Karnataka news paper

2021ಕ್ಕೆ ಗುಡ್ ಬೈ ಹೇಳಿ 2022 ವೆಲ್ ಕಮ್ ಮಾಡಿಕೊಂಡ ಜನತೆ! ಹೊಸ ವರ್ಷಾಚರಣೆಗೆ ಅಡ್ಡಿಯಾದ ಓಮಿಕ್ರಾನ್


Online Desk

ಬೆಂಗಳೂರು: ಕೊರೋನಾ ರೂಪಾಂತರಿ ಓಮಿಕ್ರಾನ್ ಮಧ್ಯೆ 2021 ನೇ ವರ್ಷಕ್ಕೆ ವಿದಾಯ ಹೇಳಿ, ಹೊಸ ವರ್ಷವನ್ನು ಜನತೆ ಬರಮಾಡಿಕೊಂಡಿದ್ದಾರೆ. ರಾತ್ರಿ ಕರ್ಫ್ಯೂ ಹೊಸ ವರ್ಷಾಚರಣೆಗೆ ಅಡ್ಡಿ ತಂದಿತು. ಆದರೂ ಕೆಲವೆಡೆ 12 ಗಂಟೆಯಾಗುತ್ತಿದ್ದಂತೆ ಪಟಾಕಿ ಸಿಡಿಸಿ, ಸಿಹಿ ಹಂಚುವ ಮೂಲಕ ನೂತನ ವರ್ಷವನ್ನು ಬರಮಾಡಿಕೊಳ್ಳಲಾಯಿತು.

ರಾತ್ರಿ ಕರ್ಫ್ಯೂ ಹಿನ್ನೆಲೆಯಲ್ಲಿ ರಾಜಧಾನಿ ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಶಿವಮೊಗ್ಗ ಸೇರಿದಂತೆ ರಾಜ್ಯದ ಮತ್ತಿತರ ಕಡೆಗಳಲ್ಲಿ ಪೊಲೀಸರು ಪಬ್, ಬಾರ್ ಅಂಡ್ ರೆಸ್ಟೋರೆಂಟ್ ಮತ್ತಿತರ ಮನರಂಜನಾತ್ಮಕ ಕೇಂದ್ರಗಳನ್ನು ಮುಚ್ಚಿಸಿ, ಜನ ದಟ್ಟಣೆಯಾಗದಂತೆ ಬಿಗಿ ಕ್ರಮ ಕೈಗೊಂಡರು.

 ಹೊಸ ವರ್ಷಾಚರಣೆ ಬಂತೆಂದರೆ ಸಾಕು ಜನರಿಂದ  ಗಿಜುಗುಡುತ್ತಿದ್ದ ಬೆಂಗಳೂರಿನ ಎಂಜಿ ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್ ಮತ್ತಿತರ ಕಡೆಗಳಲ್ಲಿ ರಸ್ತೆಗಿಳಿದ ಪೊಲೀಸರು, ಹೊಸ ವರ್ಷಚರಣೆಗೆ ಬಂದ ಯುವಜನರನ್ನು ಮನೆಗೆ ಕಳುಹಿಸಿದರು. ಗೃಹ ಸಚಿವ ಆರಗ ಜ್ಞಾನೇಂದ್ರ ಖುದ್ದು ರೋಡ್ ಗಿಳಿದಿದ್ದರು. 

ಹುಬ್ಬಳ್ಳಿ ರಸ್ತೆ ತುಂಬೆಲ್ಲಾ ಪೊಲೀಸರೇ ಕಂಡುಬಂದರು. ಗಸ್ತು ತಿರುಗುವ ಮೂಲಕ ಜನರು ಗುಂಪು ಸೇರದಂತೆ ನೋಡಿಕೊಂಡರು. ರಸ್ತೆಗಳಲ್ಲಿ ಬ್ಯಾರಿಕೇಡ್ ಹಾಕುವ ಮೂಲಕ ಜನರ ಅನವಶ್ಯಕ ಓಡಾಟಕ್ಕೆ ತಡೆ ಹಾಕಿದರು.

ಶಿವಮೊಗ್ಗದಲ್ಲಿಯೂ ರಾತ್ರಿ 10 ಗಂಟೆಯ ನಂತರ ಪೊಲೀಸರು, ಪಬ್, ಅಂಗಡಿ, ಮುಗ್ಗಟ್ಟುಗಳನ್ನು ಮುಚ್ಚಿಸಲಾಯಿತು. ರಾತ್ರಿ ಕರ್ಫ್ಯೂ ನಿಯಮ ಉಲ್ಲಂಘನೆಯಾಗದಂತೆ ನಿಗಾ ವಹಿಸಿದರು.





Read more