Karnataka news paper

ಈ ವರ್ಷ ಶೇ. 120 ಇನ್‌ಕ್ರಿಮೆಂಟ್‌..! ಪ್ರತಿಭಾನ್ವಿತ ನೌಕರರನ್ನು ಉಳಿಸಿಕೊಳ್ಳಲು ಟೆಕ್ ಕಂಪನಿಗಳ ಆಫರ್..!


ಹೈಲೈಟ್ಸ್‌:

  • ಫುಲ್‌ ಸ್ಟಾಕ್‌ ಎಂಜಿನಿಯರ್‌ಗಳು, ಡೇಟಾ ವಿಜ್ಞಾನಿಗಳು, ಡೇಟಾ ಎಂಜಿನಿಯರ್‌ಗಳಿಗೆ ಈ ವರ್ಷ ಕೈ ತುಂಬಾ ವೇತನ
  • ಭರ್ಜರಿ ವೇತನಕ್ಕೆ ಚೌಕಾಶಿ ಮಾಡುವ ಅಧಿಕಾರ ಇದೀಗ ಮತ್ತೆ ಅಭ್ಯರ್ಥಿಗಳ ಕೈಗೆ..!
  • ಬಹು ಬೇಡಿಕೆಯ ಡಿಜಿಟಲ್‌ ಕೌಶಲಗಳನ್ನು ಹೊಂದಿರುವ ಪ್ರತಿಭಾನ್ವಿತರಿಗೆ ಈಗ ಎಲ್ಲೆಲ್ಲೂ ಬೇಡಿಕೆ

ಹೊಸ ದಿಲ್ಲಿ: ದೇಶದ ಟೆಕ್‌ ಕಂಪನಿಗಳು ಪ್ರತಿಭಾನ್ವಿತ ಉದ್ಯೋಗಿಗಳನ್ನು ಉಳಿಸಿಕೊಳ್ಳಲು ಮತ್ತು ಸೆಳೆಯಲು ಪ್ರಸಕ್ತ ವರ್ಷ ಭರ್ಜರಿ ವೇತನ ನೀಡಲಿವೆ ಎಂದು ಉದ್ಯೋಗ ನೇಮಕ ಕನ್ಸಲ್ಟೆನ್ಸಿ ಸಂಸ್ಥೆ ‘ಎಕ್ಸ್‌ಪಿನೆನೊ’ ತಿಳಿಸಿದೆ. ಈ ವರ್ಷ ಉದ್ಯೋಗಿಗಳಿಗೆ ಶೇ.60 – 120ಕ್ಕೂ ಹೆಚ್ಚು ಇನ್‌ಕ್ರಿಮೆಂಟ್‌ ದೊರಕಲಿದೆ. ಹೊಸ ಉದ್ಯೋಗಿಗಳಿಗೆ ಭರ್ಜರಿ ವೇತನದ ಆಫರ್‌ ದೊರಕಲಿದೆ.

ವಿಶೇಷವಾಗಿ, ಫುಲ್‌ ಸ್ಟಾಕ್‌ ಎಂಜಿನಿಯರ್‌ಗಳು, ಡೇಟಾ ವಿಜ್ಞಾನಿಗಳು, ಡೇಟಾ ಎಂಜಿನಿಯರ್‌ಗಳಿಗೆ ಈ ವರ್ಷ ಕೈ ತುಂಬಾ ವೇತನ ಗ್ಯಾರಂಟಿ ಎಂದು ಎಕ್ಸ್‌ಪಿನೆನೊ ಹೇಳಿದೆ. ‘ಭರ್ಜರಿ ವೇತನಕ್ಕೆ ಚೌಕಾಶಿ ಮಾಡುವ ಅಧಿಕಾರ ಇದೀಗ ಮತ್ತೆ ಅಭ್ಯರ್ಥಿಗಳಿಗೆ ಬಂದಿದೆ. ಬಹು ಬೇಡಿಕೆಯ ಡಿಜಿಟಲ್‌ ಕೌಶಲಗಳನ್ನು ಹೊಂದಿರುವ ಪ್ರತಿಭಾನ್ವಿತರಿಗೆ ಈಗ ಎಲ್ಲೆಲ್ಲೂ ಬೇಡಿಕೆಯಿದೆ’ ಎಂದು ಎಕ್ಸ್‌ಪಿನೆನೊದ ಸಹ ಸ್ಥಾಪಕರಾದ ಕಮಲ್‌ ಕಾರಂತ್‌ ಹೇಳಿದ್ದಾರೆ.

