Karnataka news paper

ಹೊಸ ವರ್ಷದಂದು ಗೆಳತಿ ಅದಿತಿ ಜತೆ ಹಸೆಮಣೆ ಏರಿದ ನಟ ಮೋಹಿತ್ ರೈನಾ


ಮುಂಬೈ: ಹಿಂದಿ ಕಿರುತೆರೆಯ ‘ದೇವೊ ಕೇ ದೇವ್‌ ಮಹಾದೇವ್‌’, ’ಮುಂಬೈ ಡೈರೀಸ್ 26/11‘ ಧಾರಾವಾಹಿ ಖ್ಯಾತಿಯ ನಟ ಮೋಹಿತ್‌ ರೈನಾ ಅವರು ಗೆಳತಿ ಅದಿತಿ ಅವರೊಂದಿಗೆ ಹೊಸ ವರ್ಷದ ದಿನದಂದು (ಶನಿವಾರ) ಸಪ್ತಪದಿ ತುಳಿದಿದ್ದಾರೆ.

ಮೋಹಿತ್‌ ರೈನಾ, ಮದುವೆ ಸಮಾರಂಭದ ಫೋಟೊಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಎರಡು ಕುಟುಂಬದವರು, ಸ್ನೇಹಿತರ ಸಮ್ಮುಖದಲ್ಲಿ ಸಾಂಪ್ರದಾಯಿಕವಾಗಿ ವಿವಾಹವಾಗಿರುವುದನ್ನು ಕಾಣಬಹುದಾಗಿದೆ.

‘ಪ್ರೀತಿ ಇರುವ ಕಡೆ ಅಡೆತಡೆಗಳು ಇರುವುದಿಲ್ಲ. ಅಡೆತಡೆಗಳಿದ್ದರೂ ಬೇಲಿಯನ್ನು ದಾಟುತ್ತೇವೆ. ಗುರಿಯನ್ನು ತಲುಪಲು ತಡೆಗೋಡೆಗಳನ್ನು ಭೇದಿಸುವ ಭರವಸೆಯಿಂದ ಮುನ್ನುಗ್ಗುತ್ತೇವೆ. ಈ ಭರವಸೆಯೊಂದಿಗೆ ನಾವು ತಂದೆ –ತಾಯಿ ಆಶೀರ್ವಾದದಿಂದ ಒಂದಾಗಿದ್ದೇವೆ. ನಮ್ಮಿಬ್ಬರ ಈ ಹೊಸ ಪ್ರಯಾಣಕ್ಕೆ ನಿಮ್ಮೆಲ್ಲರ ಪ್ರೀತಿ ಹಾಗೂ ಆರ್ಶೀವಾದ ಬೇಕಾಗಿದೆ’ ಎಂದು ಬರೆದುಕೊಂಡಿದ್ದಾರೆ.

ಬಾಲಿವುಡ್‌ ನಿರ್ಮಾಪಕ ಕರಣ್‌ ಜೋಹರ್‌ ಸೇರಿದಂತೆ ಅನೇಕರು ನವಜೋಡಿಗೆ ಶುಭ ಹಾರೈಸಿದ್ದಾರೆ.

ಇದನ್ನೂ ಓದಿ… ಅಮ್ಮನಾಗುವ ಖುಷಿಯಲ್ಲಿ ನಟಿ ಕಾಜಲ್‌ ಅಗರ್‌ವಾಲ್‌



Read More…Source link