 10,292ಕ್ಕೆ ಏರಿಕೆಯಾಗಿದೆ.

ಕರ್ನಾಟಕದಲ್ಲಿ ಒಂದೇ ದಿನ 23 ಓಮಿಕ್ರಾನ್ ಕೇಸ್‌ ದೃಢ..! ಹೊಸ ವರ್ಷದ ಸಂಭ್ರಮದ ನಡುವೆ ಇರಲಿ ಎಚ್ಚರ..!
ಇನ್ನು ಚಿಕಿತ್ಸೆ ಫಲಿಸದೆ ಭಾನುವಾರ ಕೂಡಾ 06 ಕೊರೊನಾ ಸೋಂಕಿತರು ಸಾವನ್ನಪ್ಪಿದ್ದಾರೆ. ರಾಜ್ಯದಾದ್ಯಂತ ಇಲ್ಲಿಯವರೆಗೆ ಸಾವನ್ನಪ್ಪಿದವರ ಒಟ್ಟು ಸಂಖ್ಯೆ 38,346ಕ್ಕೆ ಏರಿಕೆ ಕಂಡಿದೆ. ಇನ್ನು ರಾಜ್ಯದಲ್ಲಿ ಈವರೆಗೆ ದೃಢಪಟ್ಟ ಓಮಿಕ್ರಾನ್ ಪ್ರಕರಣಗಳ ಸಂಖ್ಯೆ 66ಕ್ಕೆ ಏರಿಕೆ ಕಂಡಿದೆ.

ಜಿಲ್ಲಾವಾರು ಲೆಕ್ಕಾಚಾರ: ರಾಜಧಾನಿ ಬೆಂಗಳೂರು ನಗರ ಜಿಲ್ಲೆಯಲ್ಲಿ ಭಾನುವಾರ ಒಂದೇ ದಿನ 923 ಕೊರೊನಾ ಸೋಂಕು ಪ್ರಕರಣಗಳು ದೃಢಪಟ್ಟಿವೆ. ದಕ್ಷಿಣ ಕನ್ನಡ 63, ಉಡುಪಿ 54, ಮೈಸೂರು 20, ಧಾರವಾಡ 15, ಬೆಳಗಾವಿ 12, ಕೊಡಗು 12, ತುಮಕೂರು 12 ಹಾಗೂ ಮಂಡ್ಯದಲ್ಲಿ 10 ಪ್ರಕರಣಗಳು ದೃಢಪಟ್ಟಿವೆ.

ಓಮಿಕ್ರಾನ್ ಭೀತಿ: ಬೆಳಗಾವಿ ಗಡಿ ಪ್ರದೇಶದ ಚೆಕ್‌ಪೋಸ್ಟ್‌ಗಳಲ್ಲಿ ಬಿಗಿ ಕ್ರಮ: ಸಿಎಂ ಬಸವರಾಜ ಬೊಮ್ಮಾಯಿ
ಇನ್ನುಳಿದಂತೆ ಬಳ್ಳಾರಿ 09, ಬೆಂಗಳೂರು ಗ್ರಾಮಾಂತರ 06, ಚಾಮರಾಜನಗರ 02, ಚಿಕ್ಕಮಗಳೂರು 04, ಚಿತ್ರದುರ್ಗ 08, ದಾವಣಗೆರೆ 02, ಹಾಸನ 06, ಕಲಬುರಗಿ 09, ಕೋಲಾರ 04, ರಾಮನಗರ 03, ಶಿವಮೊಗ್ಗ 02, ಉತ್ತರ ಕನ್ನಡ 08 ಹಾಗೂ ವಿಜಯಪುರದಲ್ಲಿ 03 ಪ್ರಕರಣ ಪತ್ತೆಯಾಗಿವೆ.

8 ಜಿಲ್ಲೆಗಳಲ್ಲಿ ಶೂನ್ಯ ಸಾಧನೆ..!: ಬಾಗಲಕೋಟೆ, ಬೀದರ್, ಚಿಕ್ಕಬಳ್ಳಾಪುರ, ಗದಗ, ಹಾವೇರಿ, ಕೊಪ್ಪಳ, ರಾಯಚೂರು ಹಾಗೂ
ಯಾದಗಿರಿಯಲ್ಲಿ ಭಾನುವಾರ ಯಾವುದೇ ಕೊರೊನಾ ಪ್ರಕರಣ ಪತ್ತೆಯಾಗಿಲ್ಲ.

ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಓಮಿಕ್ರಾನ್‌ ಹೆಚ್ಚಳ! 3ನೇ ಅಲೆ ಚಿಕಿತ್ಸೆಗೆ ಅಲರ್ಟ್‌!



Read more