Karnataka news paper

ರಾಯಚೂರಿನ ಶಾಲೆಯಲ್ಲಿ ನ್ಯೂ ಇಯರ್​ಗೆ ಎಣ್ಣೆ ಪಾರ್ಟಿ, ಮಾಂಸದೂಟ : ವಸ್ತುಗಳನ್ನು ಚೆಲ್ಲಾಡಿ ಅಟ್ಟಹಾಸ


ಹೈಲೈಟ್ಸ್‌:

  • ಶಾಲೆಯಲ್ಲಿಎಣ್ಣೆ ಪಾರ್ಟಿ, ದಾಖಲೆ ಕಿತ್ತಾಟ
  • ಜ್ಞಾನ ದೇಗುಲವನ್ನೂ ಬಿಡದ ಕಿಡಿಗೇಡಿಗಳು
  • ರಬ್ಬಣಕಲ್‌ ಗ್ರಾಮದ ಶಾಲೆಯಲ್ಲಿ ಘಟನೆ

ಮಾನ್ವಿ : ಹೊಸ ವರ್ಷಾಚರಣೆಗೆ ಶುಕ್ರವಾರ ರಾತ್ರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ನುಗ್ಗಿದ ಕೆಲ ಕಿಡಿಗೇಡಿಗಳು ಎಣ್ಣೆ ಪಾರ್ಟಿ ಮಾಡಿ ನಂತರ ಮದ್ಯದ ಅಮಲಿನಲ್ಲಿ ಶಾಲೆ ದಾಖಲೆ ಕಿತ್ತಾಡಿರುವ ಘಟನೆ ತಾಲೂಕಿನ ರಬ್ಬಣಕಲ್‌ ಗ್ರಾಮದಲ್ಲಿ ಶನಿವಾರ ತಡ ರಾತ್ರಿ ನಡೆದಿದೆ.

ಮದ್ಯ, ಮಾಂಸದೊಂದಿಗೆ ಶಾಲೆ ಆವರಣದಲ್ಲಿ ಹೊಸ ವರ್ಷಾಚರಣೆ ಮಾಡಿರುವ ಕಿಡಿಗೇಡಿಗಳು ಕುಡಿದ ಮತ್ತಿನಲ್ಲಿ ತಿನ್ನಲು ಪದಾರ್ಥ ಹುಡುಕಿದ್ದಾರೆ. ಏನು ಸಿಗದಿದ್ದಾಗ ಬಿಸಿಯೂಟ ಕೋಣೆಯ ಬೀಗ ಮುರಿದು ಮೊಟ್ಟೆಗಳನ್ನು ಹುಡುಕಿದ್ದಾರೆ. ಗ್ಯಾಸ್‌ ಬಳಸಿ ಆಮ್ಲೇಟ್‌ ಮಾಡಿಕೊಳ್ಳಲು ಯತ್ನ್ನಿಸಿದ್ದಾರೆ ಎನ್ನಲಾಗುತ್ತಿದೆ.

ಕಚೇರಿ ಬೀಗ ಮುರಿದು ದಾಖಲೆಗಳನ್ನು ಚೆಲ್ಲಾಪಿಲ್ಲಿ ಮಾಡಿದ್ದಾರೆ. ಟೇಬಲ್‌ಗಳ ಮೇಲೆ ಮದ್ಯದ ಬಾಟಲಿಗಳನ್ನು ಇಟ್ಟಿದ್ದಾರೆ. ಎಲ್ಲೆಂದರಲ್ಲೆ ಮಾಂಸ ಎಸೆದಿದ್ದಾರೆ. ನೀರಿನ ಪೌಚ್‌ಗಳು ಬಿದ್ದಿವೆ. ಅಡುಗೆ ಕೋಣೆಯಲ್ಲಿನ ಮೊಟ್ಟೆಗಳನ್ನು ಹೊಡೆದಿದ್ದಾರೆ. ಸಕ್ಕರೆ, ಹಾಲಿನ ಪುಡಿ, ಅಡುಗೆ ಎಣ್ಣೆ ಪದಾರ್ಥ ಕಿತ್ತಾಡಿ ಎಸೆದಿರುವುದು ನಡೆದಿದೆ. ಮುಖ್ಯ ಶಿಕ್ಷಕಿ ಪ್ರೇಮಲತಾ ಅವರು ಪಟ್ಟಣದ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

‘ಪಾರ್ಟಿ ಮೂಡ್‌’ಗೆ ಜಾರಿದ ಕರ್ನಾಟಕ: ರಾಜ್ಯದಲ್ಲಿ ಮದ್ಯ ಮಾರಾಟ ಗಣನೀಯ ಏರಿಕೆ



Read more