‘ಡಿಜಿಟಲ್‌ ಪ್ರತಿಭಾನ್ವಿತರಿಗೆ ಬೇಡಿಕೆ ಹೆಚ್ಚಲು ಹಲವು ಕಾರಣಗಳಿವೆ. ಜಗತ್ತು ಈಗ ಮೊದಲಿಗಿಂತ ಹೆಚ್ಚು ಡಿಜಿಟಲ್‌ ತಂತ್ರಜ್ಞಾನಗಳನ್ನು ಅವಲಂಬಿಸಿದೆ. ದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಈ ವರ್ಷ ಜಿಸಿಸಿಎಸ್‌ಗಳು (ಗ್ಲೋಬಲ್‌ ಕೆಪಾಬಿಲಿಟಿ ಕೇಂದ್ರಗಳು) ತಮ್ಮ ಕೇಂದ್ರಗಳನ್ನು ತೆರೆಯಲಿವೆ. ಅತ್ಯಧಿಕ ಸ್ಟಾರ್ಟ್‌ ಅಪ್‌ಗಳಿಗೆ ಫಂಡ್‌ಗಳು ದೊರಕುತ್ತಿವೆ. ಐಟಿ ಸೇವಾ ಕಂಪನಿಗಳಿಗೆ ಭರ್ಜರಿ ಡೀಲ್‌ಗಳು ದೊರಕುತ್ತಿವೆ. ಇವೆಲ್ಲ ಕಾರಣಗಳಿಂದ ಈ ವರ್ಷ ಡಿಜಿಟಲ್‌ ಪ್ರತಿಭಾನ್ವಿತರಿಗೆ ಬೇಡಿಕೆ ಹೆಚ್ಚಿರಲಿದೆ’ ಎಂದು ಅವರು ಹೇಳಿದ್ದಾರೆ.

ಬೈಕ್, ಐಫೋನ್, ಬೋನಸ್!: ಅನುಭವಿ ಐಟಿ ಉದ್ಯೋಗಿಗಳಿಗೆ ಭರ್ಜರಿ ಆಫರ್, ಉದ್ಯೋಗಾವಕಾಶಗಳ ಸುರಿಮಳೆ
ಕೃತಕ ಬುದ್ಧಿಮತ್ತೆ, ಕ್ಲೌಡ್‌, ಸೆಕ್ಯುರಿಟಿ ಮತ್ತು ಎಂಜಿನಿಯರಿಂಗ್‌ ಕ್ಷೇತ್ರಗಳಿಗೆ ಹೂಡಿಕೆ ಹೆಚ್ಚುತ್ತಿದ್ದು, 2022ರಲ್ಲಿ ತಂತ್ರಜ್ಞಾನ ವಿಭಾಗದ ಪ್ರಮುಖ ಚಾಲಕ ಶಕ್ತಿಗಳಾಗಳಿವೆ. ‘ಡಿಜಿಟಲ್‌ ಆಧರಿತ ಬೃಹತ್‌ ಡೀಲ್‌ಗಳು ದೊರಕುತ್ತಿರುವುದು, ಹೈಬ್ರಿಡ್‌ ಕ್ಲೌಡ್‌ ಅಳವಡಿಕೆ, ಫ್ರಂಟ್‌ ಎಂಡ್‌ ಮತ್ತು ಬ್ಯಾಕೆಂಡ್‌ಗಳಿಗೆ ಆಟೋಮೇಷನ್‌ ಅಳವಡಿಕೆ, ತಂತ್ರಜ್ಞಾನ ಆಧರಿತ ಸ್ವತ್ತುಗಳಿಗೆ ಹೂಡಿಕೆ ಹೆಚ್ಚಾಗಿರುವುದು ಈ ವರ್ಷದ ಪ್ರಮುಖ ಟ್ರೆಂಡ್‌ ಆಗಿದೆ. ಇದರೊಂದಿಗೆ ಮೆಟಾವರ್ಸ್‌, ಡೇಟಾ ಫ್ಯಾಬ್ರಿಕ್‌, ಸೈಬರ್‌ ಸೆಕ್ಯುರಿಟಿ, ಜನರ ಪ್ರೈವೆಸಿ ಕಾಪಾಡುವಂತಹ ತಂತ್ರಜ್ಞಾನಗಳು, ಕ್ಲೌಡ್‌ ಆಧರಿತ ವೇದಿಕೆಗಳು ಮತ್ತು ಹೈಪರ್‌ ಆಟೋಮೇಷನ್‌ ಈ ವರ್ಷದ ಪ್ರಮುಖ ಬೆಳವಣಿಗೆಯಾಗಲಿವೆ’ ಎಂದು ಐಟಿ ನೇಮಕಾತಿ ಸಂಸ್ಥೆ ಕ್ವಿಸ್‌ನ ಸಿಇಒ ವಿಜಯ್‌ ಶಿವರಾಮ್‌ ಹೇಳಿದ್ದಾರೆ.

