ಹೈಲೈಟ್ಸ್:
- ನಟ ವಿಕ್ಕಿ ಕೌಶಲ್ ವಿರುದ್ಧ ದಾಖಲಾಯ್ತು ದೂರು
- ಇಂದೋರ್‌ನ ಗಲ್ಲಿ ಗಲ್ಲಿಗಳಲ್ಲಿ ನಟಿ ಸಾರಾ ಅಲಿ ಖಾನ್ ಜೊತೆ ಸುತ್ತಾಡಿದ್ದ ವಿಕ್ಕಿ
- ವಿಕ್ಕಿ ವಿರುದ್ಧ ದೂರು ದಾಖಲಾಗಲು ಕಾರಣವಾಯ್ತೇ ಈ ಸುತ್ತಾಟ?
ಇದು ಶೂಟಿಂಗ್‌ನಲ್ಲಿ ಆದ ಮಿಸ್ಟೇಕ್
ಈಚೆಗೆ ವಿಕ್ಕಿ ಕೌಶಲ್ ಮತ್ತು ಸಾರಾ ಅಲಿ ಖಾನ್ ಅವರು ಇಂದೋರ್‌ನ ಬೀದಿ ಬೀದಿಗಳಲ್ಲಿ ಬೈಕನಲ್ಲಿ ಸುತ್ತಾಡುತ್ತಿರುವ ಫೋಟೋಗಳು ವೈರಲ್ ಆಗಿದ್ದವು. ದೂರು ದಾಖಲಾಗಲು ಅದೇ ಫೋಟೋಗಳೇ ಈಗ ಕಾರಣವಾಗಿವೆ. ಅಷ್ಟಕ್ಕೂ ಆಗಿದ್ದೇನೆಂದರೆ, ಶೂಟಿಂಗ್‌ಗಾಗಿ ವಿಕ್ಕಿ ರೈಡ್ ಮಾಡುತ್ತಿರುವ ಬೈಕ್‌ಗೆ ಒಂದು ನಂಬರ್ ಪ್ಲೇಟ್ ಜೋಡಿಸಲಾಗಿದೆ. ಅದರಲ್ಲಿರುವ ನೋಂದಣಿ ಸಂಖ್ಯೆಯೇ ಇಷ್ಟಕ್ಕೆಲ್ಲ ಕಾರಣವಾಗಿದೆ!
ಇಂದೋರ್ ನಿವಾಸಿಯೊಬ್ಬರು ಬಳಸುತ್ತಿರುವ ದ್ವಿಚಕ್ರ ವಾಹನದ ನಂಬರ್ ಮತ್ತು ಈ ಸಿನಿಮಾದಲ್ಲಿ ಬಳಸಿರುವ ದ್ವಿಚಕ್ರ ವಾಹನದ ನಂಬರ್ ಒಂದೇ ಆಗಿದೆ. ಹಾಗಾಗಿ, ತಮ್ಮ ವಾಹನದ ನೋಂದಣಿ ಬಳಸಿದ್ದಕ್ಕಾಗಿ ಇಂದೋರ್ ನಿವಾಸಿ ಜೈ ಸಿಂಗ್ ಯಾದವ್ ದೂರು ನೀಡಿದ್ದಾರೆ. ‘ಇದರ ಬಗ್ಗೆ ಚಿತ್ರತಂಡಕ್ಕೆ ಅರಿವು ಇದೆಯೋ ಇಲ್ಲವೋ ನನಗೆ ಗೊತ್ತಿಲ್ಲ. ಆದರೆ, ಇದು ಕಾನೂನುಬಾಹಿರ. ನನ್ನ ಅನುಮತಿ ಇಲ್ಲದೇ ಅವರು ನನ್ನ ವಾಹನದ ನೋಂದಣಿ ಸಂಖ್ಯೆಯನ್ನು ಬಳಕೆ ಮಾಡುವಂತಿಲ್ಲ. ಠಾಣೆಗೆ ನಾನು ಹೋಗಿ ಈ ಬಗ್ಗೆ ದೂರು ನೀಡಿದ್ದೇನೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲೇಬೇಕು’ ಎಂದು ಅವರು ಹೇಳಿದ್ದಾರೆ.
