PTI
ಕೋಲ್ಕತ್ತಾ: ಬಿಸಿಸಿಐ ಅಧ್ಯಕ್ಷ ಗಂಗೂಲಿಯನ್ನು ಕೋವಿಡ್ ವೈರಸ್ ಬಿಟ್ಟೂ ಬಿಡದಂತೆ ಕಾಡುತ್ತಿದ್ದು, ಇದೀಗ ಅವರು ಡೆಲ್ಟಾ ಪ್ಲಸ್ ಕೋವಿಡ್ ಸೋಂಕಿಗೆ ತುತ್ತಾಗಿದ್ದಾರೆ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ.
ಈಗ್ಗೆ ನಾಲ್ಕು ದಿನಗಳಿಂದ ಆಸ್ಪತ್ರೆಯಲ್ಲಿದ್ದ ಗಂಗೂಲಿ ಸ್ವಲ್ಪ ಚೇತರಿಕೆಯಿಂದಾಗಿ ನಿನ್ನೆಯಷ್ಟೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರು. ಇತ್ತೀಚೆಗೆ ನಡೆಸಿದ ಪರೀಕ್ಷೆಯಲ್ಲಿ ಗಂಗೂಲಿಗೆ ಮತ್ತೆ ಡೆಲ್ಟಾ ಪ್ಲಸ್ ವೇರಿಯೆಂಟ್ ಸೊಂಕಿಗೊಳಗಾಗಿದ್ದಾರೆ. ಇದಕ್ಕೆ ಸೂಕ್ತ ಚಿಕಿತ್ಸೆಯನ್ನು ನೀಡುತ್ತಿದ್ದೇವೆ ಎಂದು ವೈದ್ಯರು ತಿಳಿಸಿದ್ದಾರೆ.
RTPCR ಟೆಸ್ಟ್ ನಲ್ಲಿ ಕೊರೊನಾ ಪಾಸಿಟಿವ್ ಧೃಡಪಟ್ಟ ನಂತರ ಕಳೆದ ಸೋಮವಾರ ರಾತ್ರಿ ಗಂಗೂಲಿ ವುಡ್ ಲ್ಯಾಂಡ್ ದಾಖಲಾಗಿದ್ದರು. ನಂತರ ವೈದ್ಯರು ಮೊನೊಕ್ಲೊನಲ್ ಆ್ಯಂಟಿಬಾಡಿ ಕಾಕ್ ಟೇಲ್ ಥೆರಪಿ ಚಿಕಿತ್ಸೆ ನೀಡಿದ ಮೇಲೆ ಗುಣಮುಖರಾಗಿದ್ದರು. ನಾಲ್ಕು ದಿನಗಳ ಚಿಕಿತ್ಸೆಯ ನಂತರ ಶುಕ್ರವಾರ ಆಸ್ಪತ್ರೆಯಲ್ಲಿ ಮತ್ತೊಮ್ಮೆ ಪರೀಕ್ಷೆ ನಡೆಸಿ ನೆಗೆಟಿವ್ ವರದಿ ಬಳಿಕ ಮನೆಗೆ ಕಳಿಸಲಾಗಿತ್ತು. ಆದರೆ. ಪೂರ್ತಿ ಗುಣಮುಖರಾಗುವವರೆಗೂ ಐಸೋಲೇಷನ್ ನಲ್ಲಿ ಇರಬೇಕೆಂದು ವೈದ್ಯರು ಸಲಹೆ ನೀಡಿದ್ದಾರೆ.
ಇತ್ತೀಚೆಗೆ ಮತ್ತೊಮ್ಮೆ ಪರೀಕ್ಷೆ ನಡೆಸಿದಾಗ ಡೆಲ್ಟಾ ಪ್ಲಸ್ ವೇರಿಯೆಂಟ್ ಸೋಂಕಿರುವುದು ದೃಢವಾಗಿದ್ದು, ಇನ್ಫೆಕ್ಷನ್ ತೀವ್ರತೆ ಭಯ ಪಡಬೇಕಾದ ರೀತಿಯಲ್ಲಿಲ್ಲದ ಕಾರಣ ಮನೆಯಲ್ಲೆ ಚಿಕಿತ್ಸೆಯನ್ನ ಮುಂದುವರೆಸಲಾಗುವುದು ಎಂದು ವೈದ್ಯರು ತಿಳಿಸಿದ್ದಾರೆ.