ಐಟಿ ಕಂಪನಿಗಳಲ್ಲಿ ನೇಮಕಾತಿ ಚುರುಕು: ಸಾಫ್ಟ್‌ವೇರ್‌ ತಂತ್ರಜ್ಞರಿಗೆ ಭಾರೀ ಬೇಡಿಕೆ!
ಐಟಿ ನೇಮಕಾತಿ ಸಂಸ್ಥೆ ಟೀಮ್‌ ಲೀಸ್‌ನ ಡಿಜಿಟಲ್‌ ಎಂಪ್ಲಾಯ್‌ಮೆಂಟ್‌ ಔಟ್‌ ಲುಕ್‌ ವರದಿಯ ಪ್ರಕಾರ ದೇಶದಲ್ಲಿ ಐಟಿ – ಬಿಪಿಎಂ ಉದ್ಯಮದಲ್ಲಿ ಡಿಜಿಟಲ್‌ ಕೌಶಲಗಳಿಗೆ ಬೇಡಿಕೆ ಹೆಚ್ಚಿರಲಿದೆ. ‘ಕೋವಿಡ್‌ – 19 ಸಾಂಕ್ರಾಮಿಕದ ಬಳಿಕ ಡಿಜಿಟಲ್‌ ತಂತ್ರಜ್ಞಾನ ಪರಿಣಿತರಿಗೆ ಬೇಡಿಕೆ ಅತ್ಯಧಿಕವಾಗಿದೆ. ಈ ಟ್ರೆಂಡ್‌ ಕೇವಲ ಐಟಿ ಕಂಪನಿಗಳಿಗೆ ಮಾತ್ರ ಸೀಮಿತವಾಗಿಲ್ಲ. ಬಹುತೇಕ ಉದ್ಯಮಗಳು ಈಗ ಒಂದಲ್ಲ ಒಂದು ರೀತಿಯಲ್ಲಿ ತಂತ್ರಜ್ಞಾನವನ್ನು ಅವಲಂಬಿಸಿವೆ’ ಎಂದು ಟಿಮ್‌ ಲೀಸ್‌ ಡಿಜಿಟಲ್‌ನ ಬಿಸ್ನೆಸ್‌ ಹೆಡ್‌ ಶಿವ ಪ್ರಸಾದ್‌ ನಂದೂರಿ ಹೇಳಿದ್ದಾರೆ.

ವರ್ಕ್ ಫ್ರಮ್‌ ಹೋಮ್‌ ವೇತನದ ಸ್ವರೂಪ ಬದಲು? ಎಚ್‌ಆರ್‌ಎ ಕಡಿತ ಸಾಧ್ಯತೆ



Read more