ವಿಕ್ಕಿ ಕೌಶಲ್-ಕತ್ರಿನಾ ಕೈಫ್ ಮದುವೆ ನಡೆಯುತ್ತಿಲ್ವಾ? ಸಂಬಂಧಿ ಹೇಳಿದ್ದೇನು?
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ರಾಜೇಂದ್ರ ಸೋನಿ, ‘ನಾನು ದೂರನ್ನು ಪಡೆದುಕೊಂಡಿದ್ದೇವೆ. ನಂಬರ್ ಪ್ಲೇಟ್ ದುರುಪಯೋಗ ಆಗಿದೆಯೇ ಎಂಬುದನ್ನು ಗಮನಿಸುತ್ತೇವೆ. ಮೋಟಾರು ವಾಹನ ಕಾಯ್ದೆಯಡಿ ಏನು ಕ್ರಮ ತೆಗೆದುಕೊಳ್ಳಲು ಸಾಧ್ಯವೋ ನಾವು ಅದನ್ನು ಖಂಡಿತ ತೆಗೆದುಕೊಳ್ಳುತ್ತೇವೆ. ಸಿನಿಮಾ ತಂಡ ಇಂದೋರ್‌ನಲ್ಲೇ ಇದ್ದರೆ, ನಾವು ಅವರನ್ನು ತನಿಖೆಗೆ ಒಳಪಡಿಸುತ್ತೇವೆ’ ಎಂದಿದ್ದಾರೆ.
ಮದುವೆಯ ಬಳಿಕ ಒಟ್ಟಿಗೆ ತೆರೆ ಹಂಚಿಕೊಳ್ಳಲಿದ್ದಾರಾ ವಿಕ್ಕಿ ಕೌಶಲ್, ಕತ್ರಿನಾ ಕೈಫ್..?
ಪತ್ನಿ ವಿಕ್ಕಿ ಕೌಶಲ್ ಜೊತೆಗೆ ನ್ಯೂ ಇಯರ್ ಸೆಲೆಬ್ರೇಷನ್ ಮಾಡುವ ಸಲುವಾಗಿ ಸದ್ಯ ಇಂದೋರ್‌ನಿಂದ ಮುಂಬೈಗೆ ವಿಕ್ಕಿ ಕೌಶಲ್ ವಾಪಸಾಗಿದ್ದಾರೆ. ಆನಂತರ ಪುನಃ ಅವರು ಇಂದೋರ್‌ಗೆ ಹೋಗಿ ಶೂಟಿಂಗ್‌ನಲ್ಲಿ ಭಾಗಿಯಾಗಲಿದ್ದಾರೆ. ‘ಲುಖಾ ಚುಪ್ಪಿ’, ‘ಮಿಮಿ’ ಥರದ ಹಿಟ್ ಸಿನಿಮಾಗಳನ್ನು ಮಾಡಿರುವ ಲಕ್ಷ್ಮಣ್ ಉತೇಕರ್ ನಿರ್ದೇಶನದ ಸಿನಿಮಾ ಇದಾಗಿದ್ದು, ನಾಯಕಿಯಾಗಿ ಸಾರಾ ಅಲಿ ಖಾನ್ ನಟಿಸುತ್ತಿದ್ದಾರೆ.
ನವ ದಂಪತಿ ವಿಕ್ಕಿ-ಕತ್ರಿನಾಗೆ ಸಲ್ಮಾನ್, ರಣ್‌ಬೀರ್, ಹೃತಿಕ್, ಆಲಿಯಾ ಭಟ್ ಕೊಟ್ಟ ದುಬಾರಿ ಉಡುಗೊರೆಗಳಿವು…