PTI
ಇಂದೋರ್: ಮಧ್ಯಪ್ರದೇಶದ ಇಂದೋರ್ ನ ವ್ಯಕ್ತಿಯೊಬ್ಬರು ನಟ ವಿಕಿ ಕೌಶಲ್ ಸಿನಿಮಾ ವಿರುದ್ಧ ದೂರು ದಾಖಲಿಸಿದ್ದಾರೆ.
ಕಾರಣ ಏನಪ್ಪಾ ಅಂತ ನೋಡಿದರೆ ಬಲು ವಿಲಕ್ಷಣವಾಗಿದೆ. ಸಿನಿಮಾದ ದೃಶ್ಯವೊಂದರಲ್ಲಿ ತಮ್ಮ ಮೋಟರ್ ಸೈಕಲ್ ನ ನಂಬರ್ ಪ್ಲೇಟ್ ನ್ನು ಅಕ್ರಮವಾಗಿ ಬಳಕೆ ಮಾಡಲಾಗಿದೆ ಎಂಬುದೇ ವ್ಯಕ್ತಿಯ ಆಕ್ಷೇಪ
“ಸಾರಾ ಅಲಿ ಖಾನ್ ಅವರೊಂದಿಗಿನ ನಟನೆಯ ಸಿನಿಮಾದಲ್ಲಿ ವಿಕಿ ಕೌಶಲ್ ಚಾಲನೆ ಮಾಡುತ್ತಿದ್ದ ಸಾರಾ ಅಲಿ ಖಾನ್ ಅವರು ಹಿಂಬದಿ ಸೀಟ್ ನಲ್ಲಿ ಕುಳಿತಿದ್ದ ದ್ವಿಚಕ್ರವಾಹನದಲ್ಲಿ ಬಳಕೆ ಮಾಡಿದ್ದ ನಂಬರ್ ಪ್ಲೇಟ್ ತಮ್ಮ ವಾಹನದ್ದಾಗಿದೆ. ಈ ಬಗ್ಗೆ ಸಿನಿಮಾ ತಂಡಕ್ಕೆ ಮಾಹಿತಿ ಇದೆಯೋ ಇಲ್ಲವೋ ತಿಳಿದಿಲ್ಲ. ಆದರೆ ಹೀಗೆ ಮಾಡಿರುವುದು ಅಕ್ರಮ. ಅವರು ನನ್ನ ಅನುಮತಿ ಇಲ್ಲದೇ ಆ ನಂಬರ್ ಪ್ಲೇಟ್ ನ್ನು ಬಳಕೆ ಮಾಡುವಂತಿಲ್ಲ. ಈ ಬಗ್ಗೆ ದೂರು ನೀದಿದ್ದೇನೆ, ಪೊಲೀಸರು ಕ್ರಮ ಕೈಗೊಳ್ಳಬೇಕು” ಎಂದು ಜೈ ಸಿಂಗ್ ಯಾದವ್ ಆಗ್ರಹಿಸಿದ್ದಾರೆ
ಈ ದೂರಿನ ಬಗ್ಗೆ ಮಾತನಾಡಿರುವ ಇಂದೋರ್ ನ ಬಂಗಾಂಗ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ರಾಜೇಂದ್ರ ಸೋನಿ, ನಂಬರ್ ಪ್ಲೇಟ್ ನ್ನು ಅಕ್ರಮವಾಗಿ ಬಳಸಿದ್ದರೇ? ಎಂಬುದನ್ನು ಗಮನಿಸುತ್ತೇವೆ. ಒಂದು ವೇಳೆ ಅಕ್ರಮವಾಗಿ ಬಳಸಿದ್ದರೆ ಮೋಟಾರ್ ವಾಹನಗಳ ಕಾಯ್ದೆಯಡಿ ಕ್ರಮ ಕೈಗೊಳ್ಳುತ್ತೇವೆ ಸಿನಿಮಾ ತಂಡ ಇಂದೋರ್ ನಲ್ಲಿದ್ದರೆ ತನಿಖೆ ನಡೆಸುತ್ತೇವೆ ಎಂದು ಹೇಳಿದ್ದಾರೆ.