Karnataka news paper

3ನೇ ಅಲೆ ಆತಂಕ: ‘ಆರ್‌ಆರ್‌ಆರ್‌’ ಸಿನಿಮಾ ಬಿಡುಗಡೆ ಮುಂದೂಡಿಕೆ, ಏನೇ ಆಗಲಿ ಬಂದೇ ಬರ್ತೀವಿ ಅಂತಿದೆ ‘ರಾಧೆ ಶ್ಯಾಮ್’


Online Desk

ದೇಶದಲ್ಲಿ ದಿಢೀರ್ ಅಂತಾ ಕೊರೋನಾ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದ್ದು ಮೂರನೇ ಅಲೆಯ ಆತಂಕ ಶುರುವಾಗಿದೆ. ಇದರಿಂದಾಗಿ ಮತ್ತೆ ಚಿತ್ರೋದ್ಯಮ ಆತಂಕಕ್ಕೆ ಒಳಗಾಗಿದೆ. ಇನ್ನು ಬೃಹತ್ ಬಜೆಟ್ ಸಿನಿಮಾಗಳೇ ಬಿಡುಗಡೆಯನ್ನು ಮುಂದೂಡಲಾಗುತ್ತಿವೆ.

ಅನೇಕ ಸಿನಿಮಾಗಳು ಬಿಡುಗಡೆ​ ದಿನಾಂಕವನ್ನು ಮುಂದೂಡಿಕೊಳ್ಳುತ್ತಿವೆ. ಅದರ ಮೊದಲ ಹಂತವಾಗಿ ‘ಆರ್​ಆರ್​ಆರ್​’ ಚಿತ್ರದ ಬಿಡುಗಡೆ ದಿನಾಂಕ​ ಮುಂದೂಡಿಕೆ ಆಗಿದೆ. ಅದನ್ನು ಅಧಿಕೃತವಾಗಿಯೇ ಚಿತ್ರತಂಡ ಘೋಷಿಸಿದೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಜ.7ರಂದು ಈ ಚಿತ್ರ ಬಿಡುಗಡೆ ಆಗಬೇಕಿತ್ತು. 

ಆರ್ಆರ್ಆರ್ ಬೃಹತ್ ಬಜೆಟ್ ನ ಚಿತ್ರವಾಗಿದ್ದು ರಾಮ್ ಚರಣ್, ಜ್ಯೂನಿಯರ್ ಎನ್ ಟಿಆರ್, ಅಜಯ್ ದೇವಗನ್, ಆಲಿಯಾ ಭಟ್ ನಡೆಸಿದ್ದಾರೆ. 

ಚಿತ್ರ ಮುಂದೂಡಿಕೆ ಕುರಿತ ಹೇಳಿಕೆಗಳ ಬೆನ್ನಲ್ಲೇ ರಾಧೆಶ್ಯಾಮ್ ಸಿನಿಮಾ ತಂಡ ಇಂದು ಚಿತ್ರದ ಪೋಸ್ಟರ್ ಬಿಡುಗಡೆಗೊಳಿಸಿದೆ. ಇದರಲ್ಲಿ ಸಿನಿಮಾ ಬಿಡುಗಡೆಯ ದಿನಾಂಕ ಜನವರಿ 14 ಎಂದು ಪ್ರಕಟಿಸುವ ಮೂಲಕ ಊಹಾಪೋಹಗಳಿಗೆ ತೆರೆ ಎಳೆಯಲಾಗಿದೆ.

ರಾಧೆಶ್ಯಾಮ್ ಬಹುಭಾಷ ಚಿತ್ರವಾಗಿದ್ದೂ ಪ್ರಭಾಸ್ ನಾಯಕ ನಟನಾಗಿ ಅಭಿನಯಿಸುತ್ತಿದ್ದಾರೆ. ನಾಯಕಿಯಾಗಿ ಪೂಜಾ ಹೆಗ್ಡೆ ತೆರೆ ಹಂಚಿಕೊಳ್ಳಲಿದ್ದಾರೆ.





Read more…