ಜೆರುಸಲೇಂ: ‘ಹಮಾಸ್’ ಆಡಳಿತವಿರುವ ಗಾಜಾ ಪಟ್ಟಿ ಕಡೆಯಿಂದ ಶನಿವಾರ ರಾಕೆಟ್‌ಗಳು ಉಡಾವಣೆಯಾಗಿದ್ದು, ಅವು ಮಧ್ಯ ಇಸ್ರೇಲ್‌ನ ಮೆಡಿಟರೇನಿಯನ್ ಸಮುದ್ರದಲ್ಲಿ ಬಿದ್ದಿವೆ ಎಂದು ಇಸ್ರೇಲ್ ಮಿಲಿಟರಿ ತಿಳಿಸಿದೆ.
ಇಸ್ರೇಲ್ ಅನ್ನು ಗುರಿಯಾಗಿಸಿ ಈ ರಾಕೆಟ್‌ಗಳನ್ನು ಉಡಾಯಿಸಲಾಗಿತ್ತೇ ಎಂಬುದು ತಕ್ಷಣಕ್ಕೆ ಸ್ಪಷ್ಟವಾಗಿಲ್ಲ. ಆದರೆ ಇದರಿಂದ ಯಾವುದೇ ಸಾವು– ನೋವುಗಳು ಸಂಭವಿಸಿಲ್ಲ ಎಂದು ವರದಿಯಾಗಿದೆ. ಗಾಜಾ ಮೂಲದ ಉಗ್ರಗಾಮಿ ಗುಂಪುಗಳು ಸಮುದ್ರದ
ಕಡೆಗೆ ಈ ರೀತಿಯ ಕ್ಷಿಪಣಿ ಪರೀಕ್ಷೆಗಳನ್ನು ಆಗಾಗ್ಗೆ ನಡೆಸುತ್ತಿರುತ್ತವೆ.