Source : UNI
ನವದೆಹಲಿ: ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರ ಎರಡನೇ ಪುತ್ರ, ಬಿಹಾರ ವಿಧಾನಸಭೆ ಪ್ರತಿಪಕ್ಷ ನಾಯಕ ತೇಜಸ್ವಿ ಯಾದವ್ ಅವರು ತಮ್ಮ ಬಹುದಿನಗಳ ಕಾಲೇಜ್ ಫ್ರೆಂಡ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ.
ವರದಿಗಳ ಪ್ರಕಾರ, ತೇಜಸ್ವಿ ಯಾದವ್ ಹರಿಯಾಣ ಮೂಲದ ತಮ್ಮ ಬಾಲ್ಯದ ಗೆಳತಿ ರಾಜಶ್ರೀ, ಎಕೆಎ ರೇಚೆಲ್ ಅವರನ್ನು ಇಂದು ನವದೆಹಲಿಯಲ್ಲಿ ವಿವಾಹವಾಗಿದ್ದಾರೆ. ರಾಜಶ್ರೀ ಮತ್ತು ತೇಜಸ್ವಿ ಇಬ್ಬರೂ ದೆಹಲಿಯ ಆರ್‍ಕೆ ಪುರಂನಲ್ಲಿರುವ ದೆಹಲಿ ಪಬ್ಲಿಕ್ ಸ್ಕೂಲ್‍ನಲ್ಲಿ ಒಂದೇ ತರಗತಿಯಲ್ಲಿ ಓದುತ್ತಿದ್ದರು ಮತ್ತು ಈಗ 6-7 ವರ್ಷಗಳಿಂದ ಸ್ನೇಹಿತರಾಗಿದ್ದರು ಎಂದು ತಿಳಿದು ಬಂದಿದೆ.
ಗುರುವಾರ ಬೆಳಗ್ಗೆಯೇ ನಿಶ್ಚಿತಾರ್ಥ ಮಾಡಿಕೊಂಡ ಜೋಡಿ ಮದುವೆ ವಿಚಾರದಲ್ಲಿ ಗೌಪ್ಯತೆ ಕಾಪಾಡಿಕೊಂಡಿತ್ತು. ಆದರೆ ರಾಜಶ್ರೀ ಸಹೋದರಿ ರೋಹಿಣಿ ಆಚಾರ್ಯ ತಮ್ಮ ಟ್ವಿಟ್ ನಲ್ಲಿ ವಿವಾಹದ ಫೋಟೋ ಹಂಚಿಕೊಂಡು ಶುಭಾಶಯ ಕೋರಿದಾಗ ಮದುವೆ ವಿಚಾರ ಬಹಿರಂಗವಾಗಿದೆ.
ನಾನು ನಿನ್ನ ಮದುವೆಯಲ್ಲಿ ಇಲ್ಲ. ಆದರೆ ನನ್ನ ಆಶೀರ್ವಾದ ನಿಮ್ಮಿಬ್ಬರ ಮೇಲಿದೆ. ಟುಟು ಮತ್ತು ರಾಚೆಲ್‍ಗೆ ಮದುವೆಯ ಶುಭಾಶಯಗಳು ನಿಮ್ಮಿಬ್ಬರ ಜೀವನ ಉಸಿರಿರುವವರೆಗೂ ಸಂತೋಷವಾಗಿರಲೆಂದು ಆಶಿಸುತ್ತೇನೆ ಎಂದು ಟ್ವಿಟ್ ಮೂಲಕ ಶುಭಾಶಯ ತಿಳಿಸಿದ್ದಾರೆ.
ಆರ್‌ಜೆಡಿ ಮುಖ್ಯಸ್ಥ ಲಾಲು ಯಾದವ್, ಅವರ ಹಿರಿಯ ಪುತ್ರ ತೇಜ್ ಪ್ರತಾಪ್ ಯಾದವ್ ಜೊತೆ ಎಸ್‍ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಮದುವೆಯಲ್ಲಿ ಭಾಗಿಯಾಗಿದ್ದಾರು.